
ಉದ್ಯೋಗದಲ್ಲಿರುವವರಿಗೆ (employee) ಬಾಸ್ ನಿಂದ ರಜೆ ಕೇಳುವುದೇ ಕಷ್ಟದ ಕೆಲಸ. ಒಂದು ವೇಳೆ ರಜೆ ಕೊಟ್ಟರೂ ಆ ದಿನದ ಕೆಲಸವನ್ನು ಹಿಂದಿನ ದಿನ ಮುಗಿಸಿ ಕೊಡಲೇಬೇಕು ಎಂದು ಕಂಡೀಷನ್ ಹಾಕುವುದಿದೆ. ಕೆಲವರು ಬಾಸ್ ಬಳಿ ಎಷ್ಟೇ ರಿಕ್ವೆಸ್ಟ್ ಮಾಡಿಕೊಂಡ್ರು ರಜೆ ಸಿಗೋದೇ ಇಲ್ಲ. ಮನೆಯಲ್ಲಿ ಮದುವೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳು ಬಂದರಂತೂ ರಜೆ ಕೊಡ್ತಾರೋ ಇಲ್ವಾ ಅಂತ ಭಯದಿಂದಲೇ ಬಾಸ್ ಮುಂದೇ ಹೋಗಿ ನಿಂತು ಕೊಳ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ತನ್ನ ಅಣ್ಣನ ಮದುವೆಗೆ ಬಾಸ್ ಬಳಿ ರಜೆ ಕೇಳಿದ್ದಾರೆ. ಆದರೆ ಬಾಸ್ ರಜೆ ಕೊಡಲು ನಿರಾಕರಿಸಿದ್ದಕ್ಕೆ ಕೆಲಸ ತೊರೆಯುವ (Job Resign) ನಿರ್ಧಾರ ಕೈಗೊಂಡಿದ್ದಾರೆ. ಈ ವಿಚಾರವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
r/indianWorkplace ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ತನ್ನ ಅಣ್ಣನ ಮದುವೆಗೆ ರಜೆ ನೀಡದ ಕಾರಣ ರಾಜೀನಾಮೆ ನೀಡಬೇಕಾಯಿತು. ಆದರೆ ಇದೀಗ ಎಕ್ಸ್ಪೀರಿಯೆನ್ಸ್ ಲೆಟರ್ ನೀಡದೇ ಬೆದರಿಕೆ ಹಾಕಲಾಗುತ್ತಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನಾನು ಕಳೆದ ನಾಲ್ಕು ವರ್ಷಗಳಿಂದ ಒಂದೇ ಕಂಪನಿಗಾಗಿ ಸಾಕಷ್ಟು ದುಡಿದಿದ್ದೇನೆ. ಇದು ನನ್ನ ಮೊದಲ ಕೆಲಸ. ನನ್ನ ಸ್ವಂತ ಅಣ್ಣನ ಮದುವೆಯ ಹಿನ್ನಲೆ 15 ದಿನಗಳ ಕಾಲ ರಜೆ ಬೇಕೆಂದು ಮೂರು ತಿಂಗಳ ಮೊದಲೇ ತಿಳಿಸಿದ್ದೆ. ಆದರೆ ನೋಡೋಣ ಎಂದು ಹೇಳಿದ್ದರು. ಇದೀಗ ಮದುವೆಗೆ ಇನ್ನೇನು ಎರಡು ವಾರ ಇದೆ ಅಷ್ಟೇ, ಆದರೆ ರಜೆಯನ್ನೂ ನೀಡುವುದಿಲ್ಲ ಹೇಳಿದ್ದು ಮುಂದೇನು ಮಾಡುವುದು ಎಂದು ತೋಚದಾಯಿತು.
ನನ್ನ ನೋಟಿಸ್ ಅವಧಿ 45 ದಿನಗಳು, ಆದರೆ ನಾನು 15 ನೇ ತಾರೀಖಿನ ರಾತ್ರಿ ಪ್ರಯಾಣಿಸಬೇಕಾಗಿರುವುದರಿಂದ (ಟಿಕೆಟ್‌ಗಳು ಈಗಾಗಲೇ ಬುಕ್ ಆಗಿವೆ), ನನಗೆ ಕೆಲಸ ಬಿಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಕಂಪನಿಯು ಅರ್ಥಮಾಡಿಕೊಳ್ಳುತ್ತದೆ ಎಂದು ಆಶಿಸಿ ನಾನು ರಾಜೀನಾಮೆ ನೀಡಿದೆ. ಆದರೆ ಅವರು ನನಗೆ ಇಮೇಲ್‌ಗಳ ಮೂಲಕ ಬೆದರಿಕೆ ಹಾಕುತ್ತಿದ್ದು, ಚಿತ್ರಹಿಂಸೆ ನೀಡುತ್ತಿದ್ದಾರೆ. ನಾನು ಕನಿಷ್ಠ 2 ವಾರಗಳಾದರೂ ಕೆಲಸ ಮಾಡದಿದ್ದರೆ, ಅವರು ನನಗೆ ಎಕ್ಸ್ಪೀರಿಯೆನ್ಸ್ ಲೆಟರ್ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಅವರ ಈ ನಿಯಮಗಳನ್ನು ಪಾಲಿಸದಿದ್ದರೆ ಭವಿಷ್ಯದಲ್ಲಿ ನನಗೆ ತೊಂದರೆ ಸೃಷ್ಟಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ನಾನು ಅವರಿಗೆ ನನ್ನ ಈ ಪ್ರಯಾಣದ ಬಗ್ಗೆ ತಡವಾಗಿ ತಿಳಿಸಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಈ ಹಿಂದೆ, ಇಂತಹ ವಿಷಯಗಳನ್ನು ನಮ್ಯತೆಯಿಂದ ನಿರ್ವಹಿಸಲಾಗುತ್ತಿತ್ತು. ಈ ಬಾರಿ ಅದು ಪಕ್ಷಪಾತದಂತೆ ಭಾಸವಾಗುತ್ತಿದೆ. ಏಕೆಂದರೆ ನಾನು ಯಾವುದೇ ರಾಜಿ ಪ್ರಸ್ತಾಪಿಸಿದರೂ (12 ರವರೆಗೆ ರಿಮೋಟ್ ಕೆಲಸ, 15 ರವರೆಗೆ ಕಚೇರಿಯಲ್ಲಿ) ಅದನ್ನು ಅವರು ನಿರಾಕರಿಸಿದರು. ನಾನು ಹಿಂತಿರುಗಿದ ನಂತರ ನೋಟಿಸ್ ನೀಡುತ್ತೇನೆ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral: ಅಂದು ತಿಂಗಳಿಗೆ 18 ಸಾವಿರ ರೂ ಸಂಬಳ, ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಬೆಂಗಳೂರಿನ ಯುವಕ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಉದ್ಯೋಗಿಗೆ ಧೈರ್ಯ ತುಂಬುವಂತೆ ಮಾತಾಡಿದ್ದಾರೆ. ಒಬ್ಬ ಬಳಕೆದಾರರು ಕುಟುಂಬಕ್ಕಿಂತ ಕೆಲಸ ಮುಖ್ಯವಲ್ಲ, ಅನಿವಾರ್ಯ ಕಾರಣಕ್ಕೆ ಕೆಲಸ ತೊರೆಯಬೇಕಾಗುತ್ತದೆ ಎಂದು ಸಮಾಧಾನ ಮಾಡಿದ್ದಾರೆ. ಮತ್ತೊಬ್ಬರು ನೀವು ಅನಾರೋಗ್ಯ ರಜೆ ಕೋರಿ ಅಣ್ಣನ ಮದುವೆಗೆ ತೆರಳಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಇನೊಬ್ಬರು, ಕಳೆದ ಮೂರು ತಿಂಗಳ ಸ್ಯಾಲರಿ ಸರ್ಟಿಫಿಕೇಟ್ ನಿಮ್ಮ ಬಳಿ ಇದೆಯೇ.ಬೇರೆ ಉದ್ಯೋಗದ ಹುಡುಕಾಟದ ವೇಳೆ ನೀವು ಅದನ್ನು ಬಳಸಬಹುದು ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Thu, 11 September 25