ಆನೆಗಳ ಉಪಹಾರ ಗೃಹ; ಮುದುಮಲೈನ ತೆಪ್ಪಕಾಡಿನಲ್ಲಿರುವ ಶಿಬಿರಕ್ಕೆ ಬನ್ನಿ

| Updated By: ಶ್ರೀದೇವಿ ಕಳಸದ

Updated on: Dec 02, 2022 | 12:30 PM

Tamilnadu: ಆನೆಗಳನ್ನು ಹತ್ತಿರದಿಂದ ನೋಡಿದ್ದೀರಿ, ಮುಟ್ಟಿ ಮಾತನಾಡಿಸಿದ್ದೀರಿ. ಆದರೆ ಅವುಗಳು ಏನು ತಿನ್ನುತ್ತವೆ? ಆನೆ ಶಿಬಿರದಲ್ಲಿ ಅವುಗಳಿಗಾಗಿ ಇರುವ ಅಡುಗೆಮನೆ ಹೇಗಿರುತ್ತದೆ? ನೋಡಿದ್ದೀರಾ? ಬನ್ನಿ ಹಾಗಿದ್ದರೆ ತಮಿಳುನಾಡಿಗೆ.

ಆನೆಗಳ ಉಪಹಾರ ಗೃಹ; ಮುದುಮಲೈನ ತೆಪ್ಪಕಾಡಿನಲ್ಲಿರುವ ಶಿಬಿರಕ್ಕೆ ಬನ್ನಿ
ಆನೆಗಳ ಅಡುಗೆಮನೆ
Follow us on

Viral Video : ದೈತ್ಯದೇಹಿ ಆನೆಗಳಿಗೆ ಆಹಾರ ಹೇಗೆ ತಯಾರಿಸಲಾಗುತ್ತದೆ? ಎಂಬ ಅಂದಾಜು ನಿಮಗಿದೆಯಾ? ಗೊತ್ತಿಲ್ಲವಾದರೆ ಈ ವಿಡಿಯೋ ನೋಡಿ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಆನೆಗಳ ಉಪಹಾರ ಗೃಹದ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ದೊಡ್ಡದಾದ ಅಡುಗೆಮನೆಯಲ್ಲಿ ದೊಡ್ಡದೊಡ್ಡ ಗಾತ್ರದ ಮುದ್ದೆಗಳನ್ನು ತಯಾರು ಮಾಡುವಲ್ಲಿ ಇವರೆಲ್ಲ ನಿರತರಾಗಿದ್ದಾರೆ. ಹೊರಗೆ ಆನೆಗಳು ಅಷ್ಟೇ ತಾಳ್ಮೆಯಿಂದ ತಮ್ಮ ಉಪಹಾರಕ್ಕಾಗಿ ಕಾಯುತ್ತಿವೆ.

ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಇವುಗಳ ಆಹಾರ ತಯಾರಿಕೆ ಪ್ರಕ್ರಿಯೆ ನಡೆಯುತ್ತದೆ. ರಾಗಿ, ಅಕ್ಕಿ, ಉಪ್ಪು, ಬೆಲ್ಲವನ್ನು ಸೇರಿಸಿದ ದೊಡ್ಡ ದೊಡ್ಡ ಮುದ್ದೆಗಳನ್ನು ಇಲ್ಲಿ ಮಾಡಲಾಗುತ್ತದೆ. ಈತನಕ 56,6000ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಇಲ್ಲಿರುವ ಈ ಆಹಾರ ತಯಾರಕರು ಎಷ್ಟು ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಗಮನಿಸಿ.

ಭಾರತೀಯ ಅರಣ್ಯ ಅಧಿಕಾರಿ ಸುರೇಂದರ್ ಮೆಹ್ರಾ,ಮುದುಮಲೈನಲ್ಲಿರುವ ಈ ತೆಪ್ಪಕಾಡು ಆನೆ ಶಿಬಿರದಲ್ಲಿ ಆನೆಗಳ ಪೋಷಣೆಯನ್ನು ಕಣ್ಣಾರೆ ನೋಡಲು ಇಲ್ಲಿಗೆ ಭೇಟಿಕೊಡಬಹುದು. ಇದು ಇತರೇ ಶಿಬಿರಗಳಿಗಿಂತ ಅತ್ಯುತ್ತಮ ಎಂದು ಪ್ರತಿಕ್ರಿಯಿಸಿದ್ದಾರೆ.

ಎಲ್ಲವೂ ಸರಿ ಆದರೆ ಯಾಕೆ ಸರಪಳಿ ಕಟ್ಟಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಪ್ರಾಣಿಗಳಿಗೇ ಮೀಸಲಾದ ಜಾಗವೆಂದ ಮೇಲೆ ಇದು ಸರಿ ಅಲ್ಲ. ಮುಕ್ತವಾಗಿ ತಿರುಗಾಡಿಕೊಂಡು ತಮ್ಮ ಆಹಾರವನ್ನು ಅವು ಆನಂದಿಸುತ್ತ ತಿನ್ನಬೇಕು ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

 

Published On - 7:10 pm, Thu, 1 December 22