ಮದುವೆ ಅಂದಾಕ್ಷಣ ಮನೆಯ ತುಂಬ ಜನ. ಎಲ್ಲರ ಮುಖದಲ್ಲಿ ಸಂತೋಷ. ವರ-ವಧುವಿಗೆ ಹೊಸ ಅನುಭವ. ಮೋಜು-ಮಸ್ತಿಯಲ್ಲಿ ಹೊಸ ಜೀವನಕ್ಕೆ ಕಾಲಿಡುವ ಒಂದು ಸಾಂಪ್ರದಾಯಿಕ ಆಚರಣೆಯದು. ಬಣ್ಣ-ಬಣ್ಣದ ಉಡುಪು ತೊಟ್ಟು ಮದುವೆ ಹಾಲ್ ತುಂಬಾ ಮಕ್ಕಳೆಲ್ಲಾ ಖುಷಿಯಿಂದ ಓಡಾಡುತ್ತಾರೆ. ಅದೆಷ್ಟೋ ವರ್ಷಗಳ ಬಳಿಗ ಮದುವೆಗೆಂದೇ ಸ್ನೇಹಿತರು ಬಂದಿರುವುದು ವರ-ವಧುವಿಗೆ ಸಂತಸ. ತಮಾಷೆಗಾಗಿ ಇಂದಿಷ್ಟು ಕಾಲೆಳೆಯುತ್ತಾ ಮೋಜು-ಮಸ್ತಿಯೊಂದಿಗೆ ಸಂಭ್ರಮ ಸುಸೂತ್ರವಾಗಿ ನೆರವೇರುತ್ತದೆ. ಮದುವೆಯಲ್ಲಿ, ಸ್ನೇಹಿತ ಕೊಟ್ಟ ಉಡುಗೊರೆ ನೋಡಿ ವಧು ಕಂಗಾಲಾಗಿದ್ದಾಳೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.
ಸಂಭ್ರಮದ ಜತೆಗೆ ಒಂದಿಷ್ಟು ಉಡುಗೊರೆ, ತುಂಟಾಟ, ವಧು-ವರದದ ಸ್ನೇಹಿತರೆಲ್ಲಾ ಒಟ್ಟುಗೂಡಿ ವಧು ವರರ ಕಾಲೆಡೆಯುತ್ತಾ ತಮಾಷೆ ಮಾಡುತ್ತಾ ಮನೆತುಂಬ ತಿರುಗಾಡುತ್ತಾರೆ. ಇಲ್ಲೋರ್ವ ಸ್ನೇಹಿತ ಮಧುವಿಗೆ ಒಂದು ಸರ್ಪ್ರೈಸ್ ಗಿಫ್ಟ್ ನೀಡಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಮದುವೆಯಲ್ಲಿ ಉಡುಗೊರೆ ಏನು ಬರಬಹುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಬರುವ ಉಡುಗೊರೆಯ ಕುರಿತಾಗಿ ನಿರೀಕ್ಷೆಗಳೂ ಇರಬಹುದು. ಇನ್ನೊಂದಿಷ್ಟು ಗಿಫ್ಟ್ಗಳು ನಗು ತರಿಸುತ್ತವೆ. ಸ್ನೇಹಿತರು ಪ್ಲಾನ್ ಮಾಡಿ ತಂದ ಗಿಫ್ಟ್ ನೋಡಿದ್ರೆ ನೀವೂ ನಗುತ್ತೀರಾ.
ಸ್ನೇಹಿರತೆಲ್ಲಾ ಸೇರಿ ಗಿಫ್ಟ್ ಬಾಕ್ಸ್ನಿಂದ ಒಂದೊಂದೆ ಉಡುಗೊರೆಯನ್ನು ಹೊರತೆಗೆಯುತ್ತಾರೆ. ಮೊದಲಿಗೆ ಅಡುಗೆ ಮಾಡುವ ಸೌಟು, ಸಿಲಿಂಡರ್ ಹೀಗೆ ಒಂದಾದ ಮೇಲೊಂದು ಗಿಫ್ಟ್ಗಳನ್ನು ವಧುವಿಗೆ ನೀಡುತ್ತಾರೆ. ಕೊನೆಯಲ್ಲಿ ರೊಟ್ಟಿ ತಟ್ಟುವ ಲಟ್ಟಣಿಗೆಯನ್ನು ವಧುವಿನ ಕೈಯಲ್ಲಿ ಹಿಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮೊದಲು ವಿಡಿಯೋ ಹಂಚಿಕೊಳ್ಳಲಾಗಿದೆ. ನಂತರ ಫೇಸ್ಬುಕ್, ಟ್ವಿಟರ್ ಹೀಗೆ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡುತ್ತಿದ್ದಂತೆಯೆ ನೆಟ್ಟಿಗರು, ಇನ್ನುಮುಂದೆ ವರನ ಕಥೆ ಮುಗಿಯಿತು. ವಧುವಿನ ಕೈಯಲ್ಲಿ ರೊಟ್ಟಿ ತಟ್ಟುವ ಲಟ್ಟಣಿಗೆ ಸಿಕ್ಕರೆ ಕೇಳಬೇಕೆ? ಎಂದು ತಮಾಷೆ ಮಾಡಿದ್ದಾರೆ. ಸ್ನೇಹಿತರು ಬಾರಿ ಕಿಲಾಡಿಗಳು.. ಪ್ಲಾನ್ ಮಾಡಿ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದಾರೆ ಎಂದು ಇನ್ನು ಕೆಲವರು ನಗುತ್ತಾ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?
Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!
Published On - 2:46 pm, Wed, 9 June 21