Viral Video: ಮಹಾಬಿಲ್ಲಿ ಹಬ್ಬ! ಹೇಗಿದೆ ಎಲ್ಸಾ ಕುಟ್ಟಿಯ ಓಣಂ ಆಚರಣೆ, ಬನ್ನಿ ನೀವೂ…

Cats: ಅನೇಕರು ಮನೆಯ ಸಾಕುಪ್ರಾಣಿಗಳನ್ನು ತಮ್ಮ ಮಕ್ಕಳಂತೆಯೇ ಕಾಣುತ್ತಾರೆ. ಎಲ್ಲೇ ಹೋದರೂ ಬಂದರೂ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಅವುಗಳೂ ಎಲ್ಲ ಕಷ್ಟಸುಖಗಳಲ್ಲಿಯೂ ತನ್ನ ಪೋಷಕರೊಂದಿಗಿರುತ್ತವೆ. ಇದೀಗ ಎಲ್ಸಾ ಕುಟ್ಟಿ ಎಂಬ ಬೆಕ್ಕು ಓಣಂ ಆಚರಿಸಿದೆ. ಅದರ ಪೋಷಕರು ಅದಕ್ಕಾಗಿ ಮಾಡಿದ ಅಲಂಕಾರ ಮತ್ತು ಊಟೋಪಚಾರವನ್ನು ನೋಡಿಯೇ ಕಣ್ತುಂಬಿಕೊಳ್ಳಬೇಕು, ನೋಡಿ ವಿಡಿಯೋ.

Viral Video: ಮಹಾಬಿಲ್ಲಿ ಹಬ್ಬ! ಹೇಗಿದೆ ಎಲ್ಸಾ ಕುಟ್ಟಿಯ ಓಣಂ ಆಚರಣೆ, ಬನ್ನಿ ನೀವೂ...
ಎಲ್ಸಾ ಕುಟ್ಟಿಯ ಓಣಂ

Updated on: Sep 02, 2023 | 5:15 PM

Onam: ಹಬ್ಬವೆಂದಮೇಲೆ ಎಲ್ಲರಿಗೂ ಒಂದೇ. ಎಲ್ಲರೂ ಆ ಸಂಭ್ರಮದಲ್ಲಿ ಪಾಲ್ಗೊಂಡರೆ ಅದಕ್ಕೊಂದು ಕಳೆ. ಮನೆಮಂದಿ, ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದವರು ಎಷ್ಟೋ ಸಲ ಅಪರಿಚಿತರೂ… ಆದರೆ ಸಾಕಿದ ಪ್ರಾಣಿಗಳು? ಹಾಂ ಅವೂ ಮತ್ತೆ! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ಮನೆಯ ಬೆಕ್ಕು (Cat) ಕೂಡ ಓಣಂ ಹಬ್ಬವನ್ನು ಆಚರಿಸಿದೆ. ಅದಕ್ಕೇ ಎಂದು ಹೊಸ ವಸ್ತ್ರಾಲಂಕಾರ, ಊಟೋಪಚಾರವನ್ನು ಭರ್ಜರಿಯಾಗಿ ಮಾಡಲಾಗಿದೆ. ಇನ್​ಸ್ಟಾಗ್ರಾಂನಲ್ಲಿ ಎಲ್ಸಾ ಕುಟ್ಟಿ ಎಂಬ ಪುಟವನ್ನು ಈ ಬೆಕ್ಕಿಗಾಗಿಯೇ ಮೀಸಲಿರಿಸಿದ್ದು, ಇದರ ಆಟೋಟ ಚಟುವಟಿಕೆಗಳ ವಿಡಿಯೋ, ಫೋಟೋಗಳನ್ನೆಲ್ಲಾ ಅಪ್​ಲೋಡ ಮಾಡಲಾಗುತ್ತದೆ.

ಇದನ್ನೂ ಓದಿ : Viral Video: ನಾಲೆಯೊಳಗೆ ಬಿದ್ದು ಒದ್ದಾಡುತ್ತಿದ್ದ ಗೂಬೆಯನ್ನು ರಕ್ಷಿಸಿದ ಮಹಿಳೆಯ ವಿಡಿಯೋ ವೈರಲ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

4 ದಿನಗಳ ಹಿಂದೆ ಮಾಡಲಾದ ಈ ವಿಡಿಯೋ 1 ಲಕ್ಷಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಸುಮಾರು 6 ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ನೋಡಿದ ಮುದ್ದಾದ ವಿಡಿಯೋ ಎಂದರೆ ಇದೇ ಎಂದು ಅನೇಕರು ಹೇಳಿದ್ದಾರೆ.

ನೋಡಿ ಎಲ್ಸಾ ಕುಟ್ಟಿಯ ಓಣಂ

ಆಹಾರವನ್ನು ಚೂರು ವೇಸ್ಟ್ ಮಾಡುವುದಿಲ್ಲವಲ್ಲ ಈ ಮಗು, ಇಂಥ ಮಕ್ಕಳು ನನಗೆ ಬಹಳ ಇಷ್ಟ ಎಂದಿದ್ದಾರೆ ಒಬ್ಬರು. ಎಷ್ಟು ಚೆಂದದ ಉಡುಪು, ಚೆಂದದ ಸರ… ಮುದ್ದಾದ ಕುಟ್ಟಿ. ಪ್ರತೀ ಹಬ್ಬಕ್ಕೂ ಕುಟ್ಟಿ ಹೀಗೆಯೇ ತಯಾರಾಗುತ್ತಾಳಾ? ಎಂದಿದ್ಧಾರೆ ಇನ್ನೊಬ್ಬರು. ಅಯ್ಯೋ ಎಷ್ಟು ಮುದ್ದಾದ ವಿಡಿಯೋ ಇದು, ಎಂಥ ಕರುಣಾಮಯಿ ನೀವು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯಹಡಗನ್ನು ಏರುವುದು ಹೇಗೆ ಗೊತ್ತೆ? ನೋಡಿ ಈ ವಿಡಿಯೋ

ಎಂಥ ಶಿಸ್ತು ಕಲಿಸಿದ್ದೀರಿ ಕುಟ್ಟಿಗೆ! ನಿಜಕ್ಕೂ ನೀವು ಅದೃಷ್ಟವಂತರು ಇಂಥ ಬೆಕ್ಕನ್ನು ಪಡೆಯಲು ಎಂದಿದ್ದಾರೆ ಮಗದೊಬ್ಬರು. ಬೇರೆ ಬೆಕ್ಕುಗಳಾಗಿದ್ದರೆ ಇಷ್ಟೊತ್ತಿಗೆ ಮಾಡಿದ ಅಲಂಕಾರಕ್ಕೆ ಗಾಬರಿಯಿಂದ ಓಡಾಡಿ ಚೆಲ್ಲಾಪಿಲ್ಲಿ ಮಾಡುತ್ತಿದ್ವು. ಆದರೆ ಈ ಬೆಕ್ಕು ಮಾತ್ರ ಬಹಳ ತಿಳಿವಳಿಕೆಯುಳ್ಳದ್ದಾಗಿದೆ ಎಂದಿದ್ದಾರೆ ಇನ್ನೊಬ್ಬರು. ಸಾಕುಮಾಡಿ ಎಲ್ಲರೂ, ನಿಮ್ಮ ನಿಮ್ಮ ಆಸೆಗಳಿಗೆ ಪ್ರಾಣಿಗಳಿಗೇಕೆ ಹಿಂಸೆ ನೀಡುತ್ತಿದ್ದೀರಿ? ಎಂದು ಕೇಳಿದ್ದಾರೆ ಒಬ್ಬರು. ಇರಲಿ ಬಿಡಿ ಅವರವರ ಖುಷಿ ಯಾಕೆ ಎಲ್ಲವನ್ನೂ ಹಕ್ಕುಗಳ ದೃಷ್ಟಿಯಲ್ಲಿ ನೋಡುತ್ತೀರಿ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ