Dance: ಭಾರತೀಯ ಸಂಗೀತ ನೃತ್ಯ ಮತ್ತು ಕಲೆಗಳಿಗೆ ಮಾರುಹೋಗದವರು ಯಾರಿದ್ದಾರೆ? ಅದರಲ್ಲಿಯೂ ಬಾಲಿವುಡ್ ಎಂದರೆ ವಿದೇಶಿಗರಿಗೆ ಅದೇನೋ ಸೆಳೆತ. ಇದೀಗ ಬೆಲ್ಜಿಯಂನ ಡಿಜಿಟಲ್ ಕ್ರಿಯೇಟರ್ (Digital Creator) ಒಬ್ಬರು ಭಾರತಕ್ಕೆ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ನಂತರ ಸಿನೆಮಾ ಹಾಡುಗಳಿಗೆ ಡ್ಯಾನ್ಸ್ ಕಲಿತು ಮ್ಯಾಷಪ್ ರೀಲ್ ಕೂಡ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಅನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಎಡ್ ಪೀಪಲ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಟಮ್ ಟಮ್, ಪತಲಿ ಕಮರಿಯಾ, ತು ಮೇರಿ, ರಾರಾ ರಕ್ಕಮ್ಮ, ಚೈಯ್ಯಾ ಚೈ, ತುಕಡಂ ಮಾಂಗಲ್ಯ… ಹೀಗೆ ಮುಂತಾದ ಹಾಡುಗಳಿಗೆ ಮಕ್ಕಳು, ಯುವಕ ಯುವತಿಯರೊಂದಿಗೆ ಡ್ಯಾನ್ಸ್ ಮಾಡಿ ಮಾಡಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ : Viral: ಅಪರೂಪದ ಪುನರ್ಮಿಲನ; 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ನಾಯಿ
6 ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಇದೀಗ ಸುಮಾರು 3 ಮಿಲಿಯನ್ ಜನರು ನೋಡಿದ್ದಾರೆ. 4.1 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಕಲೆಯ ಬಗೆಗಿನ ಪ್ರೀತಿ ಮತ್ತು ಮುಕ್ತತೆಯನ್ನು ಬಹುವಾಗಿ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.
ನಿಜಕ್ಕೂ ತುಂಬಾ ವೈವಿಧ್ಯಮಯವಾಗಿದೆ ಈ ರೀಲ್, ಉತ್ಸಾಹ ಮತ್ತು ಖುಷಿ ಎಲ್ಲರಲ್ಲಿಯೂ ಚಿಮ್ಮುತ್ತಿದೆ ಎಂದಿದ್ದಾರೆ ಒಬ್ಬರು. ನಾನಂತೂ ಈ ವಿಡಿಯೋ ನೋಡಿ ನಗುತ್ತಲೇ ಇದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಚೈಯ್ಯಾ ಚೈಯ್ಯಾ ರೈಲಿನ ಮೇಲೆ ನಿಂತು ಮಾಡಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು. ಯಾರಾದರೂ ಆಧಾರ್ ಕಾರ್ಡ್ ಮಾಡಿಸಿಕೊಡಿ ಈ ವ್ಯಕ್ತಿಗೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯಹಡಗನ್ನು ಏರುವುದು ಹೇಗೆ ಗೊತ್ತೆ? ನೋಡಿ ಈ ವಿಡಿಯೋ
ಭಾರತೀಯ ನೃತ್ಯಪ್ರಕಾರಗಳು ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮ. ಉಳಿದ ನೃತ್ಯಪ್ರಕಾರಗಳಂತೆ ಲೈಂಗಿಕತೆಯನ್ನು ಪ್ರಚೋದಿಸುವುದಿಲ್ಲ, ಅದಕ್ಕಾಗಿಯೇ ನನಗೆ ಬಹಳ ಇಷ್ಟ ಎಂದಿದ್ದಾರೆ ಒಬ್ಬರು. ನನಗೆ ಡ್ಯಾನ್ಸ್ ಕಲಿಸುತ್ತೀರಾ? ಎಂದು ಆತ ಮುದ್ದಾಗಿ ಕೇಳಿದಾಗ ಯಾರಾದರೂ ಇಲ್ಲವೆಂದು ಅವನಿಗೆ ಹೇಳಲು ಸಾಧ್ಯವೆ? ಎಂದಿದ್ದಾರೆ ಮತ್ತೊಬ್ಬರು. ಅಂತೂ ಇವನು ತನ್ನ ಮನೆಯನ್ನು ಹುಡುಕಿಕೊಂಡುಬಿಟ್ಟ! ಬೇಗ ಆಧಾರ್ ಕಾರ್ಡ್ ಒಂದು ಮಾಡಿಸಬೇಕೀಗ ಎಂದು ಅನೇಕರು ಕಾಲೆಳೆದಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ