“ಬ್ರೆಸ್ಟ್ ಮಿಲ್ಕ್” ಐಸ್ ಕ್ರೀಮ್, ಇದು ಮಹಿಳೆಯ ಎದೆ ಹಾಲಿನಿಂದ ತಯಾರಿಸಿದ ಐಸ್ ಕ್ರೀಮ್, ನಿಜಾಂಶ ಇಲ್ಲಿದೆ

ಐಸ್ ಕ್ರೀಮ್​​​ನ್ನು ಹಾಲಿನಿಂದ ತಯಾರು ಮಾಡುವುದು ಸಹಜ, ಆದರೆ ಅಮೆರಿಕದಲ್ಲಿ ಮನುಷ್ಯನ ಎದೆಹಾಲಿನಿಂದ ಐಸ್ ಕ್ರೀಮ್ ತಯಾರಿಸಿದ್ದಾರೆ ಎಂಬ ಸುದ್ದಿ ವೈರಲ್​​ ಆಗಿದೆ. ಇದನ್ನು "ಬ್ರೆಸ್ಟ್ ಮಿಲ್ಕ್" ಐಸ್ ಕ್ರೀಮ್ ಎಂದು ಕರೆದಿದ್ದಾರೆ. ಬ್ರೂಕ್ಲಿನ್‌ನ ಡಂಬೊಯಲ್ಲಿರುವ ಆಡ್‌ಫೆಲೋಸ್ ಐಸ್ ಕ್ರೀಮ್ ಕಂಪನಿಯು "ಬ್ರೆಸ್ಟ್ ಮಿಲ್ಕ್" ಐಸ್ ಕ್ರೀಮ್ ಅನ್ನು ಬಿಡುಗಡೆ ಮಾಡಿದೆ. ನಿಜಕ್ಕೂ ಇದು ಎದೆ ಹಾಲಿನಿಂದ ತಯಾರಿಸಿದ ಐಸ್ ಕ್ರೀಮ್ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬ್ರೆಸ್ಟ್ ಮಿಲ್ಕ್ ಐಸ್ ಕ್ರೀಮ್, ಇದು ಮಹಿಳೆಯ ಎದೆ ಹಾಲಿನಿಂದ ತಯಾರಿಸಿದ ಐಸ್ ಕ್ರೀಮ್, ನಿಜಾಂಶ ಇಲ್ಲಿದೆ
ಸಾಂದರ್ಭಿಕ ಚಿತ್ರ
Updated By: ಮಾಲಾಶ್ರೀ ಅಂಚನ್​

Updated on: Aug 09, 2025 | 7:09 PM

ಐಸ್ ಕ್ರೀಮ್ (Ice Cream) ಸಾಮಾನ್ಯವಾಗಿ ಧನದ ಹಾಲಿನಿಂದ ತಯಾರಿಸುತ್ತಾರೆ. ಅದರ ರುಚಿ, ಸುವಾಸನೆ ಎಲ್ಲವೂ ಕೂಡ ಅದ್ಭುತವಾಗಿದೆ. ಆದರೆ ಇಲ್ಲೊಂದು ಮಹಿಳೆಯ ಎದೆ ಹಾಲಿನಿಂದ ಐಸ್ ಕ್ರೀಮ್ ತಯಾರಿಸಿದ್ದಾರೆ. ಈ ಐಸ್ ಕ್ರೀಮ್​​ನ ಸುವಾಸನೆ ಕೂಡ ಎದೆ ಹಾಲಿನದ್ದೇ ನೀಡಲಾಗಿದೆ. ನ್ಯೂಯಾರ್ಕ್ ನಗರದಲ್ಲಿ ಈ ವಿಚಾರವಾಗಿ ಭಾರೀ ಸದ್ದು ಮಾಡಿದೆ. ಬ್ರೂಕ್ಲಿನ್‌ನ ಡಂಬೊಯಲ್ಲಿರುವ ಆಡ್‌ಫೆಲೋಸ್ ಐಸ್ ಕ್ರೀಮ್ ಕಂಪನಿಯು “ಬ್ರೆಸ್ಟ್ ಮಿಲ್ಕ್” ಐಸ್ ಕ್ರೀಮ್ (human breast milk) ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ವಾಟರ್ ಸ್ಟ್ರೀಟ್ ಔಟ್‌ಲೆಟ್‌ನಲ್ಲಿ ಕೂಡ ಭಾರೀ ಸದ್ದು ಮಾಡಿದೆ. ಇದೀಗ ಈ ವಿಚಾರ ಭಾರೀ ಚರ್ಚೆ ಕಾರಣವಾಗಿದೆ. ಜತೆಗೆ ಇದನ್ನು ಖರೀದಿ ಮಾಡಲು ಸಾಲುಗಟ್ಟಿ ಜನರು ನಿಂತಿದ್ದಾರೆ. ಆದರೆ ಇದರಲ್ಲಿ ನಿಜಾಂಶ ಏನೆಂದರೆ ಈ ಸುವಾಸನೆಯನ್ನು ನಿಜವಾದ ಮಾನವ ಹಾಲಿನಿಂದ ತಯಾರಿಸಲಾಗಿಲ್ಲ. ಬದಲಾಗಿ, ಇದು ಲಿಪೊಸೋಮಲ್ ಬೋವಿನ್ ಕೊಲೊಸ್ಟ್ರಮ್‌ ಅಂಶಗಳನ್ನು ಹೊಂದಿರುತ್ತದೆ. ಇದು ಎದೆ ಹಾಲಿನಲ್ಲಿ ಕಂಡುಬರುವ ಆಹಾರ ಪೂರಕವಾಗಿದೆ ಎಂದು ಹೇಳಲಾಗಿದೆ.

ಇದು ಸಿಹಿತಿಂಡಿಗೆ ಬಳಸಲಾಗುತ್ತದೆ. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಈ ಸುವಾಸನೆಯು ಅದರ ಪೋಷಕ ಉತ್ಪನ್ನಗಳಿಗೆ ಹೆಸರುವಾಸಿಯಾದ ಫ್ರಿಡಾ ಕಂಪನಿಯ ಸಹಯೋಗದಲ್ಲಿ ನೀಡಲಾಗಿದೆ. ಪ್ರತಿದಿನ ಕೇವಲ 50 ಉಚಿತ ಸ್ಕೂಪ್‌ಗಳನ್ನು ಮಾತ್ರ ನೀಡಲಾಗುತ್ತದೆ. ಇದೀಗ ಅಲ್ಲಿನ ಜನರಿಗೆ ಆಕರ್ಷಕವಾಗಿದೆ. ಕ್ಯಾಲಿಫೋರ್ನಿಯಾದ ಮ್ಯಾಮತ್ ಲೇಕ್‌ನ ಚಾರ್ಲೀನ್ ರಿಮ್ಶಾ, ರಾಕ್‌ಅವೇ ಬೀಚ್ ಎಂಬುವವರು ಈ ಅಂಗಡಿಗೆ ಹೋಗಿದ್ದಾರೆ. ಈ ಸಮಯದಲ್ಲಿ ಅಲ್ಲಿ ಈ ಐಸ್ ಕ್ರೀಮ್ ಖರೀದಿ ಮಾಡಿದ್ದಾರೆ. ಈ ವೇಳೆ ತಮ್ಮ ತಾಯಿಯ ಬಗ್ಗೆ ನೆನಪಿಸಿದ್ದಾರೆ. ಒಂದುವರೆ ವರ್ಷಗಳವರೆಗೆ ನನ್ನ ತಾಯಿ ನನಗೆ ಎದೆಹಾಲುಣಿಸಿದರು, ಆದರೆ ನನಗೆ ಅದು ಖಂಡಿತವಾಗಿಯೂ ನೆನಪಿಲ್ಲ, ಆದ್ದರಿಂದ ಅದು ಇನ್ನೂ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಉಳಿದಿದೆ. ಇದೀಗ ಈ ಐಸ್ ಕ್ರೀಮ್ ಅದ್ಭುತ ಆನಂದವನ್ನು ನೀಡಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವ್ಹಾವ್​​​​ ಏನ್​​ ಖುಷಿ ನೋಡಿ ಈ ಆನೆಗೆ, ನದಿಯಲ್ಲಿ ಫುಲ್​​​ ಎಂಜಾಯ್​​​ ಮೂಡ್​​​ನಲ್ಲಿ ಗಜಲಕ್ಷ್ಮೀ

ಇದನ್ನೂ ಓದಿ
ಕಾರು ಡಿಕ್ಕಿಯಾಗಿ ಒದ್ದಾಡುತ್ತಿದ್ದ ಮರಿಯನ್ನು ಹಿಡಿದು ಗೋಳಾಡಿದ ತಾಯಿ ಕರಡಿ
ತಳ್ಳಾಟ, ತುಂಟಾಟದಲ್ಲಿ ಬ್ಯುಸಿ ಈ ಮರಿಯಾನೆಗಳು, ಈ ಕ್ಯೂಟ್ ದೃಶ್ಯ ನೋಡಿ
ಮಹಿಳೆಯ ಹಾಡಿಗೆ ಮನಸೋತ ಗಜರಾಜ
ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತೆ ಈ ಶ್ವಾನ

61 ವರ್ಷದ ಡೇಲ್ ಕಪ್ಲಾನ್ ಎಂಬುವವರು ಕೂಡ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಐಸ್ ಕ್ರೀಮ್​​ನಲ್ಲಿ ನನಗೆ ಏನು ಅಂತಹ ಅನುಭವ ಆಗಿಲ್ಲ. ಎಲ್ಲಾ ಐಸ್ ಕ್ರೀಮ್ ಎದೆ ಹಾಲು ಅಲ್ಲವೇ? ಎಲ್ಲಾ ಐಸ್ ಕ್ರೀಮ್ ಹಸುವಿನ ಕೆಚ್ಚಲಿನಿಂದ ಬರುವುದಿಲ್ಲವೇ?” ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಐಸ್ ಕ್ರೀಮ್​​ ಸವಿಯಲು ತುಂಬಾ ದೂರದಿಂದ ಬಂದಿದ್ದೇನೆ. ಈ ಐಸ್ ಕ್ರೀಮ್​​ನಲ್ಲಿ ವೆನಿಲ್ಲಾ-ರೀತಿಯ” ಪರಿಮಳವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇನ್ನೊಂದು ಮಹಿಳೆ ತನ್ನ ನಾಲ್ಕು ತಿಂಗಳ ಮಗನ ಜತೆಗೆ ಬಂದು ಐಸ್ ಕ್ರೀಮ್​​ ತಿಂದಿದ್ದೇನೆ, ಆದರೆ ಇದು ಮಾವಿನಹಣ್ಣಿನ ರುಚಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ