Cat : ಮುದ್ದಿನ ಸೊಕ್ಕೇ, ಸೋಮಾರಿ ಬೆಕ್ಕೇ ಅಂತೆಲ್ಲ ಕರೆಯಿಸಿಕೊಳ್ಳುವ ಬೆಕ್ಕು ಹಾವಿನೊಂದಿಗೆ (Snakes) ಸೆಣಸಾಡುವುದನ್ನು ನೋಡಿದ್ದೀರಾ? ಜಿರಳೆ, ಇಲಿ, ಕೀಟ, ಪಕ್ಷಿಗಳನ್ನು ಬೇಟೆಯಾಡುವ ಬೆಕ್ಕುಗಳು ಎಂಥ ವಿಷಕಾರಿ ಹಾವುಗಳನ್ನೂ ಸೆದೆಬಡೆಯುತ್ತವೆ ಎಂದರೆ ನಂಬಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಬೆಕ್ಕುಗಳ ಪರಾಕ್ರಮವನ್ನು ನೋಡಿ. ಇದರಲ್ಲಿರುವ ಮೂರು ದೃಶ್ಯಗಳಲ್ಲಿ ಮೂರು ಬೆಕ್ಕುಗಳು ಮೂರು ಹಾವುಗಳೊಂದಿಗೆ ಸೆಣಸಾಡಿವೆ. ನೆಟ್ಟಿಗರಂತೂ ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ.
Los reflejos de los gatos son impresionantes. ? pic.twitter.com/Ww7Ymx15cT
ಇದನ್ನೂ ಓದಿ— Eugenia Dinu (@DinuEugenia) August 5, 2023
ಈ ವಿಡಿಯೋ ಅನ್ನು ಈತನಕ 1 ಮಿಲಿಯನ್ ಜನರು ನೋಡಿದ್ದಾರೆ. 21,000 ಜನರು ಲೈಕ್ ಮಾಡಿದ್ದಾರೆ. 2,600ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಈ ಬೆಕ್ಕುಗಳು ಯಾವತ್ತೂ ಅನ್ಯಗ್ರಹದ ಜೀವಿಗಳು! ಎಂದು ಶ್ಲಾಘಿಸಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಎಮಿಲಿಯಾನಾ ಹಾಡಿಗೆ ಸುನಿಧಿ ಚೌಹಾನ್ ಡ್ಯಾನ್ಸ್; ಕ್ಯಾ ಬಾತ್ ಹೈ ಎಂದ ನೆಟ್ಟಿಗರು
ನಮ್ಮ ಮನೆಯ ಬೆಕ್ಕು ಮರಿ ಹಾಕಿದ್ದಾಗ ಒಂದು ರಾತ್ರಿ ಬೆಕ್ಕು ಜೋರಾಗಿ ಕೂಗುತ್ತಿತ್ತು. ನೋಡಿದರೆ ಅದು ನಾಗರಹಾವನ್ನು ಎದುರುಹಾಕಿಕೊಂಡಿತ್ತು. ಹಿಂದೆ ಮರಿಗಳು ಬೆಚ್ಚಿಬಿದ್ದು ಓಡಾಡುತ್ತಿದ್ದವು. ಅತ್ತ ಮರಿಗಳು ಹಾವಿನೆಡೆ ಹೋಗದಂತೆ, ಇತ್ತ ಹಾವು ಮರಿಗಳೆಡೆ ಬಾರದಂತೆ ಅಮ್ಮಬೆಕ್ಕು ಮಾಡಿದ ಹೋರಾಟ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಕೊನೆಗೆ ಸೋತ ಹಾವು ವಾಪಾಸು ಮರಳಿತು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ಫ್ಲೋರಿಡಾದ ಜಿಮ್ಗೆ ಭೇಟಿ ನೀಡಿದ ಮರಿಯಾಮೆ; ಮ್ಯಾನೇಜರ್ಗೆ ವ್ಯಾಯಾಮ ಮಾಡಿಸಿ ಮರಳಿತು
ಆದರೆ ನಮ್ಮ ಮನೆಯ ಬೆಕ್ಕಿನಮರಿಗೆ ಹಾವೊಂದು ಕಚ್ಚಿದ್ದರಿಂದ ಮರಿ ಸತ್ತೇ ಹೋಯಿತು ಎಂದು ಇನ್ನೊಬ್ಬರು ಬೆಸರಿಸಿಕೊಂಡಿದ್ದಾರೆ. ಈ ಬೆಕ್ಕುಗಳು ಅಸಾಮಾನ್ಯ ಜೀವಿಗಳು, ನೋಡಲು ಮೃದು ಸ್ವಭಾವ ಮತ್ತು ಸೋಮಾರಿಯಂತೆ ಕಾಣುತ್ತವೆ. ಆದರೆ ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಇವುಗಳು ಆವಾಹಿಸಿಕೊಳ್ಳುವ ಶಕ್ತಿ, ಸ್ಥೈರ್ಯ ಮತ್ತು ಜಾಣ್ಮೆ ನಿಜಕ್ಕೂ ಅಗಾಧ ಎಂದು ಮಗದೊಬ್ಬರು ಹೇಳಿದ್ದಾರೆ.
— Eugenia Dinu (@DinuEugenia) August 6, 2023
ಹುಲಿಯ ಜಾತಿಗೆ ಸೇರಿದ ಬೆಕ್ಕಿನ ಮೈಯಲ್ಲಿ ಇಷ್ಟೂ ತಾಕತ್ತು ಇರದಿದ್ದರೆ ಇವುಗಳ ಜಾತಿಗೇ ಅವಮಾನ ಅಲ್ಲವೆ? ಭಲೇ ಬೆಕ್ಕುಗಳ ಸಂತತಿಯೇ! ನಿಮ್ಮ ಈ ಹೋರಾಟದ ಕಿಚ್ಚು ಜಗತ್ತಿನ ಎಲ್ಲಾ ವಿಷಕಾರಿ ಜಂತುಗಳನ್ನು ನಾಶಮಾಡುತ್ತಿರಲಿ ಎಂದು ಹರಸಿದ್ದಾರೆ ಕೆಲ ನೆಟ್ಟಿಗರು.
ಏನಂತೀರಿ ನೀವು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:33 pm, Thu, 10 August 23