ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ರೀಲ್ಸ್ ಹುಚ್ಚಿಗೆ ಬಿದ್ದು ಯುವಜನತೆ ಚಿತ್ರ ವಿಚಿತ್ರ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಲೈಕ್ಸ್, ವೀವ್ಸ್, ಫಾಲೋವರ್ಸ್ ಗಾಗಿ ಹುಚ್ಚು ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಇಂತಹ ವಿಡಿಯೋಗಳು ವೈರಲ್ ಆಗುವುದು ಮಾತ್ರವಲ್ಲದೆ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುತ್ತವೆ. ಇದೀಗ ಇಲ್ಲೊಬ್ಬ ಬ್ರಿಟೀಷ್ ಮಾಡೆಲ್ ಕೂಡಾ ಇದೇ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಆಕೆ ಸೂಪರ್ ಮಾರ್ಕೆಟ್ ಒಂದರಲ್ಲಿ ತಾನು ಧರಿಸಿದ್ದ ಅಂಡರ್ ವೇರ್ ಕಳಚಿ ಅದನ್ನು ಅಲ್ಲಿದ್ದ ಫುಡ್ ಟ್ರೇಯಲ್ಲಿ ಬಚ್ಚಿಡುವ ವಿಡಿಯೋವೊಂದನ್ನು ಮಾಡಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಆಕೆ ತಿನ್ನೋ ಆಹಾರಕ್ಕೆ ಅವಮಾನ ಮಾಡಿದ್ದಾಳೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಬ್ರಿಟಿಷ್ ಮಾಡೆಲ್ ಹಾಗೂ ಇನ್ಫ್ಯೂಯೆನ್ಸರ್ ಆಗಿರುವ ಕ್ಲೋಯ್ ಲೋಪೆಜ್ ಎಂಬಾಕೆ ಇತ್ತೀಚಿಗೆ ಸ್ಪೇನ್‌ನ ಮರ್ಕಡೋನಾ ಸೂಪರ್‌ಮಾರ್ಕೆಟ್‌ನಲ್ಲಿ ತಾನು ಧರಿಸಿದ್ದ ಅಂಡರ್ ವೇರ್ ಬಿಚ್ಚಿ ಅದನ್ನು ಫುಡ್ ಟ್ರೇ ನಲ್ಲಿ ಬಚ್ಚಿಡುವ ಒಂದು ವಿಡಿಯೋವನ್ನು ಮಾಡಿದ್ದಾಳೆ.
ಈ ವಿಡಿಯೋವನ್ನು ಸ್ವತಃ ಮಾಡೆಲ್ (chloejadelopez) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ವಿಡಿಯೋದಲ್ಲಿ ಸಣ್ಣ ಸ್ಕರ್ಟ್ ಮತ್ತು ಟಾಪ್ ಧರಿಸಿ ಸೂಪರ್ ಮಾರ್ಕೆಟ್ ಗೆ ಎಂಟ್ರಿ ಕೊಟ್ಟ ಈ ಮಾಡೆಲ್ ಅಲ್ಲೇ ತಾನು ಧರಿಸಿದ್ದ ಅಂಡರ್ ವೇರ್ ಕಳಚಿ, ಆ ಒಳ ಉಡುಪನ್ನು ಬ್ರೆಡ್ ಗಳ ರಾಶಿಯಿದ್ದ ಫುಡ್ ಟ್ರೇ ನಲ್ಲಿ ಬಚ್ಚಿಡುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕರೆಂಟ್ ಇಲ್ಲದೆ ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಮಾಡಿದ ಜನರು
ಆಗಸ್ಟ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ತಮಾಷೆಯ ವಿಷಯವಲ್ಲ, ತಿನ್ನೋ ಆಹಾರಕ್ಕೆ ಗೌರವ ಕೊಡುವುದನ್ನು ಕಲಿಯಿರಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇಂತಹ ಹೀನ ಕೃತ್ಯ ಮಾಡಿದ್ದಕ್ಕಾಗಿ ಆಕೆ ಯಾಕೆ ಇನ್ನೂ ಜೈಲಿಗೆ ಹೋಗಿಲ್ಲ’ ಎಂದು ಕೇಳಿದ್ದಾರೆ. ಇನ್ನೂ ಅನೇಕರು ಆಕೆ ಆಹಾರಕ್ಕೆ ಅಗೌರವಕ್ಕೆ ತೋರಿದ್ದಾಳೆ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ