ಇಯರ್​ಬಡ್​ ಕದ್ದೊಯ್ದ ಹಳದಿಹಕ್ಕಿಯ ಮೇಲೆ ಈಕೆ ಕಂಪ್ಲೇಂಟ್​ ಕೊಡುವಳೇ?

| Updated By: ಶ್ರೀದೇವಿ ಕಳಸದ

Updated on: Nov 01, 2022 | 10:35 AM

Earbud : ಅಕ್ಕೋವ್, ಬಾಳೆಅಣ್ಣಲ್ಲ ಕಲ್ಲಂಗಡಿ ಆಸೆ ತೋರ್ಸಿದ್ರೂ ನಾ ನಿನ್ನ ಇಯರ್​ಬಡ್​ ಕೊಡಾಕಿಲ್ಲ. ಯಾಕ್ಹೇಳು? ನಿನ್ನಂಗೆ ನಾನು ಆನ್​ಲೈನ್ ಆರ್ಡರ್​ ಮಾಡಕ್ಕಾಗಲ್ಲ. ಅಂಗಾಗಿ ನೀನು ಇದನ್ನಾ ನಂಗೆ ಗಿಪ್ಟ್​ ಕೊಟ್ಟಿದೀಯಾ ಅನ್ಕಂಬಿಡು.

ಇಯರ್​ಬಡ್​ ಕದ್ದೊಯ್ದ ಹಳದಿಹಕ್ಕಿಯ ಮೇಲೆ ಈಕೆ ಕಂಪ್ಲೇಂಟ್​ ಕೊಡುವಳೇ?
Bird steals earbud from woman using it refuses to give it back
Follow us on

Viral Video : ಯಾರಿಗೇ ಆಗಲಿ ಹೊಸ ವಸ್ತು ಎಂದರೆ ಕುತೂಹಲವೇ. ಇದಕ್ಕೆ ಪ್ರಾಣಿ ಪಕ್ಷಿಗಳೂ ಹೊರತಾಗಿಲ್ಲ. ಈ ವಿಷಯದಲ್ಲಿ ಮಕ್ಕಳೂ ಒಂದೇ ಪ್ರಾಣಿ ಪಕ್ಷಿಗಳೂ ಒಂದೇ. ಆತನಕ ನೋಡಿರದ ವಸ್ತುಗಳನ್ನು ಮಕ್ಕಳು ನೋಡಿದಾಗ ಹೇಗೆ ಅವರಲ್ಲೊಂದು ಸಂಚಲನ ಮೂಡುತ್ತದೆಯೋ ಮತ್ತು ಅದನ್ನು ತಮ್ಮದಾಗಿಸಿಕೊಳ್ಳಲು ಹೇಗೆ ಹವಣಿಸುತ್ತಾರೋ ಹಾಗೆಯೇ ಪ್ರಾಣಿ ಪಕ್ಷಿಗಳೂ ವರ್ತಿಸುತ್ತವೆ. ಈ ಯುವತಿ ಏನೋ ಹಾಡು ಕೇಳುತ್ತ ತನ್ನ ಜಗತ್ತಿನಲ್ಲಿ ತಾನು ಮುಳುಗಿದ್ದಾಳೆ. ಆದರೆ ಈ ಹಳದಿಹಕ್ಕಿಗೆ ಅವಳ ಕಿವಿಯಲ್ಲಿರುವ ಇಯರ್​ಬಡ್​ ಮೇಲೆ ಕಣ್ಣುಬಿದ್ದಿದೆ. ಬಿಟ್ಟೀತಾ?  ​

 

ಇದನ್ನೂ ಓದಿ
ಪ್ರಯಾಣಿಕರ ವಿನಂತಿ ಮೇರೆಗೆ ಕೈಬರಹದಲ್ಲಿ ಕ್ರಿಕೆಟ್​ ಮ್ಯಾಚ್​ ಸ್ಕೋರ್ ​ಬರೆದುಕೊಟ್ಟ ಪೈಲಟ್
ಈ ಕಪ್ಪೆಗಳಾ! ಡೇರೇಹೂವ್ವು ನುಂಗಿದ್ವಾ ನೋಡವ್ವಾ ತಂಗಿ
‘ಕ್ಷಮಿಸಿ ತುಂಬಾ ರುಚಿಯಾಗಿತ್ತು, ಎಲ್ಲಾ ತಿಂದುಬಿಟ್ಟೆ’ ಡೆಲಿವರಿ ಏಜೆಂಟ್​ ಗ್ರಾಹಕರಿಗೆ ಮೆಸೇಜ್ ಮಾಡಿದಾಗ
‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ

 

ಮೊದಲು ಈ ವಿಡಿಯೋ ಕಾಣಿಸಿಕೊಂಡಿದ್ದು ಟಿಕ್​ಟಾಕ್​ನಲ್ಲಿ. ಆನಂತರ ರೆಡ್​ಇಟ್​ನಲ್ಲಿ ಮರುಹಂಚಿಕೆ ಮಾಡಿಕೊಂಡಾಗ ಹೆಚ್ಚು ಜನರ ಕಣ್ಣಿಗೆ ಬಿದ್ದಿದೆ. ಹೀಗೆ ಅವಳ ಕಿವಿಯಿಂದ ಇಯರ್​ಬಡ್​ ಕದ್ದುಕೊಂಡು ಹೋಗುವ ಹಕ್ಕಿ ಆಕಾಶದೆಡೆ ಹಾರುತ್ತದೆ. ಎಲೆಕ್ಟ್ರಿಕ್​ ತಂತಿಯ ಮೇಲೆ ಕುಳಿತುಕೊಳ್ಳುತ್ತದೆ. ನಂತರ ಮರಕ್ಕೆ ಹಾರುತ್ತದೆ. ಕೊನೆಗೆ ನೆಲದೆಡೆ ಬರುತ್ತದೆ. ಅದನ್ನು ವಾಪಾಸ್​ ಇಸಿದುಕೊಳ್ಳಲು ಈ ಯುವತಿ ಬಾಳೆಹಣ್ಣಿನ ಆಸೆ ತೋರಿಸುತ್ತಾಳೆ. ಜಾಣ ಹಕ್ಕಿಗೆ ಗೊತ್ತು, ಗಿಡಗಳಲ್ಲಿ ಬಾಳೆಹಣ್ಣು ತಿನ್ನಬಹುದು. ಆದರೆ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿ ತಾನು ಇಯರ್​ಬಡ್​ ಖರೀದಿಸಲು ಸಾಧ್ಯವಿಲ್ಲವೆಂದು. ಹಾಗಾಗಿ ಆಕೆಗೆ ಅದನ್ನು ಅದು ಮರಳಿಸುವುದಿಲ್ಲ.

ಮೂರುದಿನಗಳ ಹಿಂದೆ ಇದನ್ನು ಪೋಸ್ಟ್​ ಮಾಡಲಾಗಿದೆ. ಈತನಕ 650ಜನರು ವೋಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ.

ಇಯರ್​​ಬಡ್​ಗೆ ಬದಲಾಗಿ ಬಾಳೆಹಣ್ಣು, ಪಕ್ಷಿಗಳಿಗೆ ಬಾಳೆಹಣ್ಣು ಇಷ್ಟವಾ? ಇಲ್ಲವೆನ್ನಿಸುತ್ತೆ ಎಂದಿದ್ದಾರೆ ಒಬ್ಬರು. ಸುಮ್ಮನಿದ್ದೆರೆ ಹಕ್ಕಿ ವಾಪಸ್​ ಬರುತ್ತಿತ್ತು ತಾನಾಗಿಯೇ. ಈ ಬಾಳೆಹಣ್ಣಿನ ತಂತ್ರ ಮಾಡಿ ಎಲ್ಲ ಕೆಟ್ಟುಹೋಯಿತು ಎಂದಿದ್ದಾರೆ ಇನ್ನೊಬ್ಬರು. ಎಂಥ ನಯವಾದ ಮತ್ತ ಒಂದೇ ಬಣ್ಣದ ಗರಿಗಳನ್ನು ಹೊಂದಿದೆ ಈ ಹಕ್ಕಿ, ರಬ್ಬರ್​ನಿಂದ ಮಾಡಿದಂತೆ ಅನ್ನಿಸುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:34 am, Tue, 1 November 22