
ಮದುವೆ (marriage) ಮನೆ ಅಂದ್ರೆನೇ ಒಂಥರಾ ಸಂಭ್ರಮ. ಹೌದು, ಮನೆ ಮಂದಿ ಎಲ್ಲಾ ಒಟ್ಟು ಸೇರಿ ಸೇರಿ ಹಾಡು ಕುಣಿತ, ಮೋಜಿ ಮಸ್ತಿ ಮಾಡುತ್ತಾ ಸಂಭ್ರಮಿಸುತ್ತಿರುತ್ತಾರೆ. ಇನ್ನೊಂದೆಡೆ ಮದುವೆ ಮನೆಯಲ್ಲಿ ನಡೆಯುವ ತರ್ಲೆ ತಮಾಷೆಗಳಿಗೆ ಲೆಕ್ಕವೇ ಇರಲ್ಲ. ಇದಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಮದುವೆ ಮಂಟಪದ ವೇದಿಕೆಯ ಮೇಲೆ ಕುಳಿತ ವಧು ಕುರ್ಚಿ ಸಮೇತ ಕೆಳಕ್ಕೆ ಬಿದ್ದಿದ್ದು, ಆದರೆ ವರ ಮಾತ್ರ ಏನು ಆಗಿಲ್ಲ ಎನ್ನುವಂತೆ ಕುಳಿತಿದ್ದಾನೆ. ಈ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
kushvaha 9369 ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವೇದಿಕೆಯ ವಧು ವರರು ಕುಳಿತಿದ್ದಾರೆ. ಇದ್ದಕ್ಕಿದ್ದಂತೆ ವಧುವು ಕುರ್ಚಿ ಸಮೇತ ಕೆಳಗೆ ಬಿದ್ದಿದ್ದು, ಸಂಬಂಧಿಕರೆಲ್ಲರೂ ಓಡೋಡಿ ಬಂದು ಆಕೆಯನ್ನು ಎಬ್ಬಿಸುವ ಕೆಲಸ ಮಾಡಿದ್ದಾರೆ. ಆದರೆ ಪಕ್ಕದಲ್ಲೇ ಕುಳಿತ ವರ ಏನು ಆಗಿಲ್ಲ ಎನ್ನುವಂತೆ ನೋಡುತ್ತಾ ಕುಳಿತಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ : ಬೆಂಗಳೂರು: ಮದ್ಯಪಾನ ಮಾಡಿ ಪೊಲೀಸರ ಮೇಲೆಯೇ ಕಾರು ಹತ್ತಿಸಿದ ಆಸಾಮಿ! ಗಾಜು ಪುಡಿಗಟ್ಟಿದ ಪೋಲಿಸರು
ಈ ವಿಡಿಯೋವೊಂದು ಹದಿನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ವರನ ರಿಯಾಕ್ಷನ್ ಗೆ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ವರನಿಗೆ ಈ ಮದುವೆ ಇಷ್ಟವಿಲ್ಲ ಎಂದು ಕಾಣಿಸುತ್ತದೆ, ವಧು ಬಿದ್ದರೂ ಕೂಡ ಆಕೆಯನ್ನು ಮೇಲೆತ್ತಲಿಲ್ಲ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಗಂಡನನ್ನು ನಂಬಲೇಬೇಡಿ, ಇದು ನಿನಗೆ ಜೀವನ ಪಾಠ ಆಕೆಯ ಬುದ್ಧಿವಾದ ಹೇಳುವ ಮೂಲಕ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀನು ಗಂಡನಾಗುವುದಕ್ಕೂ ಪ್ರಯೋಜನವಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ದೃಶ್ಯ ನೋಡಿ ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ