ಸೈಕ್ಲಿಂಗ್ ಮಾಡುತ್ತಾ ವಿಮಾನದಂತೆ ಕಾಣುವ ಯಂತ್ರವನ್ನು ಹಾರಿಸಬಹುದೆ? ಹೌದು, ವಿಡಿಯೋ ನೋಡಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 12, 2022 | 1:06 PM

ಅವನು ಪೆಡಲ್ ತುಳಿತದ ರಭಸಕ್ಕೆ ಯಂತ್ರ ವೇಗ ಪಡೆದುಕೊಳ್ಳುತ್ತದೆ ಮತ್ತು ಅದರ ಜೊತೆ ಓಡುತ್ತಿರುವ ಜನ ರೆಕ್ಕೆಗಳಿಗೆ ಸಪೋರ್ಟ್ ಒದಗಿಸುತ್ತಾ ತಳ್ಳುತ್ತಾರೆ. ಕೆಲವು ಕ್ಷಣಗಳ ಬಳಿಕ ಯಂತ್ರ ಪ್ರಾಯಶ: ಪೆಡ್ಲಿಂಗ್ ಉತ್ಪತ್ತಿಯಾಗುವ ಶಕ್ತಿಯಿಂದ ಟೇಕಾಫ್ ಮಾಡುತ್ತದೆ.

ಸೈಕ್ಲಿಂಗ್ ಮಾಡುತ್ತಾ ವಿಮಾನದಂತೆ ಕಾಣುವ ಯಂತ್ರವನ್ನು ಹಾರಿಸಬಹುದೆ? ಹೌದು, ವಿಡಿಯೋ ನೋಡಿ!
ಪೆಡ್ಲಿಂಗ್ ಮೂಲಕ ಹಾರಾಟ!
Follow us on

ರೈಲು ಬಿಡೋದು ರೈಲು ಹತ್ತಿಸುವುದು ಸುಲಭ ಮಾರಾಯ್ರೇ, ಅದರೆ ವಿಮಾನ ಹಾರಿಸುವುದು ಬಹಳ ಕಷ್ಟ! ವೈಮಾನಿಕ ತಂತ್ರಗಾರಿಕೆಯಲ್ಲಿ ತೊಡಗಿರುವ ಇಂಜಿನೀಯರ್ (engineer) ಮತ್ತು ಹವ್ಯಾಸಿಗಳು ಹಲವಾರು ಬಗೆಯ ಹಾರಾಟದ ಉಪಕರಣಗಳನ್ನು (flying machines) ವಿನ್ಯಾಸಗೊಳಿಸುತ್ತಾರೆ. ಕೆಲವು ವಿನ್ಯಾಸ (design) ಯಶಕಂಡರೆ ಉಳಿದವು ವಿಫಲಾವಾಗುತ್ತವೆ. ಇಂಟರ್ನೆಟ್ ನಲ್ಲಿ ಒಂದು ದಿನಾಂಕರಹಿತ ವಿಡಿಯೋವೊಂದು ಹರಿದಾಡುತ್ತಿದ್ದು ಇದರಲ್ಲಿ ಒಂದಷ್ಟು ಜನ ಸೇರಿ ಚಿಕ್ಕ ವಿಮಾನದಂತೆ ಕಾಣುವ ಒಂದು ಉಪಕರಣ (ಹಾರುವ ಯಂತ್ರ) ಹಾರಿಸಲು ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ನಿಮಗೆ ಕಾಣುವ ಹಾಗೆ ಬೋನ್ ನಂತೆ ಕಾಣುವ ಚೌಕಾಕಾರದ ಅಕೃತಿಯೊಂದಕ್ಕೆ ವಿಮಾನಗಳಿಗಿರುವಂಥ ರೆಕ್ಕೆಗಳನ್ನು ಕಟ್ಟಲಾಗಿದೆ. ಆಕೃತಿಯೊಳಗಿರುವ ವ್ಯಕ್ತಿ ಸೈಕಲ್ ತುಳಿಯುವ ಹಾಗೆ ಜೋರಾಗಿ ಪೆಡಲ್ ಮಾಡುತ್ತಿದ್ದಾನೆ. ಅವನು ಪೆಡಲ್ ತುಳಿತದ ರಭಸಕ್ಕೆ ಯಂತ್ರ ವೇಗ ಪಡೆದುಕೊಳ್ಳುತ್ತದೆ ಮತ್ತು ಅದರ ಜೊತೆ ಓಡುತ್ತಿರುವ ಜನ ರೆಕ್ಕೆಗಳಿಗೆ ಸಪೋರ್ಟ್ ಒದಗಿಸುತ್ತಾ ತಳ್ಳುತ್ತಾರೆ. ಕೆಲವು ಕ್ಷಣಗಳ ಬಳಿಕ ಯಂತ್ರ ಪ್ರಾಯಶ: ಪೆಡ್ಲಿಂಗ್ ಮೂಲಕ ಉತ್ಪತ್ತಿಯಾಗುವ ಶಕ್ತಿಯಿಂದ ಟೇಕಾಫ್ ಮಾಡುತ್ತದೆ. ಸ್ವಲ್ಪ ಹೊತ್ತಿನವರೆಗೆ ಗಾಳಿಯಲ್ಲಿ ತೇಲುತ್ತಾ ಕೊಂಚ ಮುಂದೆ ಸಾಗಿದ ನಂತರ ಧರೆಗಿಳಿಯುತ್ತದೆ.

ಈ ಸಾಹಸಿ ಪ್ರಯೋಗದ ವಿಡಿಯೋವನ್ನು ಮೊಹಮ್ಮದ್ ಜಮ್ಷೆಡ್ (@jamshed_mohamed) ಅನ್ನುವವರು ಟ್ವಿಟರ್ ಆನ್ಲೈನಲ್ಲಿ ಡಿಸೆಂಬರ್ 11 ರಂದು ಪೋಸ್ಟ್ ಮಾಡಿದ್ದಾರೆ. ಕೆಲವು ಕ್ಷಣಗಳ ಕ್ಲಿಪ್ ಶೇರ್ ಮಾಡಿ ಜಮ್ಷೆಡ್, ‘ಈ ವ್ಯಕ್ತಿ ಈಗಷ್ಟೇ ಸೈಕಲ್ ತುಳಿಯುತ್ತಾ ವಿಮಾನ ಹಾರಿಸಲು ಪ್ರಯತ್ನಿಸಿದ್ದಾನೆ. ಮಲ್ಟಿ-ಟಾಸ್ಕಿಂಗ್ ಅಂದರೆ ಇದೇ ಇರಬಹುದು, #crazy #aviation’ ಅಂತ ಬರೆದಿದ್ದಾರೆ.

ವಿಡಿಯೋವನ್ನು ಈಗಾಗಲೇ ಒಂದೂ ಮುಕ್ಕಾಲು ಲಕ್ಷ ಜನ ವೀಕ್ಷಿಸಿದ್ದಾರೆ. ಸಹಜವಾಗೇ ವಿಡಿಯೋವನ್ನು ವೀಕ್ಷಿಸಿದ ಜನ ತಮ್ಮ ಪರಿಣಿತ ಸಲಹೆಗಳನ್ನು ನೀಡಲು ಮರೆತಿಲ್ಲ!

ಒಬ್ಬ ಟ್ವಿಟರ್ ಯೂಸರ್, ‘ಗುಡ್, ಆದರೆ ಹೆಚ್ಚಿನ ಶಕ್ತಿಯ ಅಗತ್ಯವಿದೆ…ಜನ ತಳ್ಳುತ್ತಾ ಓಡಿದರೆ ಅದು ಹಾರುವುದು ಸಾಧ್ಯವಾಗಲಾರದು, ಆದರೆ ಉತ್ತಮ ಪ್ರಯತ್ನ ಮತ್ತು ವಿನ್ಯಾಸವೂ ಚೆನ್ನಾಗಿದೆ…ಎಂಜಿನ್ ಅಥವಾ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಿದರೆ ಚೆನ್ನಾಗಿರುತ್ತೆ ಅನಿಸುತ್ತೆ,’ ಅಂತ ಬರೆದಿದ್ದಾರೆ. ಮತ್ತೊಬ್ಬ ಯೂಸರ್, ‘ಇದು ಕೆಲಸ ಮಾಡುತ್ತದೆ ಅಂತ ನಾನಂದುಕೊಳ್ಳುತ್ತೇನೆ. ಗೇರ್ ಗಳಲ್ಲಿ ಚಿಕ್ಕ ಪ್ರಮಾಣದ ಬದಲಾವಣೆ ಮಾಡೋದು ಒಳ್ಳೆಯ ಟ್ರಿಕ್ ಅನಿಸಬಹುದು,’ ಅಂತ ಕಾಮೆಂಟ್ ಮಾಡಿದ್ದಾರೆ.

ಜಿಟೆಕ್ಸ್ ಟೆಕ್ನಾಲಜಿ ವೀಕ್ ಕಾನ್ಫರೆನ್ಸ್ 2017 ರಲ್ಲಿ ದುಬೈನಲ್ಲಿ ನಡೆದಾಗ ಅಲ್ಲಿಯ ಪೊಲೀಸ್ ಒಂದು ಮಹತ್ವಾಕಾಂಕ್ಷೆಯ ಫ್ಲೈಯಿಂಗ್ ಮೊಟಾರ್ ಬೈಕ್ ಅನ್ನು ಅನಾವರಣಗೊಳಿಸಿದ್ದರು. ಈ ವೈಮಾನಿಕ ವಾಹನ ವಿದ್ಯುಚ್ಛಕ್ತಿಯ ನೆರವಿನಿಂದ ಸುಮಾರು 300 ಕೆಜಿಗಳಷ್ಟು ಭಾರಹೊತ್ತು 5 ಮೀಟರ್ ಅಂತರದಲ್ಲಿ ಗಂಟೆಗೆ 70 ಕಿಮೀ ವೇಗದಲ್ಲಿ 30 ನಿಮಿಷಗಳ ಕಾಲ ಹಾರಾಟ ನಡೆಸಬಲ್ಲದು. ಮುಂಬರುವ ವರ್ಷಗಳಲ್ಲಿ ದುಬೈ ಪೊಲೀಸ್ ತುರ್ತು ಸಂದರ್ಭಗಳಲ್ಲಿ ಫ್ಲೈಯಿಂಗ್ ಮೊಬೈಕ್ ಬಳಸುವ ಸಾಧ್ಯತೆಯಿದೆ.

ಮತ್ತಷ್ಟು ವೈರಲ್ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ