ಆಟೋದಲ್ಲಿ ಏರ್​ಪೋಡ್ಸ್​​ ಮರೆತ ಮಹಿಳೆ, ನೆಟ್ಟಿಗರ ಗಮನ ಸೆಳೆದ ಆಟೋ ಚಾಲಕ

Auto Driver : ಆಫೀಸಿಗೆ ಹೋಗುವಾಗ ಆಕೆ ತನ್ನ ಏರ್​ಪೋಡ್​ ಅನ್ನು ಆಟೋದಲ್ಲಿಯೇ ಮರೆತುಹೋಗಿದ್ದಾಳೆ. ಫೋನ್​ಪೇ ಮೂಲಕ ಆಕೆಯ ನಂಬರ್ ಪತ್ತೆ ಹಚ್ಚಿ ಅರ್ಧಗಂಟೆಯೊಳಗೆ ದುಬಾರಿ ಏರ್​​ಪೋಡ್ಸ್​ ಅನ್ನು ಚಾಲಕ ಆಕೆಗೆ ತಲುಪಿಸಿದ್ದಾನೆ.

ಆಟೋದಲ್ಲಿ ಏರ್​ಪೋಡ್ಸ್​​ ಮರೆತ ಮಹಿಳೆ, ನೆಟ್ಟಿಗರ ಗಮನ ಸೆಳೆದ ಆಟೋ ಚಾಲಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 16, 2022 | 4:00 PM

Viral Post : ಶಿದಿಕಾ ಎಂಬ ಟ್ವಿಟರ್ ಖಾತೆದಾರರು ಟ್ವೀಟ್ ಮಾಡಿದ ಪೋಸ್ಟ್​ ಇದು. ಬೆಂಗಳೂರಿನಲ್ಲಿ ಅವರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿ ಏರ್​ಪೋಡ್ಸ್​​ ಮರೆತು ಇಳಿದಿದ್ದಾರೆ. ನಂತರ ಆಟೋ ಚಾಲಕ ಶಿದಿಕಾ ಅವರನ್ನು ಹುಡುಕಿ ಅವರಿಗೆ ಏರ್​ಪೋಡ್ಸ್​​ ತಲುಪಿಸುವ ವ್ಯವಸ್ಥೆ ಮಾಡಿದ್ದಾನೆ. ನೆಟ್ಟಿಗರು ಈ ಚಾಲಕನ ‘ತಂತ್ರ-ಜ್ಞಾನ’ದ ಬಗ್ಗೆ ಭಲೇ ಎನ್ನುತ್ತಿದ್ದಾರೆ.

ಶಿದಿಕಾ ಎಂದಿನಂತೆ ನೌಕರಿಗೆ ಹೋಗಲು ಆಟೋ ಏರಿದ್ದಾರೆ. ಗಡಿಬಿಡಿಯಲ್ಲಿ ತಮ್ಮ ಏರ್​ಪಾಡ್ಸ್​​ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ಇದನ್ನು ಗಮನಿಸಿದ ಚಾಲಕ, ದುಬಾರಿ ಬೆಲೆಯ ಈ ಏರ್​ಪಾಡ್​ ಅನ್ನು ಶಿದಿಕಾ ಅವರಿಗೆ ಅರ್ಧಗಂಟೆಯೊಳಗೆ ತಲುಪಿಸಿದಾಗ ಆಕೆ ಅಚ್ಚರಿಗೆ ಒಳಗಾಗಿದ್ದಾಳೆ

ಬೆಂಗಳೂರಿನಲ್ಲಿ ತಂತ್ರಜ್ಞಾನ ಎನ್ನುವುದು ಎಲ್ಲರಿಗೂ ಕೈಗೆಟಕುವಷ್ಟು ಸರಳವಾಗಿದೆ ಎನ್ನುವುದು ಈ ಘಟನೆಯಿಂದ ತಿಳಿಯಲ್ಪಡುತ್ತದೆ. ಏರ್​ಪಾಡ್ಸ್​ ಲಭ್ಯವಾಗುತ್ತಿದ್ದಂತೆ ಆಟೋ ಚಾಲಕ ಫೋನ್​ಪೇ ಮೂಲಕ ಶಿದಿಕಾ ಅವರ ನಂಬರ್​ ಪತ್ತೆಹಚ್ಚಿ ಅವರ ಕಚೇರಿಯ ವಿಳಾಸವನ್ನು ಪಡೆದುಕೊಂಡಿದ್ದಾನೆ.

‘ಆಟೋದಲ್ಲಿ ನಾನು ನನ್ನ ಏರ್​​ಪಾಡ್ಸ್​​ ಕಳೆದುಕೊಂಡೆ. ಆದರೆ ಆಟೋ ಚಾಲಕ ಫೋನ್​ಪೇ ಮೂಲಕ ನನ್ನ ನಂಬರ್​ ಹುಡುಕಿ ಅರ್ಧ ಗಂಟೆಯಲ್ಲಿ ನನ್ನ ಕಚೇರಿಗೆ ಬಂದು ಸೆಕ್ಯೂರಿಟಿಯ ಬಳಿ ಏರ್​ಪಾಡ್​ ತಲುಪಿಸಿ ಹೋಗಿದ್ದಾನೆ.’ ಎಂದು ಶಿದಿಕಾ ಪೋಸ್ಟ್​ನಲ್ಲಿ ಬರೆದಿದ್ದಾರೆ.

9,000 ಜನರು ಈ ಪೋಸ್ಟ್​ ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂದು ಅನೇಕರು ಹೇಳಿದ್ದಾರೆ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:55 pm, Wed, 16 November 22