
ಹನಿಮೂನ್ ಬಗ್ಗೆ ಹಲವು ದಂಪತಿಗಳು ಹಂಚಿಕೊಂಡ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದರಲ್ಲಿ ಹನಿಮೂನ್ನಲ್ಲಿ ತಮ್ಮ ಸಂಗಾತಿಯ ಜತೆಗೆ ಕಳೆದ ಅದ್ಭುತ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಕೆಲವೊಂದು ಅತೀಕಾರವಾಗಿರುತ್ತದೆ. ಇದೀಗ ಇಲ್ಲೊಂದು ಪೋಸ್ಟ್ ಅದೇ ರೀತಿ ವೈರಲ್ ಆಗಿದೆ. ಆದರೆ ಇದು ತುಂಬಾ ನಕಾರಾತ್ಮಕವಾಗಿ ವೈರಲ್ ಆಗಿದೆ. ಅಮೆರಿಕ ಮೂಲದ ಉದ್ಯಮಿಯೊಬ್ಬರು ತಮ್ಮ ಹನಿಮೂನ್ ಕಥೆಯನ್ನು ಲಿಂಕ್ಡ್‌ಇನ್‌ನಲ್ಲಿ (foreign countries) ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತಮಾಷೆ ಮಾಡಲು ಈ ಪೋಸ್ಟ್ ಹಂಚಿಕೊಂಡಿದರು. ಇದೀಗ ಈ ಪೋಸ್ಟ್ ಭಾರೀ ಅಪಹಾಸ್ಯಕ್ಕೆ ಕಾರಣವಾಗಿದೆ. ರಾಕೆಟ್ ಕ್ಲಿಕ್ಸ್‌ನ ಅಧ್ಯಕ್ಷ ಮತ್ತು ಸ್ಟರ್ಲಿಂಗ್ ಲಾಯರ್ಸ್ ಎಲ್‌ಎಲ್‌ಸಿಯ ಸಹ-ಸಂಸ್ಥಾಪಕ ಆಂಥೋನಿ ಕಾರ್ಲ್ಸ್ (Anthony Karls) ಈ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
ಆಂಥೋನಿ ಕಾರ್ಲ್ಸ್ ತಮ್ಮ ಹನಿಮೂನ್ನಲ್ಲಿ ಹಾಸಿಗೆ ಒದ್ದೆ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ನಾನು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣವಾದ ಹನಿಮೂನ್ ಮಾಡಿಕೊಳ್ಳಲು ಸಿಯಾಟಲ್‌ಗೆ ಹೋಗಿದ್ದೆ. ಅಲ್ಲಿ ಪತ್ನಿ ಜತೆಗೆ ಅದ್ಭುತ ಕ್ಷಣಗಳನ್ನು ಕಳೆಯಬೇಕು ಎಂದು ಕನಸು ಹೊತ್ತುಕೊಂಡು ಹೋಗಿದ್ದೇನೆ, ಈ ವೇಳೆ ಅಲ್ಲಿನ ಮೀನು ಮಾರುಕಟ್ಟೆಗೆ ಭೇಟಿ ನೀಡಿ, ವಿವಿಧ ರೀತಿ ಮೀನುಗಳನ್ನು ನೋಡಿದೆ, ಆದರೆ ಒಂದರ ಬಗ್ಗೆಯೂ ಗೊತ್ತಿರಲಿಲ್ಲ. ಕೊನೆಗೂ ಏಡಿ ತೆಗೆದುಕೊಂಡು, ಅಲ್ಲಿಯೇ ಅದರ ಮಸಾಲೆಯುಕ್ತ ಸೂಪ್ ಮಾಡಿ ಕುಡಿದು ಬಂದಿದ್ದೇವು, ಅದರೂ ಅದು ತುಂಬಾ ಖಾರವಾಗಿತ್ತು. ಸೇವಿಸಲು ಅಷ್ಟೇ ರುಚಿಯಾಗಿತ್ತು. ಅದನ್ನು ಕುಡಿದು ಬಂದು ಸಖತ್ ನಿದ್ದೆ ಬಂದಿದೆ. ನನಗೆ ಎಚ್ಚರವಾಗಿದ್ದು ಬೆಳಿಗ್ಗೆ 3 ಗಂಟೆಗೆ. ಎಚ್ಚರವಾದಾಗ ಬೆಡ್ ಎಲ್ಲ ಒದ್ದೆಯಾಗಿದೆ. ನಿದ್ರೆಯಲ್ಲೇ ನಾನು ಮೂತ್ರ ಮಾಡಿದ್ದೇನೆ ಎಂದು ಆಂಥೋನಿ ಕಾರ್ಲ್ಸ್ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.
ನೀವು ನಿದ್ರೆಯಲ್ಲಿ ಮೂತ್ರ ಮಾಡಿದ್ದೀರಾ ಎಂದು ಈ ಬಗ್ಗೆ ತನ್ನ ಹೆಂಡತಿ ಹೇಳಿದ್ದಾಳೆ. ಇದು ಒಳ್ಳೆಯದು ಅಥವಾ ಕೆಟ್ಟದೋ ಎಂಬುದು ನನಗೆ ಗೊತ್ತಿಲ್ಲ, ಇವಾಗಲ್ಲೂ ಅದನ್ನು ನಾವು ನೆನಪಿಸಿ ನಗುತ್ತೇವೆ ಎಂದು ಹೇಳಿದ್ದಾರೆ. ಇಷ್ಟು ದೊಡ್ಡ ಉದ್ಯಮಿಯಾದರು, ನಾನು ಇಂತಹ ಚಿಕ್ಕ ವಿಷಯವನ್ನು ಹಾಗೂ ಇದು ನನ್ನ ವೈಯಕ್ತಿಕ ವಿಚಾರವಾದರೂ ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಏಕೆಂದರೆ ಕೆಲವರು ತಮ್ಮ ಇಂತಹ ತಮಾಷೆಯ ವಿಚಾರಗಳನ್ನು ಹಂಚಿಕೊಳ್ಳಲು ಮುಜುಗರ ಮಾಡಿಕೊಳ್ಳುತ್ತಾರೆ. ಆದರೆ ಇದು ತಪ್ಪು ಏಕೆಂದರೆ ನಾನು ಯಾರ ಮುಂದೆಯೂ ನಾಚಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ದೊಡ್ಡ ವ್ಯಕ್ತಿ ಎಂಬ ಕಾರಣಕ್ಕೆ ಎಲ್ಲವನ್ನು ಮರೆಮಾಚುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಬ್ಬಾ! ಏನ್ ಮಸ್ತ್ ಸ್ಟೆಪ್ ನೋಡಿ; ದೋಣಿಯ ತುದಿಯಲ್ಲಿ ನಿಂತು ಬಾಲಕನ ಜಬರ್ದಸ್ತ್ ಡ್ಯಾನ್ಸ್
ಇನ್ನು ಈ ಪೋಸ್ಟ್ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಇಂತಹ ಬಾಸ್ನ್ನು ಎಲ್ಲೂ ನೋಡಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಉದ್ಯಮಿ ಲಿಂಕ್ಡ್‌ಇನ್‌ನಲ್ಲಿ ಕೆಟ್ಟ ದಿನವನ್ನು ಕಳೆದರು ಎಂದು ನಾನು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ತನ್ನನ್ನು ತಾನೇ ನಗಿಸಿಕೊಳ್ಳುವುದರಿಂದ ಹೆಚ್ಚು ಪ್ರಾಮಾಣಿಕ ಮತ್ತು ಸಹಯೋಗದ ಕೆಲಸದ ವಾತಾವರಣವನ್ನು ಬೆಳೆಸಬಹುದು ಎಂದು ನಾನು ಒಪ್ಪುತ್ತೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಚಾರಗಳನ್ನು ಹಂಚಿಕೊಳ್ಳುವ ಹಾಗೂ ತನ್ನ ಬಾಸ್ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾರೆ. ಈ ಯಾವುದರಿಂದಲೂ ಸದ್ಭಾವನೆ ಬೇಗನೆ ಮರೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Tue, 22 July 25