AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಆತ್ಮಕತೆ ಬಿಡುಗಡೆ ವೇಳೆಯೇ ಇಂದಿರಾ ಗಾಂಧಿ ಕುಟುಂಬದ 1981ರ ವಿಡಿಯೋ ವೈರಲ್

ಸೋನಿಯಾ ಗಾಂಧಿಯವರ ಆತ್ಮಕತೆ ಬಿಲಾಂಗಿಂಗ್ ಬಿಡುಗಡೆಯಾಗುವ ಸಂದರ್ಭದಲ್ಲೇ ಗಾಂಧಿ ಕುಟುಂಬದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ 1981ರ ಹಳೆಯ ವಿಡಿಯೋ ವೈರಲ್ ಆಗಿದೆ. ಇಂದಿರಾ ಗಾಂಧಿಯೊಂದಿಗೆ ಸೊಸೆಯಂದಿರು, ಮೊಮ್ಮಕ್ಕಳು ಕುಳಿತು ಊಟ ಮಾಡುತ್ತಾ, ರಾಜಕೀಯದ ಬಗ್ಗೆ ಚರ್ಚೆ ನಡೆಸುತ್ತಿರುವ ವಿಡಿಯೋ ಇದಾಗಿದ್ದು,  ಐಷಾರಾಮಿ ಜೀವನದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸೋನಿಯಾ ಆತ್ಮಕತೆ ಬಿಡುಗಡೆ ವೇಳೆಯೇ ಇಂದಿರಾ ಗಾಂಧಿ ಕುಟುಂಬದ 1981ರ ವಿಡಿಯೋ ವೈರಲ್
Indira Gandhi Video
ಸುಷ್ಮಾ ಚಕ್ರೆ
| Edited By: |

Updated on:Nov 10, 2026 | 10:58 AM

Share

ನವದೆಹಲಿ, ನವೆಂಬರ್ 10: ಭಾರತದ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವಿ ಕುಟುಂಬವೆನಿಸಿದ ನೆಹರೂ-ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಹಳೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. 1981ರ ಈ ವಿಡಿಯೋದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕುಟುಂಬದ ಇತರ ಸದಸ್ಯರು ಒಟ್ಟಿಗೆ ಇರುವ ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.

ಸಂಜಯ್ ಗಾಂಧಿ ಅವರ ನಿಧನದ ನಂತರದ ರಾಜಕೀಯ ಬೆಳವಣಿಗೆಗಳು ಮತ್ತು ರಾಜೀವ್ ಗಾಂಧಿ ಅವರ ರಾಜಪ್ರವೇಶದ ಕಾಲಘಟ್ಟಕ್ಕೆ ಸೇರಿರುವ ಈ ವಿಡಿಯೋ ಈಗ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಆಗ ಇಂದಿರಾ ಗಾಂಧಿಯವರ ಕುಟುಂಬದ ಜೀವನವಿಧಾನ ಹೇಗಿತ್ತು ಎಂಬುದನ್ನು ಈ ವಿಡಿಯೋ ಸೆರೆಹಿಡಿದಿದೆ. ಈ ವಿಡಿಯೋದಲ್ಲಿ ಸಣ್ಣ ಹುಡುಗನಾಗಿದ್ದ ರಾಹುಲ್ ಗಾಂಧಿ ತನ್ನ ಅಜ್ಜಿಯ ಜೊತೆ ದೇಶದ ಅತ್ಯುನ್ನತ ರಾಜಕೀಯ ಅಧಿಕಾರ ಹಾಗೂ ಕುಟುಂಬದ ನಂಟಿನ ಕುರಿತು ಅತ್ಯಂತ ಸಹಜವಾಗಿ ಚರ್ಚೆ ನಡೆಸಿರುವುದನ್ನು ನೋಡಬಹುದು. ಆ ಕಾಲಘಟ್ಟದಲ್ಲಿ ದೇಶಾದ್ಯಂತ ವ್ಯಾಪಕವಾಗಿದ್ದ ಬಡತನ ಮತ್ತು ಆರ್ಥಿಕ ಸವಾಲುಗಳ ನಡುವೆಯೂ, ಗಾಂಧಿ ಕುಟುಂಬದ ಐಷಾರಾಮಿ ಜೀವನ, ಅದ್ದೂರಿ ಭೋಜನದ ಈ ವಿಡಿಯೋ ಭಾರೀ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಫೋಟೋ ನೋಡಿ ಕಣ್ಣೀರಿಟ್ಟಿದ್ದ ಇಂದಿರಾ ಗಾಂಧಿ; ಸೋನಿಯಾ ಗಾಂಧಿ ಆತ್ಮಕತೆಗೆ ಅಕಾಲಿ ದಳ ಆಕ್ಷೇಪ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕತೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ, 1981ರ ಗಾಂಧಿ ಕುಟುಂಬದ ಈ ಅಪರೂಪದ ಹಳೆಯ ವೀಡಿಯೊ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

ಸಂಜಯ್ ಗಾಂಧಿ ಅವರ ನಿಧನದ ನಂತರ ನಡೆದ ಅಮೇಥಿ ಲೋಕಸಭಾ ಉಪಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರು ಬೃಹತ್ ಅಂತರದ ಭವ್ಯ ಗೆಲುವು ಸಾಧಿಸಿದ ಸಂದರ್ಭದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿತ್ತು.

ವೈರಲ್ ವೀಡಿಯೊದಲ್ಲಿ ಏನಿದೆ?:

ಈ ವಿಡಿಯೋದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಮನೇಕಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕುಟುಂಬದ ಇತರ ಸದಸ್ಯರು ಊಟ ಮಾಡುತ್ತಿರುವಾಗ, ಬಾಲಕ ರಾಹುಲ್ ಗಾಂಧಿ ತನ್ನ ಅಜ್ಜಿ ಇಂದಿರಾ ಗಾಂಧಿಯವರೊಂದಿಗೆ ರಾಜಕೀಯದ ಕುರಿತು ಹರಟುತ್ತಿರುವುದು ಸೆರೆಯಾಗಿದೆ.

ಇದನ್ನೂ ಓದಿ: ‘ನಿನ್ನನ್ನೂ ಕೊಂದುಬಿಡುತ್ತಾರೆ!’; ಪ್ರಧಾನಿಯಾಗದಂತೆ ರಾಜೀವ್ ಗಾಂಧಿ ಬಳಿ ಬೇಡಿಕೊಂಡಿದ್ದ ಸೋನಿಯಾ ಗಾಂಧಿ

ಈ ವಿಡಿಯೋ ವೀಕ್ಷಿಸಿದ ಸಾರ್ವಜನಿಕರು ಮತ್ತು ನೆಟ್ಟಿಗರು, 1982ರಲ್ಲಿ ಕುಟುಂಬದಿಂದ ಹೊರಬರುವ ಮೊದಲೇ ಮನೇಕಾ ಗಾಂಧಿ ಯಾವ ರೀತಿ ತಮ್ಮ ಮನೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು ಎಂಬ ಕುರಿತು ಚರ್ಚಿಸುತ್ತಿದ್ದಾರೆ. ಇದು ಗಾಂಧಿ ಕುಟುಂಬದೊಳಗಿನ ಆಂತರಿಕ ಮನಸ್ತಾಪ ಹಾಗೂ ಬಿರುಕನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಆ ಕಾಲಘಟ್ಟದಲ್ಲಿ (1980ರ ದಶಕದ ಆರಂಭ) ಭಾರತದಲ್ಲಿ ಶೇ. 48ರಿಂದ 51ರಷ್ಟು ಭೀಕರ ಬಡತನವಿತ್ತು. ಅಂತಹ ಸನ್ನಿವೇಶದಲ್ಲಿ ಅಧಿಕಾರ ಹಾಗೂ ರಾಜಕೀಯದ ಕುರಿತು ಕುಟುಂಬವು ಅತ್ಯಂತ ಸಹಜವಾಗಿ ಮತ್ತು ಪ್ರತ್ಯೇಕ ಸೌಲಭ್ಯಗಳೊಂದಿಗೆ ಚರ್ಚಿಸುತ್ತಿದ್ದ ಶೈಲಿಯು “ರಾಜವಂಶದ ಸೌಲಭ್ಯ” ಮತ್ತು ಸಾಮಾನ್ಯ ಜನರಿಂದ ದೂರವಿದ್ದ ಅವರ ಸ್ವಂತ ಜಗತ್ತನ್ನು ತೋರಿಸುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Tue, 10 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More