AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇರಾ ದಿಲ್​ ಏ ಪುಕಾರೆ ಆಜಾ; ಕಿಲಿ ಪೌಲ್​ ಮತ್ತು ನೀಮಾ ಪೌಲ್​ ಹೊಸ ರೀಲ್​ ವೈರಲ್

Kili Paul : ಈತನಕ ಈ ವಿಡಿಯೋ ಅನ್ನು 1.5 ಮಿಲಿಯನ್​ ಜನರು ನೋಡಿದ್ದಾರೆ. 1.5 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಇದು ಅದ್ಭುತವಾಗಿದೆ ಎಂದಿದ್ದಾರೆ ಕೆಲವರು. ಓಹ್ ಈ ಟ್ರೆಂಡ್​ ಆಫ್ರಿಕಾತನಕ ತಲುಪಿತೇ? ಎಂದಿದ್ದಾರೆ ಇನ್ನೂ ಕೆಲವರು.

ಮೇರಾ ದಿಲ್​ ಏ ಪುಕಾರೆ ಆಜಾ; ಕಿಲಿ ಪೌಲ್​ ಮತ್ತು ನೀಮಾ ಪೌಲ್​ ಹೊಸ ರೀಲ್​ ವೈರಲ್
ಕಿಲಿ ಪೌಲ್​ ಮತ್ತು ನೀಮಾ ಪೌಲ್ ಮೇರಾ ದಿಲ್ ಏ ಪುಕಾರೆ ಆಜಾ
TV9 Web
| Updated By: ಶ್ರೀದೇವಿ ಕಳಸದ|

Updated on: Dec 01, 2022 | 2:40 PM

Share

Viral Video : ಕಿಲಿ ಪೌಲ್​ ಮತ್ತು ಅವರ ತಂಗಿ ನೀಮಾ ಪೌಲ್ ಹೊಸ ರೀಲ್​ನೊಂದಿಗೆ ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಹಿಂದೆ ಕಿಲಿ ಜೀನಾ ಇಸೀಕಾ ನಾಮ್​ ಹೈ​ ಹಾಡನ್ನು ಸ್ವತಃ ಹಾಡಿ ಭೇಷ್​ ಎನ್ನಿಸಿಕೊಂಡಿದ್ದ.​ ಈ ಸಲ ಲತಾ ಮಂಗೇಶ್ಕರ್ ಅವರ ಸೂಪರ್​ ಹಿಟ್​ ‘ಮೇರಾ ದಿಲ್​ ಏ ಪುಕಾರೆ ಆಜಾ’ ಹಾಡಿಗೆ ಅಣ್ಣ ತಂಗಿ ನರ್ತಿಸಿದ್ದಾರೆ. ನೆಟ್ಟಿಗರು ಕ್ಯಾ ಬಾತ್​ ಹೈ ಎನ್ನುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kili Paul (@kili_paul)

ಆಯೇಷಾ ಎಂಬ ಪಾಕಿಸ್ತಾನಿ ಹುಡುಗಿ ಮದುವೆಮನೆಯಲ್ಲಿ ಇದೇ ಹಾಡಿಗೆ ನೃತ್ಯ ಮಾಡಿದ ವಿಡಿಯೋ ನೋಡಿದ್ದಿರಿ. ಲಕ್ಷಗಟ್ಟಲೆ ಮಂದಿ ಈ ವಿಡಿಯೋ ನೋಡಿ ಪರವಿರೋಧದ ಪ್ರತಿಕ್ರಿಯೆಗಳನ್ನು ನೀಡಿದ್ದರು. ನಂತರ ಮಿಸ್ಟರ್​ ಬೀನ್ಸ್ ಡ್ಯಾನ್ಸ್​ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಇದೀಗ ಕಿಲಿ ಮತ್ತು ನೀಮಾ ಈ ಹಾಡಿಗೆ ಹೆಜ್ಜೆ ಹಾಕಿ ನೆಟ್ಟಿಗರ ಹುಚ್ಚನ್ನು ಲಯಬದ್ಧವಾಗಿ ಬಡಿದೆಬ್ಬಿಸಿದ್ದಾರೆ.

ಈತನಕ ಈ ವಿಡಿಯೋ ಅನ್ನು 1.5 ಮಿಲಿಯನ್​ ಜನರು ನೋಡಿದ್ದಾರೆ. 1.5 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಇದು ಅದ್ಭುತವಾಗಿದೆ ಎಂದಿದ್ದಾರೆ ಕೆಲವರು. ಓಹ್ ಈ ಟ್ರೆಂಡ್​ ಆಫ್ರಿಕಾತನಕ ತಲುಪಿತೇ? ಎಂದಿದ್ದಾರೆ ಇನ್ನೂ ಕೆಲವರು.

ಒಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವೂ ಇದನ್ನು ಹೇಗೆ ರೀಲ್​ ಮೂಲಕ ಪ್ರಸ್ತುತಪಡಿಸುವುದು ಎಂಬ ಯೋಚನೆಯಲ್ಲಿಯೇ ಇಂದಿನ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದವರು ಯೋಚಿಸುತ್ತಿರುತ್ತಾರೆ. ಆ ಪಾಕಿಸ್ತಾನಿ ರೀಲ್ ವೈರಲ್ ಆಗುತ್ತಿದ್ದಂತೆ ಇದೀಗ ನೋಡಿ ವೈರಲ್ ಆಗುತ್ತಿದೆ ಆಫ್ರಿಕನ್ ಅಣ್ಣತಂಗಿಯ ಈ ವಿಡಿಯೋ. ಲತಾದೀ ಹಾಡಿದ ಈ ಹಾಡನ್ನು ಮತ್ತೆ ಯಾರು ವೈರಲ್ ಮಾಡಬಹುದು? ಕಾಯೋಣ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ