AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಅಧಿಕೃತ ಎಂಟ್ರಿ: ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ರೀಲ್ ಹಂಚಿಕೊಂಡ ಕಾಂಗ್ರೆಸ್ ನಾಯಕಿ

ಸೋನಿಯಾ ಗಾಂಧಿ 79ರ ಇಳಿವಯಸ್ಸಿನಲ್ಲಿ ಇನ್‌ಸ್ಟಾಗ್ರಾಮ್‌ಗೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಅವರ ಮೊದಲ ಪೋಸ್ಟ್ ಬಹುನಿರೀಕ್ಷಿತ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕದ ರೀಲ್ ಆಗಿದೆ. ಪ್ರಿಯಾಂಕಾ ಗಾಂಧಿ ಜೊತೆ ಅಪರೂಪದ ಕುಟುಂಬ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರೊಂದಿಗಿನ ಜೀವನ, ರಾಜಕೀಯ ಪ್ರವೇಶದ ವಿವರಗಳಿರುವ ಈ ಪುಸ್ತಕ ನವೆಂಬರ್ 10, 2026ಕ್ಕೆ ಬಿಡುಗಡೆಯಾಗಲಿದೆ.

ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಅಧಿಕೃತ ಎಂಟ್ರಿ: ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ರೀಲ್ ಹಂಚಿಕೊಂಡ ಕಾಂಗ್ರೆಸ್ ನಾಯಕಿ
ಸೋನಿಯಾ ಗಾಂಧಿ Image Credit source: PTI
ನಯನಾ ರಾಜೀವ್
|

Updated on:Oct 22, 2026 | 1:05 PM

Share

ನವದೆಹಲಿ, ಅಕ್ಟೋಬರ್ 22: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಹಾಗೂ ಸಂಸದೀಯ ಮಂಡಳಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. 79ರ ವಯಸ್ಸಿನಲ್ಲಿ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿರುವ ಅವರು, ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಪುಸ್ತಕದ ಮೊದಲ ನೋಟದ ವಿಡಿಯೋ ರೀಲ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈವರೆಗೆ ಫೇಸ್‌ಬುಕ್, ಎಕ್ಸ್ ಅಥವಾ ಇನ್‌ಸ್ಟಾಗ್ರಾಮ್‌ನಂತಹ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯ ಖಾತೆ ಹೊಂದಿರದ ಸೋನಿಯಾ ಗಾಂಧಿ, ಇದೇ ಮೊದಲ ಬಾರಿಗೆ ಇನ್‌ಸ್ಟಾಗ್ರಾಮ್ ಮೂಲಕ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿದ್ದಾರೆ.

ಮೊದಲ ರೀಲ್‌ನಲ್ಲಿ ಏನಿದೆ?

ಹಂಚಿಕೊಳ್ಳಲಾದ ಭಾವನಾತ್ಮಕ ವಿಡಿಯೋದಲ್ಲಿ, ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯ ಮುದ್ರಿತ ಪ್ರತಿಯನ್ನು ಮೊದಲ ಬಾರಿಗೆ ಕೈಗೆತ್ತಿಕೊಂಡು ಪುಟಗಳನ್ನು ತಿರುಗಿಸುವುದನ್ನು ಕಾಣಬಹುದು. ಪಕ್ಕದಲ್ಲೇ ಕುಳಿತಿರುವ ಮಗಳು ಪ್ರಿಯಾಂಕಾ ಗಾಂಧಿ ಅವರಿಗೆ ಪುಸ್ತಕದಲ್ಲಿರುವ ಹಳೆಯ ಅಪರೂಪದ ಛಾಯಾಚಿತ್ರಗಳನ್ನು ತೋರಿಸುತ್ತಾ, “ಪ್ರಿಯಾಂಕಾ, ನೋಡು ಇಲ್ಲಿ ತುಂಬಾ ಹಳೆಯ ಚಿತ್ರಗಳಿವೆ” ಎಂದು ಖುಷಿಯಿಂದ ಹೇಳುತ್ತಾರೆ. ಪುಸ್ತಕದಲ್ಲಿ ಪತಿ ದಿ. ರಾಜೀವ್ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಅವರ ಬಾಲ್ಯದ ಹಲವು ಕೌಟುಂಬಿಕ ಕ್ಷಣಗಳ ಚಿತ್ರಗಳಿವೆ. ವೀಡಿಯೊದ ಕೊನೆಯಲ್ಲಿ ಅವರು ಸಂಭ್ರಮದ ಸಂಕೇತವಾಗಿ ಸಿಹಿತಿಂಡಿಗಳನ್ನು ಹಂಚುವುದು ಕಂಡುಬಂದಿದೆ.

View this post on Instagram

A post shared by Sonia Gandhi (@soniagandhi)

ಪೋಸ್ಟ್‌ನಲ್ಲಿ ಸೋನಿಯಾ ಬರೆದಿರುವುದೇನು?

ಎಲ್ಲರಿಗೂ ನಮಸ್ಕಾರ, ಈ ಸುಂದರ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗುತ್ತಿದೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯ ಮೊದಲ ನೋಟ ಇಲ್ಲಿದೆ. ಇದು ಪ್ರೀತಿ, ಕರ್ತವ್ಯ, ಅಗಲಿಕೆಯ ನೋವು ಮತ್ತು ಬದುಕಿನ ನೈಜ ಅರ್ಥವನ್ನು ಕಂಡುಕೊಳ್ಳುವ ಪಯಣದ ಕಥೆ. ಈ ಪುಸ್ತಕವನ್ನು ನಿಮ್ಮ ಕೈಗಿಡಲು ನಾನು ಕಾತರಳಾಗಿದ್ದೇನೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ದಿಢೀರನೆ ಅನಾರೋಗ್ಯದ ಸಮಸ್ಯೆ; ಶಿಮ್ಲಾದ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ತಮ್ಮ ಪೋಸ್ಟ್‌ನಲ್ಲಿ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪ್ರಕಾಶನ ಸಂಸ್ಥೆಯಾದ ಹಾರ್ಪರ್‌ಕಾಲಿನ್ಸ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಪ್ರಸ್ತುತ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕಾಂಗ್ರೆಸ್ ಅಧಿಕೃತ ಖಾತೆ, ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಪ್ರಕಾಶನ ವಿವಾದ ಮತ್ತು ಹೆಚ್ಚುವರಿ ಮಾಹಿತಿ

ಪೆಂಗ್ವಿನ್ ಸಂಸ್ಥೆಯಿಂದ ನಿರಾಕರಣೆ: ಈ ಪುಸ್ತಕ ಪ್ರಕಟಣೆಯ ಹಂತದಲ್ಲೇ ಭಾರಿ ವಿವಾದ ಸೃಷ್ಟಿಸಿತ್ತು. ಪ್ರಮುಖ ಪ್ರಕಾಶನ ಸಂಸ್ಥೆ ‘ಪೆಂಗ್ವಿನ್ ಇಂಡಿಯಾ’ ಈ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ (RSS) ಕುರಿತಾಗಿರುವ ಕೆಲವು ಕಟು ಟೀಕೆಗಳ ಭಾಗಗಳಿಗೆ ಕತ್ತರಿ ಹಾಕುವಂತೆ ಕೋರಿತ್ತು. ಆದರೆ ಸೋನಿಯಾ ಗಾಂಧಿ ಯಾವುದೇ ಭಾಗವನ್ನು ತೆಗೆದುಹಾಕಲು ಒಪ್ಪದ ಕಾರಣ, ಪೆಂಗ್ವಿನ್ ಸಂಸ್ಥೆ ಇದನ್ನು ಪ್ರಕಟಿಸಲು ನಿರಾಕರಿಸಿತ್ತು. ನಂತರ ಪ್ರತಿಷ್ಠಿತ ‘ಹಾರ್ಪರ್‌ಕಾಲಿನ್ಸ್’ ಸಂಸ್ಥೆ ಇದನ್ನು ಪ್ರಕಟಿಸಲು ಮುಂದೆ ಬಂದಿದೆ.

ಪುಸ್ತಕದಲ್ಲಿ ಏನೆಲ್ಲಾ ಇರಲಿದೆ?:

ಈ ಆತ್ಮಚರಿತ್ರೆಯು ನವೆಂಬರ್ 10, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇಟಲಿಯ ಸಣ್ಣ ಪಟ್ಟಣದಲ್ಲಿ ಕಳೆದ ಅವರ ಬಾಲ್ಯ, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿಯವರನ್ನು ಭೇಟಿಯಾದ ರೋಚಕ ದಿನಗಳು, ಮದುವೆ, ಭಾರತದ ಪ್ರಭಾವಿ ನೆಹರು-ಗಾಂಧಿ ಕುಟುಂಬದ ಸೊಸೆಯಾಗಿ ಬಂದ ಅನುಭವ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ಕರಾಳ ದಿನಗಳು ಹಾಗೂ ಅಂತಿಮವಾಗಿ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಭಾರತೀಯ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ ಎರಡು ದಶಕಗಳ ಕಾಲ ಪಕ್ಷ ಮುನ್ನಡೆಸಿದ ಒಳನೋಟಗಳನ್ನು ಈ ಪುಸ್ತಕ ಒಳಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:03 pm, Thu, 22 October 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಬೆಂಗಳೂರಿನಲ್ಲಿ ನಿಯಮ ಪಾಲಿಸದ ಪಿಜಿಗಳಿಗೆ ಜಿಬಿಎ ಬಿಗ್ ಶಾಕ್
ಬೆಂಗಳೂರಿನಲ್ಲಿ ನಿಯಮ ಪಾಲಿಸದ ಪಿಜಿಗಳಿಗೆ ಜಿಬಿಎ ಬಿಗ್ ಶಾಕ್
ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಆಂಧ್ರದಲ್ಲಿ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು
ಆಂಧ್ರದಲ್ಲಿ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್
ವಿಧಾನಸೌಧ ಬಾಂಬ್ ಸ್ಫೋಟದ ನಕಲಿ ರೀಲ್ಸ್​​​ ಹಾಕಿದ್ದ ಯುವಕ ಅರೆಸ್ಟ್
ವಿಧಾನಸೌಧ ಬಾಂಬ್ ಸ್ಫೋಟದ ನಕಲಿ ರೀಲ್ಸ್​​​ ಹಾಕಿದ್ದ ಯುವಕ ಅರೆಸ್ಟ್