Viral: ಚಲಿಸುತ್ತಿರುವ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ; ವಿಡಿಯೋ ವೈರಲ್‌

ಯೂಟ್ಯೂಬ್‌ ನೆರವಿನಿಂದ ಮನೆಯಲ್ಲಿಯೇ ಸ್ವಯಂ ಹೆರಿಗೆ ಮಾಡಿಕೊಂಡ ಸಾಕಷ್ಟು ಘಟನೆಗಳು ನಡೆದಿವೆ. ಇಲ್ಲೊಂದು ಅಂತಹದ್ದೇ ಅಚ್ಚರಿಯ ಘಟನೆ ನಡೆದಿದ್ದು, ತುಂಬು ಗರ್ಭಿಣಿ ಮಹಿಳೆ ಚಲಿಸುತ್ತಿರುವ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಹೌದು ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಎದೆಗುಂದದೇ, ಯಾರ ನೆರವೂ ಇಲ್ಲದೆ ಸ್ವಯಂ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಚಲಿಸುತ್ತಿರುವ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ; ವಿಡಿಯೋ ವೈರಲ್‌
ವೈರಲ್‌ ವಿಡಿಯೋ
Image Credit source: Social Media

Updated on: May 16, 2025 | 12:22 PM

ಪ್ರಸವ (Childbirth) ಎನ್ನುವುದು ಒಂದು ಹೆಣ್ಣಿಗೆ ಪುನರ್ಜನ್ಮ ಇದ್ದಂತೆ. ಹೆರಿಗೆಯ ಸಮಯದಲ್ಲಿ ಆ ಹೆಣ್ಣು (female) ಅನುಭವಿಸುವ ನೋವು ಹೇಳಲು ಕೂಡ ಸಾಧ್ಯವಿಲ್ಲ. ಹೌದು 200 ಮೂಳೆಗಳನ್ನು ಒಮ್ಮೆಲೇ ಮುರಿದಾಗ ಉಂಟಾಗುವಷ್ಟು ನೋವು ಹೆರಿಗೆಯ ವೇಳೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಒಂದಷ್ಟು ಭಯ ಕೂಡ ಇರುತ್ತದೆ. ಇದಕ್ಕಾಗಿ ಧೈರ್ಯಕ್ಕೆ ಆಕೆಯ ಪಕ್ಕ ಒಂದಷ್ಟು ಜನ ಇದ್ದೇ ಇರುತ್ತಾರೆ. ಆದ್ರೆ ಇಲ್ಲೊಬ್ಬಳು ಧೈರ್ಯಶಾಲಿ ಮಹಿಳೆ ಯಾರ ನೆರವೂ ಇಲ್ಲದೆ ಚಲಿಸುತ್ತಿರುವ ಕಾರಿನಲ್ಲಿಯೇ ಮಗುವಿಗೆ Baby) ಜನ್ಮ ನೀಡಿದ್ದಾಳೆ. ಹೌದು ಹೆರಿಗೆ ನೋವು ಕಾಣಿಸಿಕೊಂಡಾಗ ಭಯಪಟ್ಟುಕೊಳ್ಳದೆ ಆಕೆ, ಧೈರ್ಯ ಮಾಡಿ ಯಾರ ಸಹಾಯವೂ ಇಲ್ಲದೆ ಸ್ವಯಂ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಚಲಿಸುತ್ತಿರುವ ಕಾರಿನಲ್ಲಿಯೇ ಸ್ವಯಂ ಹೆರಿಗೆ ಮಾಡಿಕೊಂಡ  ಮಹಿಳೆ:

ಯೂಟ್ಯೂಬ್‌ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡವರ ಕಥೆಯನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಬ್ಬಳು ದಿಟ್ಟ ಮಹಿಳೆ, ಯುಟ್ಯೂಬ್‌ ಬಿಡಿ, ಯಾರ ಸಹಾಯವೂ ಇಲ್ಲದೆ ಚಲಿಸುತ್ತಿರುವ ಕಾರಿನಲ್ಲಿಯೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ. ಈ ಹೆರಿಗೆಯ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
ಮಗ ಎಲ್ಲ ವಿಷಯದಲ್ಲೂ ಜಸ್ಟ್ ಪಾಸ್, ಸಿಹಿ ಹಂಚಿ ಸಂಭ್ರಮಿಸಿದ ಅಪ್ಪ
ಈ ಹುಡುಗ ಕೊಹ್ಲಿಯಂತೆ ಹಿಟ್​​​ ಕ್ರಿಕೆಟರ್​​ ಆಗುವ ಲಕ್ಷಣ ಕಾಣುತ್ತಿದೆ
ಕೇಕ್ ಕತ್ತರಿಸಿ ಶ್ವಾನದ ಹುಟ್ಟುಹಬ್ಬ ಆಚರಿಸಿದ ಹಿರಿಜೀವ, ವಿಡಿಯೋ ವೈರಲ್
ಬಲೂಚಿಸ್ತಾನಕ್ಕೆ ಕಾಶಿಶ್ ಚೌಧರಿ ಎಂಟ್ರಿ, ಗಡಗಡ ನಡುಗಿದ ಪಾಕ್

ಇದನ್ನೂ ಓದಿ: ಬೇಗ ಬಂದು ಬಾಳೆಹಣ್ಣು ಕೊಡಣ್ಣ; ಹಣ್ಣಿನ ವ್ಯಾಪಾರಿಯ ಬರುವಿಕೆಗಾಗಿ ಕಾದು ಕುಳಿತ ಶ್ವಾನ

ಈ ಕುರಿತ ವಿಡಿಯೋವನ್ನು Naija ಹೆರಿಸನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತುಂಬು ಗರ್ಭಿಣಿ ಮಹಿಳೆ ಧೈರ್ಯದಿಂದ ಸ್ವಯಂ ಹೆರಿಗೆ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ತನ್ನ ಗಂಡನ ಜೊತೆ ಆಕೆ ಎಲ್ಲೋ ಹೋಗುತ್ತಿರುವ ವೇಳೆ ಆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಕೆ ತನಗೆ ತಾನೇ ಧೈರ್ಯ ತೆಗೆದುಕೊಂಡು, ಯಾರ ಸಹಾಯವೂ ಇಲ್ಲದೆ ಸ್ವಯಂ ಹೆರಿಗೆ ಮಾಡಿಕೊಂಡು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ಮೇ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ತಾಯಿಯ ಧೈರ್ಯಕ್ಕೆ ನಮನಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಾಯಿಯ ಶಕ್ತಿಯೇ ಅಂತಹದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ದೇವರ ಪವಾಡವೇ ಸರಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ