ವಿವಿಧ ದೇಶಗಳ, ಪ್ರಧಾನಿಗಳ, ಅಧ್ಯಕ್ಷರುಗಳ ಹೆಸರುಗಳೆಲ್ಲ ಈ ಆಟೋವಾಲಾನ ನಾಲಗೆಯ ಮೇಲೆ

Auto Driver : ಇಷ್ಟೇ ಅಲ್ಲ, 61 ವರ್ಷದ ಈ ಮುಂಬೈನ ಆಟೋ ಡ್ರೈವರ್ ರಾಮದೇವ​ ನೋಟು ರದ್ಧತಿ, 2ಜಿ ಹಗರಣ, ಪ್ರಸ್ತುತ ರಾಜಕೀಯ ಮತ್ತು ಮುಂತಾದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕರಾರುವಕ್ಕಾಗಿ ಚರ್ಚಿಸುತ್ತ ಹೋದರು.

ವಿವಿಧ ದೇಶಗಳ, ಪ್ರಧಾನಿಗಳ, ಅಧ್ಯಕ್ಷರುಗಳ ಹೆಸರುಗಳೆಲ್ಲ ಈ ಆಟೋವಾಲಾನ ನಾಲಗೆಯ ಮೇಲೆ
ಮಹಾರಾಷ್ಟ್ರ ಮೂಲದ ಆಟೋ ಡ್ರೈವರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 02, 2022 | 12:25 PM

Viral Video : ಸಾಮಾನ್ಯವಾಗಿ ಆಟೋ ಡ್ರೈವರ್​ಗಳು ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕಿಕೊಂಡಾಗ ಏನು ಮಾಡುತ್ತಾರೆ? ಸಿನೆಮಾ ಹಾಡುಗಳನ್ನು ಕೇಳುತ್ತಾರೆ ಅಥವಾ ಮೊಬೈಲಿನಲ್ಲಿ ಯಾರೊಂದಿಗಾದರೂ ಮಾತನಾಡುತ್ತಾರೆ ಇಲ್ಲವೇ ಪ್ರಯಾಣಿಕರ ಮನಸ್ಥಿತಿ ಗಮನಿಸಿ ಅವರೊಂದಿಗೆ ಮಾತನಾಡುತ್ತಾರೆ ಅದೂ ಇಲ್ಲವಾದರೆ ತಮ್ಮಷ್ಟಕ್ಕೆ ತಾವೂ ಗೊಣಗಿಕೊಳ್ಳುತ್ತಾರೆ. ಇನ್ನೂ ಕೆಲವರು ಮೌನವಾಗಿರುತ್ತಾರೆ. ಆದರೆ ಈ ವಿಡಿಯೋದಲ್ಲಿರುವ ಆಟೋ ಡ್ರೈವರ್ ಮಾತ್ರ ಈ ಎಲ್ಲರಿಗಿಂತ ಭಿನ್ನ. ಯುರೋಪಿಯನ್​ ದೇಶಗಳು, ಪ್ರಧಾನಮಂತ್ರಿಗಳು, ಅಧ್ಯಕ್ಷರುಗಳ ಬಗ್ಗೆ ಪಟಪಟನೆ ಉತ್ತರಿಸುತ್ತಾರೆ. ನೋಡಿ  ಈ ಕೆಳಗಿನ ವಿಡಿಯೋದಲ್ಲಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Rajiv Krishna (@krish_rajiv)

ರಾಜೀವ ಕೃಷ್ಣ ಎಂಬುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಾಜೀವ, ‘ಮುಂಬೈನ ಆಟೋದಲ್ಲಿ ಪ್ರಯಾಣಿಸುವಾಗ ಮೂರು ಕಿ.ಮೀ ಕ್ರಮಿಸಲು ಏನಿಲ್ಲವೆಂದರೂ ಒಂದು ಗಂಟೆಯಾದರೂ ಬೇಕು ಎಂದು ಗೂಗಲ್​ಮ್ಯಾಪ್ ಹೇಳುತ್ತಿತ್ತು. ಟ್ರಾಫಿಕ್ ಮಧ್ಯೆ ನಿಂತುಕೊಂಡಾಗ ಆಟೋ ಡ್ರೈವರ್, ಎಷ್ಟು ದೇಶಗಳನ್ನು ಸುತ್ತಿದ್ದೀರಿ ಎನ್ನುವುದರೊಂದಿಗೆ ಮಾತಿಗಿಳಿದರು. ನಾನಿದನ್ನು ತಮಾಷೆಯಾಗಿ ತೆಗೆದುಕೊಂಡು ಕೆಲ ದೇಶಗಳನ್ನು ಹೇಳಿದೆ. ಆದರೆ ಅವರು ಯುರೋಪಿಯನ್​ ಖಂಡದ 44 ದೇಶಗಳ ಹೆಸರುಗಳನ್ನು ವರ್ಣಮಾಲೆ ಕ್ರಮದಲ್ಲಿ ಪಟಪಟನೆ ಹೇಳಲು ಶುರುಮಾಡಿದರು.’

‘ಮತ್ತೆ ಮುಂದುವರಿದು ವಿವಿಧ ದೇಶಗಳ ಅಧ್ಯಕ್ಷರುಗಳು, ಪ್ರಧಾನಮಂತ್ರಿಗಳ ಬಗ್ಗೆ ಕೂಡ ಹೇಳಿದರು. ಮಹಾರಾಷ್ಟ್ರದ ಎಲ್ಲಾ ಜಿಲ್ಲೆಗಳ ಹೆಸರುಗಳನ್ನೂ ಹೇಳಿದರು. ನೋಟು ರದ್ದತಿ, 2ಜಿ ಹಗರಣ ಮುಂತಾದ ಪ್ರಮುಖ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೂಡ ಒಂದು ತಾಸು ಚರ್ಚಿಸಿದರು. ಈ ಪ್ರಯಾಣ ಬಹಳ ಉಪಯುಕ್ತವಾಗಿತ್ತು. ಇವರು ಅಪರೂಪದ ಡ್ರೈವರ್​. ಇವರ ಹೆಸರು ರಾಮದೇವ, ಇವರಿಗೆ 61 ವರ್ಷ. ದಿನಕ್ಕೆ 8-9 ತಾಸು ಆಟೋ ಓಡಿಸುತ್ತಾರೆ. ಇವರು ಮಹಾರಾಷ್ಟ್ರದ ಸಿಂಧುದುರ್ಗದ ಮೂಲದವರು’ ಎಂದಿದ್ದಾರೆ.

ಇದನ್ನೂ ಓದಿ : ಆಟೋದಲ್ಲಿ ಏರ್​ಪೋಡ್ಸ್​​ ಮರೆತ ಮಹಿಳೆ, ನೆಟ್ಟಿಗರ ಗಮನ ಸೆಳೆದ ಆಟೋ ಚಾಲಕ

ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಆಸಕ್ತಿಗೂ, ಕೆಲಸಕ್ಕೂ ಸಂಬಂಧವೇ ಇಲ್ಲ. ಕಲಿಯಬೇಕೆನ್ನುವ, ತಿಳಿದುಕೊಳ್ಳಬೇಕೆನ್ನುವ ಮನಸ್ಸು ಇದ್ದಲ್ಲಿ ಏನನ್ನೂ ಕಲಿಯಬಹುದು. ಇದಕ್ಕೆ ಈ ಡ್ರೈವರ್​ ಸಾಕ್ಷಿ ಎಂದಿದ್ದಾರೆ’ ಒಬ್ಬರು. ‘ಶಿಕ್ಷಣ ಯಾರೋ ಕೆಲವರ ಸ್ವತ್ತಲ್ಲ. ಮಾಹಿತಿ ತಂತ್ರಜ್ಞಾನದ ಫಲವಾಗಿ ಈವತ್ತು ಶಿಕ್ಷಣ ಎಲ್ಲರ ಕೈಗೂ ಎಟಕುವಂತಾಗಿದೆ. ಶ್ರದ್ಧೆ ಆಸಕ್ತಿ ಇದ್ದಲ್ಲಿ ಯಾರೂ ಯಾವ ಜ್ಞಾನವನ್ನೂ ರೂಢಿಗೊಳಿಸಿಕೊಳ್ಳಬಹುದು’ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:21 pm, Fri, 2 December 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್