Viral Video: ರಸ್ತೆಯಲ್ಲೇ ಕಿಸ್ ಕೊಡಬೇಕೆಂದು ಕೇಳಿದ ಹುಡುಗ; ಹುಡುಗಿ ರಿಯಾಕ್ಷನ್ ಹೇಗಿತ್ತು? ವಿಡಿಯೋ ನೋಡಿ!

| Updated By: ganapathi bhat

Updated on: Jun 26, 2021 | 11:14 PM

ಹೀಗೆ ಯುವಕ ಕೇಳಿರುವುದು ಸಾರ್ವಜನಿಕ ಸ್ಥಳದಲ್ಲಿ! ಹೌದು. ಈ ಹುಡುಗ ನಡುಬೀದಿಯಲ್ಲಿ ಹುಡುಗಿಯ ಮುಂದೆ ನಿಂತು ಹೀಗೆ ಪಟ್ಟುಹಿಡಿದಿದ್ದಾನೆ. ಕಿಸ್ ಕೊಟ್ಟಮೇಲೆಯೇ ತಾನು ಹೋಗುವುದಾಗಿ ಹೇಳಿದ್ದಾನೆ.

Viral Video: ರಸ್ತೆಯಲ್ಲೇ ಕಿಸ್ ಕೊಡಬೇಕೆಂದು ಕೇಳಿದ ಹುಡುಗ; ಹುಡುಗಿ ರಿಯಾಕ್ಷನ್ ಹೇಗಿತ್ತು? ವಿಡಿಯೋ ನೋಡಿ!
ವೈರಲ್ ವಿಡಿಯೋ
Follow us on

ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದು ಆಗುವುದಿಲ್ಲ ಎಂದು ಹೇಳುವುದು ಸಾಧ್ಯವಿಲ್ಲ. ಆದರೆ, ಇಂಥದ್ದು ಮಾತ್ರ ಆಗುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ. ಅಲ್ಲಿ ಮಗು ಅಳುವುದು, ಯುವಕ- ಯುವತಿಯರು ಕುಣಿಯುವುದು, ಪ್ರಾಣಿ ಪಕ್ಷಿಗಳು ನಲಿಯುವುದು- ಹಾಡುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಆದರೆ, ಈಗ ಇಲ್ಲಿ ಹೇಳುತ್ತಿರುವ ವೈರಲ್ ವಿಚಾರ ವಿಶೇಷವಾಗಿದೆ. ಹುಡುಗನೊಬ್ಬ ಬೀದಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಹುಡುಗಿಯ ಬಳಿ ಮುತ್ತು ಕೊಡಬೇಕೆಂದು ಕೇಳಿದ್ದಾನೆ. ಮತ್ತು ಕಿಸ್ ಪಡೆದುಕೊಂಡಿದ್ದಾನೆ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಕ ಹಾಗೂ ಯುವತಿ ಒಬ್ಬಳ ತುಂಟಾಟ ಕಂಡುಬಂದಿದೆ. ತನ್ನ ಎದುರಿಗೆ ನಿಂತಿರುವ ಯುವತಿಯ ಬಳಿಯಲ್ಲಿ ಹುಡುಗನೊಬ್ಬ ಕಿಸ್ ಕೊಡಲು ಕೇಳಿದ್ದಾನೆ. ಹುಡುಗಿಯ ಮುಂದೆ ಕಿಸ್ ಕೊಡಲೇ ಬೇಕು ಎಂದು ಪಟ್ಟು ಹಿಡಿದು ಕುಳಿತ ಹುಡುಗಿ, ಕಿಸ್ ಕೊಟ್ಟ ನಂತರವೇ ತಾನು ಇಲ್ಲಿಂದ ತೆರಳುವುದಾಗಿ ಹೇಳಿದ್ದಾನೆ.

ಹೀಗೆ ಯುವಕ ಕೇಳಿರುವುದು ಸಾರ್ವಜನಿಕ ಸ್ಥಳದಲ್ಲಿ! ಹೌದು. ಈ ಹುಡುಗ ನಡುಬೀದಿಯಲ್ಲಿ ಹುಡುಗಿಯ ಮುಂದೆ ನಿಂತು ಹೀಗೆ ಪಟ್ಟುಹಿಡಿದಿದ್ದಾನೆ. ಕಿಸ್ ಕೊಟ್ಟಮೇಲೆಯೇ ತಾನು ಹೋಗುವುದಾಗಿ ಹೇಳಿದ್ದಾನೆ. ಆ ಬೀದಿಯಲ್ಲಿ ನೂರಾರು ಜನರು ಇರುವ ಹೊರತಾಗಿಯೂ ಹುಡುಗ ಮುತ್ತು ಕೊಡಬೇಕೆಂದು ಕೇಳಿದ್ದಾನೆ.

ಹುಡುಗನ ಈ ಹುಡುಗಾಟಕ್ಕೆ ಹುಡುಗಿ ಸುಸ್ತಾಗಿದ್ದಾಳೆ. ಯುವತಿ ಹಾಗೂ ಆಕೆಯ ಗೆಳತಿ ಮುತ್ತು ಕೊಡಲು ಒಪ್ಪಿಕೊಂಡಿದ್ದಾಳೆ. ಮುತ್ತು ಕೊಟ್ಟಮೇಲೆ ಅಡ್ಡ ಸರಿಯುತ್ತೇನೆ ಎಂದು ಹುಡುಗ ಹೇಳಿದ್ದಾನೆ. ಹಾಗಾಗಿ, ಹುಡುಗಿ ಆತನಿಗೆ ಕಿಸ್ ಕೊಟ್ಟಿದ್ದಾಳೆ. ವಿಡಿಯೋದ ಕೊನೆಯಲ್ಲಿ ಹುಡುಗಿ ಹುಡುಗನಿಗೆ ಕಿಸ್ ಕೊಟ್ಟು ಕಳಿಸಿಬಿಟ್ಟಿದ್ದಾಳೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ನೆಟ್ಟಿಗರು ಈ ವಿಡಿಯೋವನ್ನು ಪ್ರಾಂಕ್ ವಿಡಿಯೋ ಎಂದು ಹೇಳಿದ್ದಾರೆ. ಕೆಲವರು ಈ ಚಟುವಟಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಹೀಗೆ ಮಾಡಿರುವುದನ್ನು ಒಪ್ಪಿಲ್ಲ. ಬೀದಿಯಲ್ಲಿ ಇಂತಹ ಕೆಲಸ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ವಿಡಿಯೋ ಎಲ್ಲಿ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ: Viral Video: ಅಬ್ಬ! ಇಂತಹ ಹಾವನ್ನು ಈವರೆಗೆ ನೀವೆಲ್ಲಾದರೂ ಕಂಡಿದ್ದೀರಾ? ವಿಡಿಯೋ ನೋಡಿ

ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಥಳಿಸಿದ ಸ್ಥಳೀಯರು; ವಿಡಿಯೋ ವೈರಲ್