ಮದುವೆಯ ಅನುಭವ ಒಬ್ಬೊಬ್ಬರಿಗೆ ಒಂದೊಂದು ರೀತಿ. ಒಂದೊಂದು ಮದುವೆಯ ವಿಶೇಷತೆಗಳೂ ಒಂದೊಂದು ರೀತಿ. ಮದುವೆ ಎಂಬ ಕಾರ್ಯಕ್ರಮ ಎಷ್ಟು ಸಂಭ್ರಮ ತರುತ್ತದೋ ಕೆಲವೊಮ್ಮೆ ಅಷ್ಟೇ ಆತಂಕ, ಅವಾಂತರಗಳನ್ನೂ ಸೃಷ್ಟಿ ಮಾಡುತ್ತದೆ. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದಂತೆ, ಹಲವು ಬಾರಿ ಮದುವೆ ಸಮಾರಂಭದಲ್ಲಿ ವಧುವಿಗೆ, ವರನಿಗೆ ಅಥವಾ ನೆರೆದ ಸಂಬಂಧಿಕರಿಗೆ ಪೇಚಾಗುವ ಪರಿಸ್ಥಿತಿಯೂ ಎದುರಾಗುತ್ತದೆ.
ಇತ್ತೀಚೆಗೆ ಇಂತಹ ಹಲವು ಪ್ರಕರಣಗಳು ವೈರಲ್ ಆಗಿದ್ದು ನಾವು ಕಂಡಿದ್ದೇವೆ. ಹುಡುಗ ಅಥವಾ ಹುಡುಗಿ ಏನೋ ವಿಚಿತ್ರವಾಗಿ ನಡೆದುಕೊಂಡು ಸುದ್ದಿಯಾಗುತ್ತಾರೆ. ಅಲ್ಲಿನ ವಿಶೇಷವೊಂದು ವೈರಲ್ ಆಗುತ್ತದೆ. ಇಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಮದುಮಗನಿಗೆ ಸಿಹಿ ತಿನ್ನಿಸಲು ಬಂದ ಮದುಮಗಳು ಸಿಟ್ಟಾಗಿ ಕೈಯಲ್ಲಿದ್ದ ಸಿಹಿತಿನಿಸನ್ನು ಹುಡುಗನ ಮುಖಕ್ಕೆ ಎಸೆದಿದ್ದಾಳೆ.
ಈ ವಿಡಿಯೋ ಕಂಡ ನೆಟ್ಟಿಗರು ಸುಮ್ಮನೆ ಉಳಿದಿಲ್ಲ. ವಿವಿಧ ಅಭಿಪ್ರಾಯಗಳ ಕಮೆಂಟ್ ಮಾಡುತ್ತಾ, ವಿಡಿಯೋ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡುಬಂದಂತೆ, ಹೊಸದಾಗಿ ಮದುವೆ ಆಗಿರುವ ಹುಡುಗಿ, ಹುಡುಗನಿಗೆ ಸಿಹಿತಿಂಡಿ ತಿನ್ನಿಸಲು ಹೊರಟಿದ್ದಾಳೆ. ಆ ವೇಳೆ, ಮದುಮಗ ಸಿಹಿತಿಂಡಿ ತಿನ್ನಲು ತಡಮಾಡಿದ್ದಾನೆ. ಬಳಿಕ, ಹುಡುಗಿಯ ಕೈ ಸಮೀಪಕ್ಕೆ ಎಳೆದು ತಿನ್ನಲು ಹೊರಟಿದ್ದಾನೆ. ಇದರಿಂದ ಆಕೆ ಸಿಟ್ಟಾಗಿದ್ದಾಳೆ. ಅದರಿಂದ ಆಕೆ ಸಿಹಿತಿಂಡಿಯನ್ನು ಬಲವಾಗಿ ಎಸೆದಿದ್ದಾಳೆ.
ಇದರಿಂದ ಮದುವೆ ವೇದಿಕೆಯಲ್ಲಿ ಇದ್ದ ಜನರು ಶಾಕ್ ಆಗಿದ್ಧಾರೆ. ಆಶ್ವರ್ಯಚಕಿತರಾಗಿ ನೋಡಿದ್ದಾರೆ. ಏನಾಯ್ತು ಎಂದು ಗಲಿಬಿಲಿಗೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಅವರ ನಡುವೆ ಏನಾಗಿರಬಹುದು ಎಂದು ಅಂದಾಜಿನ ಗುಂಡು ಹೊಡೆದು ಚರ್ಚಿಸುತ್ತಿದ್ದಾರೆ.
ವಿವಾಹ ವೇದಿಕೆಯಲ್ಲಿ ಏನಾಯ್ತು? ವಿಡಿಯೋ ನೋಡಿ
ಈ ವಿಡಿಯೋ ಇಲ್ಲಿವರೆಗೆ ಬಹಳಷ್ಟು ಶೇರ್ ಆಗಿದೆ. ಸುಮಾರು 43,000 ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಭಿನ್ನವಿಭಿನ್ನ ಕಮೆಂಟ್ಗಳು ಕೂಡ ಕೇಳಿಬಂದಿದೆ.
ಇದನ್ನೂ ಓದಿ: Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್ ಪ್ಲಾನ್! ವಿಡಿಯೋ ವೈರಲ್
Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಸನ್ನಿ ಲಿಯೋನ್; ವೈರಲ್ ಆಯ್ತು ನಟಿಯ ಹೊಸ ಫೋಟೋ