Father Son : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಖಾಸಗಿ ವಿಮಾನದಲ್ಲಿ ಅಪ್ಪ ಮಗ ಪ್ರಯಾಣಿಸುತ್ತಿದ್ದಾರೆ. 11 ವರ್ಷದ ಮಗನಿಗೆ ವಿಮಾನ ಹಾರಿಸುವುದನ್ನು ಹೇಳಿಕೊಡುತ್ತಿರುವ ಅಪ್ಪ ಮದ್ಯ ಸೇವಿಸುತ್ತಿದ್ದಾನೆ. ಆದರೆ ಈ ವಿಡಿಯೋ ಇದೀಗ ಗೊಂದಲವನ್ನು ಹುಟ್ಟುಹಾಕಿದೆ. ಏಕೆಂದರೆ Express.co.uk ಪ್ರಕಾರ, ವಿಮಾನ ಅಪಘಾತದಲ್ಲಿ ತಂದೆ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ನಡೆಯುವ ಮುನ್ನ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನುವುದು ಪೊಲೀಸರ ಅಂಬೋಣ. ಆದರೂ ಖಚಿತ ಮಾಹಿತಿಗಾಗಿ ಅವರು ತನಿಖೆಯನ್ನು ಮುಂದುವರಿಸಿದ್ದಾರೆ.
Avião bimotor Beechcraft Baron 58, de matrícula PR-IDE, “caiu matando pai e filho” a Aeronave cair em uma região de mata fechada, na divisa de Rondônia e Mato Grosso. Os destroços da aeronave foram localizados na manhã deste domingo (30) o pecuarista Garon Maia e o filho.?? pic.twitter.com/nOEBpVZJup
ಇದನ್ನೂ ಓದಿ— D’ AVIATION ?? (@pgomes7973) August 1, 2023
ಜು. 29ರಂದು 42 ವರ್ಷದ ಸಂಶೋಧಕ ಗ್ಯಾರನ್ ಮಾಯಾ (Garon Maia) 11 ವರ್ಷದ ಮಗ ಫ್ರಾನ್ಸಿಸ್ಕೋ ಮಾಯಾ (Francisco Maia) ಟ್ವಿನ್ ಎಂಜಿನ್ ಬೀಚ್‌ಕ್ರಾಫ್ಟ್ ಬ್ಯಾರನ್ 58 (Twin-engine Beechcraft Baron 58) ಕಾಡಿಗೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ಅಪಘಾತಕ್ಕೆ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿತ್ತೆ? ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ : Viral: ಆನ್ಲೈನ್ ವಂಚನೆ; ಆಟೋ ಚಾಲಕನಿಂದ ರೂ 23000 ಸುಲಿಗೆ ಮಾಡಿದ 20ರ ಯುವತಿ
ಗ್ಯಾರನ್ ಮಾಯಾ ತನ್ನ ಖಾಸಗಿ ವಿಮಾನವನ್ನು ಹಾರಿಸಲು ಮಗನಿಗೆ ಸೂಚನೆಗಳನ್ನು ಕೊಡುತ್ತಾ ತಾನು ಬಿಯರ್ ಬಾಟಲಿಯನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಬಿಯರ್ ಕುಡಿಯುತ್ತಾ ವಿಡಿಯೋ ಕೂಡ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಪೊಲೀಸರು, ವಿಮಾನ ಪತನಗೊಳ್ಳುವ ಸಮಯದಲ್ಲಿ ಅದು ಅಪ್ಪನ ನಿಯಂತ್ರಣದಲ್ಲಿತ್ತೋ ಮಗನ ನಿಯಂತ್ರಣದಲ್ಲಿತ್ತೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಇದೀಗ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ : Viral: ಒಂದೇ ಆಟೋ ಒಬ್ಬನೇ ಡ್ರೈವರ್ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?
ಬ್ರೆಝಿಲಿಯನ್ನ ಸ್ಥಳೀಯ ಮಾಧ್ಯಮದ ಪ್ರಕಾರ, ಗ್ಯಾರನ್ ನೋವಾ ಕಾನ್ಕ್ವಿಸ್ಟಾದ ರೊಂಡೋನಿಯಾದಲ್ಲಿರುವ ತಮ್ಮ ಫಾರ್ಮ್ಹೌಸ್ನಿಂದ ಮಗನೊಂದಿಗೆ ವಿಮಾನದಲ್ಲಿ ಹಾರಿ ಇಂಧನಕ್ಕಾಗಿ ವಿಲ್ಹೆನಾದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ನಂತರ ಮಾಟೋ ಗ್ರೊಸೊ ಡೋ ಸುಲ್ನ ಕ್ಯಾಂಪೊ ಗ್ರ್ಯಾಂಡೇನಲ್ಲಿ ವಾಸಿಸುತ್ತಿರುವ ತಮ್ಮ ಹೆಂಡತಿಯ ಬಳಿ ಮಗನನ್ನು ಬಿಡಲು ಹೋಗುವವರಿದ್ದರು. ಏಕೆಂದರೆ ಆತ ಅಲ್ಲಿದ್ದುಕೊಂಡೇ ತನ್ನ ಶಾಲಾಭ್ಯಾಸ ಪೂರೈಸುತ್ತಿದ್ದ.
ಇದನ್ನೂ ಓದಿ : Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್
ಈ ಎಲ್ಲದರ ಮಧ್ಯೆ ಮತ್ತೊಂದು ಆಘಾತಕಾರಿ ಘಟನೆ ಇವರ ಕುಟುಂಬದಲ್ಲಿ ಸಂಭವಿಸಿದೆ. ಗಂಡ ಮತ್ತು ಮಲಮಗನ ಅಂತ್ಯಸಂಸ್ಕಾರ ಪೂರೈಸಿದ ಕೆಲಗಂಟೆಗಳಲ್ಲೇ ಗ್ಯಾರನ್ ಪತ್ನಿ ಅನಾ ಪ್ರಿಡೋನಿಕ್ ಆ. 1ರಂದು ಆತ್ಮಹತ್ಯೆ ಮಾಡಿಕೊಂಡರು. ಬ್ರೆಝಿಲಿಯನ್ ಕಾನೂನಿನ ಪ್ರಕಾರ, ಪ್ರೌಢಶಾಲೆ ಪೂರೈಸಿದ, ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಲ್ಲಿ ಹೆಸರನ್ನು ನೋಂದಾಯಿಸಿದ 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಮಾತ್ರ ವಿಮಾನವನ್ನು ಹಾರಿಸಲು ಅನುಮತಿಸಲಾಗುತ್ತದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:10 pm, Wed, 9 August 23