Viral: ಭಾವಿ ಮಾವ ಕೊಟ್ಟ ಉಡುಗೊರೆ ಬಗ್ಗೆ ವ್ಯಂಗ್ಯವಾಡಿದ ಯುಪಿಎಸ್‌ಸಿ ಆಕಾಂಕ್ಷಿ; ರದ್ದಾದ ಮದುವೆ
ಇತ್ತೀಚಿಗಷ್ಟೇ ವರನ ಸಿಬಿಲ್ ಸ್ಕೋರ್ ಕಡಿಮೆಯಿದೆ ಎಂಬ ಕಾರಣಕ್ಕೆ ವಧುವಿನ ಕುಟುಂಬಸ್ಥರು ಅಗಬೇಕಿದ್ದ ಮದುವೆಯನ್ನು ರದ್ದುಗೊಳಿಸಿದಂತಹ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಇದೀಗ ಇಲ್ಲೊಂದು ಮದುವೆ ವರನ ದುರಾಸೆಯ ಕಾರಣದಿಂದ ಮುರಿದು ಬಿದ್ದಿದೆ. ಭಾವಿ ಮಾವ ಪ್ರೀತಿಯಿಂದ ಕೊಟ್ಟ ಉಡುಗೊರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೋಪದಲ್ಲಿ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಕುರಿತ ಪೋಸ್ಟ್ ಒಂದು ಇದೀಗ ಭಾರೀ ವೈರಲ್ ಆಗುತ್ತಿದೆ.

ಇತ್ತೀಚಿಗೆ ಸಣ್ಣಪುಟ್ಟ ಕಾರಣಗಳಿಗೆ ಮದುವೆಗಳು ನಿಂತು ಹೋಗುವಂತಹ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ವರನ ಸಿಬಿಲ್ ಸ್ಕೋರ್ ಕಡಿಮೆಯಿದೆ ಎಂಬ ಕಾರಣಕ್ಕೆ ವಧುವಿನ ಕಡೆಯವರು ಆಗಬೇಕಿದ್ದ ಮದುವೆಯನ್ನೇ ಕ್ಯಾನ್ಸಲ್ ಮಾಡಿದಂತಹ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಯುಪಿಎಸ್‌ಸಿ ಆಕಾಂಕ್ಷಿಯ ದುರಾಸೆಗೆ ಮದುವೆ ಮುರಿದು ಬಿದ್ದಿದೆ. ಹೌದು ಆತ ಭಾವಿ ಮಾವ ಪ್ರೀತಿಯಿಂದ ಕೊಟ್ಟ ಉಡುಗೊರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೋಪದಲ್ಲಿ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಕುರಿತ ಪೋಸ್ಟ್ ಒಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ವೃತ್ತಿಯಲ್ಲಿ ಶಿಕ್ಷಕ ಹಾಗೂ ಯುಪಿಎಸ್‌ಸಿ ಆಕಾಂಕ್ಷಿಯಾಗಿರುವ ವರ ತನ್ನ ಭಾವಿ ಮಾವ ಪ್ರೀತಿಯಿಂದ ನೀಡಿದ ಉಡುಗೊರೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ವಧುವಿಗೆ ಮೆಸೇಜ್ ಮಾಡಿ ಮಾವ ಕೊಟ್ಟ ಉಡುಗೊರೆಯ ಬಗ್ಗೆ ವ್ಯಂಗ್ಯವಾಡಿದ್ದು, ಬೇಸರದಲ್ಲಿ ವಧು ಮದುವೆಯನ್ನೇ ಮುರಿದಿದ್ದಾಳೆ. ಇವರಿಬ್ಬರ ನಡುವಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಫೋಟೋ ಇದೀಗ ವೈರಲ್ ಆಗಿದೆ.
ಇಂತಹ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವ ಅಗತ್ಯವೇನಿತ್ತು? ನೀವು ಇಂತಹ ವಸ್ತುಗಳನ್ನು ಕಳುಹಿಸದಿದ್ದರೆಯೇ ಚೆನ್ನಾಗಿರುತ್ತಿತ್ತು, ನನ್ನ ಆಯ್ಕೆಯ ಪ್ರಕಾರ ನಾನೇ ಉಡುಗೊರೆಯನ್ನು ಆಯ್ಕೆ ಮಾಡ್ತಿದ್ದೆ ಎಂದು ವರ ಮೆಸೇಜ್ ಮಾಡಿ ಹೇಳಿದ್ದಾನೆ. ವರನ ಈ ಅವಮಾನಕರ ಮಾತುಗಳಿಂದ ಬೇಸರಗೊಂಡ ವಧು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾಳೆ.
Odd_Chocolate_4257 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, “ನನ್ನ ಸೋದರ ಸಂಬಂಧಿಯ ಮದುವೆಯ 10 ದಿನಗಳ ಮೊದಲು ನಡೆದ ಘಟನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್ ಫೋಟೋದಲ್ಲಿ ವರ ವಧುವಿನ ತಂದೆ ಕೊಟ್ಟ ಉಡುಗೊರೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದೃಶ್ಯ ಕಾಣಬಹುದು.
ಇದನ್ನೂ ಓದಿ: ಗಣಿತ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ ಮಾಡಿದ ಸ್ಕೂಲ್ ಪ್ರಿನ್ಸಿಪಾಲ್; ವಿಡಿಯೋ ವೈರಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮದುವೆ ರದ್ದುಗೊಳಿಸುವುದು ಮಾತ್ರವಲ್ಲ ವರನ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವನೆಂಥಾ ದುರಾಸೆಯ ವರʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಮದುವೆ ಕ್ಯಾನ್ಸಲ್ ಆಗಿದ್ದೇ ಒಳ್ಳೆದಾಯಿತುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




