ಆರ್ಕೆಸ್ಟ್ರಾ ಡ್ಯಾನ್ಸರ್​ ಮೇಲೆ ಚಿಗುರಿದ ಪ್ರೀತಿ, ವೇದಿಕೆಯಲ್ಲೇ ಸಿಂಧೂರವಿಟ್ಟು ಮದುವೆಯಾದ ವ್ಯಕ್ತಿ

ಯುವಕನೊಬ್ಬನಿಗೆ ಆಕೆಸ್ಟ್ರಾ ಡ್ಯಾನ್ಸರ್​ ಮೇಲೆ ಪ್ರೀತಿ ಚಿಗುರಿತ್ತು, ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆಗೆ ತೆರಳಿ ಆಕೆಯ ಹಣೆಗೆ ಸಿಂಧೂರವಿಟ್ಟು ಅಲ್ಲೇ ಮದುವೆಯಾಗಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಆತ ನೃತ್ಯ ಮಾಡುತ್ತಿದ್ದ ಯುವತಿ ಬಳಿ ಬಂದು ಹಣೆಗೆ ಸಿಂಧೂರವಿಟ್ಟು, ಆತನ ಕೈಯಲ್ಲಿರುವ ಬಿಳಿ ಬಟ್ಟೆಯೊಂದನ್ನು ಘುಂಗಟ್​ ಆಗಿ ಮಾಡಿಕೊಂಡು ಆಕೆಯನ್ನು ಅಪ್ಪಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆರ್ಕೆಸ್ಟ್ರಾ ಡ್ಯಾನ್ಸರ್​ ಮೇಲೆ ಚಿಗುರಿದ ಪ್ರೀತಿ, ವೇದಿಕೆಯಲ್ಲೇ ಸಿಂಧೂರವಿಟ್ಟು ಮದುವೆಯಾದ ವ್ಯಕ್ತಿ
ಮದುವೆ
Image Credit source: Free Press Journal

Updated on: Feb 14, 2025 | 9:39 AM

ಯುವಕನೊಬ್ಬನಿಗೆ ಆಕೆಸ್ಟ್ರಾ ಡ್ಯಾನ್ಸರ್​ ಮೇಲೆ ಪ್ರೀತಿ ಚಿಗುರಿತ್ತು, ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆಗೆ ತೆರಳಿ ಆಕೆಯ ಹಣೆಗೆ ಸಿಂಧೂರವಿಟ್ಟು ಅಲ್ಲೇ ಮದುವೆಯಾಗಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಆತ ನೃತ್ಯ ಮಾಡುತ್ತಿದ್ದ ಯುವತಿ ಬಳಿ ಬಂದು ಹಣೆಗೆ ಸಿಂಧೂರವಿಟ್ಟು, ಆತನ ಕೈಯಲ್ಲಿರುವ ಬಿಳಿ ಬಟ್ಟೆಯೊಂದನ್ನು ಘುಂಗಟ್​ ಆಗಿ ಮಾಡಿಕೊಂಡು ಆಕೆಯನ್ನು ಅಪ್ಪಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆ ವಿಡಿಯೋದಲ್ಲಿ ಹುಡುಗಿಯ ಪ್ರತಿಕ್ರಿಯೆಯೂ ದಾಖಲಾಗಿದೆ. ಆ ವ್ಯಕ್ತಿ ಅವಳನ್ನು ಪ್ರೀತಿಸಿ ‘ಸಿಂಧೂರ’ ಹಚ್ಚಿ ಅವಳ ತಲೆಯನ್ನು ‘ಘುಂಗಟ್’ ಅಡಿಯಲ್ಲಿ ಮುಚ್ಚುವ ಮೂಲಕ ಮದುವೆಯಾದ ನಂತರ, ಆ ಘಟನೆಗೆ ಅವಳ ಪ್ರತಿಕ್ರಿಯೆಯನ್ನು ಕ್ಯಾಮೆರಾ ಸೆರೆಹಿಡಿಯಿತು. ಆ ಹುಡುಗಿ ನಡೆದ ಘಟನೆಯಿಂದ ಸಂತೋಷಗೊಂಡಂತೆ ಕಾಣುತ್ತಿದ್ದಳು. ವೀಡಿಯೊದಲ್ಲಿ ಅವಳು ನಗುತ್ತಿರುವ ಮತ್ತು ನಾಚುತ್ತಿರುವುದನ್ನು ತೋರಿಸಲಾಗಿದೆ.

ಈ ವಿಡಿಯೋ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ, ನೆಟ್ಟಿಗರು ನವವಿವಾಹಿತ ದಂಪತಿಗೆ ಶುಭ ಹಾರೈಸಿದರು. ಅವರು ಡ್ಯಾನ್ಸರ್ ಮತ್ತು ಅವಳನ್ನು ಮದುವೆಯಾದ ವ್ಯಕ್ತಿಗೆ ಆಶೀರ್ವದಿಸಿದರು.

ಮತ್ತಷ್ಟು ಓದಿ: Viral: ಭಾವಿ ಮಾವ ಕೊಟ್ಟ ಉಡುಗೊರೆ ಬಗ್ಗೆ ವ್ಯಂಗ್ಯವಾಡಿದ ಯುಪಿಎಸ್‌ಸಿ ಆಕಾಂಕ್ಷಿ; ರದ್ದಾದ ಮದುವೆ

ಆರ್ಕೆಸ್ಟ್ರಾ ಡ್ಯಾನ್ಸ್​ ಮಾಡುವ ಹುಡುಗಿಯರನ್ನು ಸಾಮಾನ್ಯವಾಗಿ ಜನರು, ವಿಶೇಷವಾಗಿ ಪುರುಷರು ತಪ್ಪು ದೃಷ್ಟಿಯಿಂದ ನೋಡುತ್ತಾರೆ, ಆದರೆ ಈ ಘಟನೆಯು ಜೀವನೋಪಾಯಕ್ಕಾಗಿ ಮಹಿಳೆಯರು ಏನೇ ಮಾಡಿದರೂ ಅವರನ್ನು ಗೌರವಿಸಲಾಗುತ್ತದೆ ಎಂಬುದನ್ನು ಒತ್ತಿ ಹೇಳುತ್ತದೆ. ಆದರೆ ಈ ಮದುವೆಯನ್ನು ಆಕೆ ಒಪ್ಪಿಕೊಂಡಿದ್ದಾಳೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ