AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಕೋಟಿ ರೂ.ಗಳಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಭಾರತ ಮೂಲದ ಗೋವು

ಅಬ್ಬಬ್ಬಾ ಅಂದ್ರೆ ಹಸುಗಳನ್ನು 20 ರಿಂದ 30 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಆದ್ರೆ ಇಲ್ಲೊಂದು ಹಸು ಮಾತ್ರ ಬರೋಬ್ಬರಿ 40 ಕೋಟಿ ರೂ. ಗಳಿಗೆ ಮಾರಾಟವಾಗಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ಭಾರತೀಯ ಮೂಲದ ನೆಲ್ಲೂರು ತಳಿಯ ಹಸು ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಗಿನ್ನೆಸ್‌ ದಾಖಲೆಯನ್ನು ಬರೆದಿದೆ.

40 ಕೋಟಿ ರೂ.ಗಳಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಭಾರತ ಮೂಲದ ಗೋವು
ವೈರಲ್​ ಪೋಸ್ಟ್
ಮಾಲಾಶ್ರೀ ಅಂಚನ್​
| Edited By: |

Updated on: Feb 13, 2025 | 5:29 PM

Share

ಸಾಮಾನ್ಯವಾಗಿ ಹಸುಗಳನ್ನು ಅಬ್ಬಬ್ಬಾ ಅಂದ್ರೆ ಇಪ್ಪತ್ತರಿಂದ ಮೂವತ್ತು ಸಾವಿರ ಈ ರೀತಿಯ ಬೆಲೆಗಳಲ್ಲಿ ಮಾರಾಟ ಮಾಡಲಾಡುತ್ತದೆ. ಅದೇ ಒಳ್ಳೆಯ ತಳಿಹ ಹಸುಗಳು ಕೊಂಚ ದುಬಾರಿಯಾಗಿರುತ್ತವೆ. ಆದ್ರೆ ಇಲ್ಲೊಂದು ಹಸು ನೀವು ಊಹಿಸಲೂ ಸಾಧ್ಯವಾಗದ ಬೆಲೆಗೆ ಮಾರಾಟವಾಗಿದೆ. ಹೌದು ಭಾರತ ಮೂಲದ ನೆಲ್ಲೂರು ತಳಿಯ ಹಸು ಬರೋಬ್ಬರಿ 40 ಕೋಟಿ ರೂ. ಗಳಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ನೆಲ್ಲೂರು ತಳಿಯ ಹಸು ದುಬಾರಿ ದರಕ್ಕೆ ಮಾರಾಟವಾಗುವ ಮೂಲಕ ಜಗತ್ತಿನ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಯಾಟಿನಾ-19 ಎಂಬ ಹೆಸರಿನಿಂದ ಕರೆಯಲಾಗುವ ಭಾರತ ಮೂಲದ ನೆಲ್ಲೂರು ತಳಿಯ ಹಸು 4.8 ಮಿಲಿಯನ್‌ USD ಅಂದರೆ ಸುಮಾರು 40 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಈ ಮೂಲಕ 2023 ರಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂಬ ಗಿನ್ನೆಸ್‌ ದಾಖಲೆಯನ್ನು ಬರೆದಿದೆ. ಜೊತೆಗೆ ಈ ನೆಲ್ಲೂರು ತಳಿ ಹಸು ಕೌ ಚಾಂಪಿಯನ್‌ ಆಫ್‌ ದಿ ವರ್ಲ್ಡ್‌ ಸ್ಪರ್ಧೆಯಲ್ಲಿ “ಮಿಸ್‌ ಸೌತ್‌ ಅಮೇರಿಕಾ” ಪ್ರಶಸ್ತಿಯನ್ನು ಕೂಡಾ ಗೆದ್ದಿದೆ.

ಇದನ್ನೂ ಓದಿ: ಬಸ್ಸಿನೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ ಗೂಳಿ; ಎದ್ನೋ ಬಿದ್ನೋ ಅಂತ ಓಡಿ ಹೋದ ಡ್ರೈವರ್‌-ಕಂಡಕ್ಟರ್

ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸೇರಿದ ಈ ನೆಲ್ಲೂರು ತಳಿಯ ಈ ಹಸುಗಳು ಹೆಚ್ಚಿನ ತೂಕ, ಬಲವಾದ ಸ್ನಾಯುಗಳು, ಸೌಂದರ್ಯದಿಂದಾಗಿಯೇ ಬಹಳ ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ ಈ ತಳಿಯ ಹಸು ಉಷ್ಣವಲಯದ ಹವಮಾನ ಮತ್ತು ರೋಗ ನಿರೋಧಕತೆಗೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ತುಂಬಾ ದೃಢ ಮತ್ತು ಬಲಶಾಲಿಯಾಗಿರುವ ಈ ಹಸುಗಳು ಬರೋಬ್ಬರಿ 1101 ಕೆಜಿ ಯಷ್ಟು ತೂಗುತ್ತವೆ. ಭಾರತದಲ್ಲಿ ಈ ಹಸುಗಳ ಮಾನ್ಯತೆ ಕ್ಷೀಣಿಸುತ್ತಿದ್ದರೂ, ಬ್ರೆಜಿಲ್‌ ಮತ್ತು ಇನ್ನಿತರೆ ರಾಷ್ಟ್ರಗಳಲ್ಲಿ ರೈತರು ಈ ತಳಿಯ ಹಸುಗಳನ್ನೇ ಹೆಚ್ಚು ಸಾಕುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ