
ಒಗಟಿನ (Puzzle) ಪ್ರಶ್ನೆಗಳು ತಲೆಗೆ ಹುಳ ಬಿಡುತ್ತದೆ. ನಾವು ಎಷ್ಟೇ ಬುದ್ಧಿವಂತರಾಗಿದ್ರು ಒಗಟು ಬಿಡಿಸುವುದು ಸವಾಲಿನ ಕೆಲಸವಾಗುತ್ತದೆ. ಎಷ್ಟೇ ಬುದ್ಧಿ ಖರ್ಚು ಮಾಡಿದ್ರು ಬ್ರೈನ್ ಟೀಸರ್ (Brain Teaser) ಸಂಬಂಧಿಸಿದ ಒಗಟಿಗೆ ಉತ್ತರ ಮಾತ್ರ ಸಿಗೋದೇ ಇಲ್ಲ. ಆದರೆ ಕೆಲವರಿಗೆ ಈ ಒಗಟುಗಳು ನೀರು ಕುಡಿದಷ್ಟು ಸುಲಭ. ಅಂತಹವರಿಗಾಗಿಯೇ ಇಲ್ಲೊಂದು ಒಗಟಿನ ಪ್ರಶ್ನೆಯಿದ್ದು, ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ ನೋಡಿ.
ಲರ್ನ್ ಕನ್ನಡ (Learn kannada) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಒಗಟಿನ ಪ್ರಶ್ನೆ ಹೀಗಿದೆ. ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆ ತುಂಬ ಈ ಟ್ರಿಕ್ಕಿ ಪ್ರಶ್ನೆಗೆ ಸರಿಯಾದ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.
ಇದನ್ನೂ ಓದಿ: ಈ ಪ್ರಶ್ನೆಯಲ್ಲೇ ಅಡಗಿದೆ ವ್ಯಕ್ತಿಯ ವಯಸ್ಸು; ಒಗಟು ಬಿಡಿಸಿ ಉತ್ತರ ಹೇಳಿ
ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಒಗಟಿನ ಪ್ರಶ್ನೆಯೂ ನಿಮಗೆ ಟ್ರಿಕ್ಕಿ ಅನಿಸಿರಬಹುದು. ಉತ್ತರ ಕಂಡುಕೊಳ್ಳಲು ಸಾಧ್ಯವಾಗದೇ ಇದ್ದೀರಬಹುದು. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆ ತುಂಬ ಈ ಪ್ರಶ್ನೆಗೆ ಉತ್ತರ ದೀಪದ ಬೆಳಕು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ