ಯಾವುದೇ ಪ್ರಯೋಗವನ್ನು ಮೊದಲು ಇಲಿಗಳ ಮೇಲೆ ಮಾಡೋದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ!

ಭೂಮಿಯ ಮೇಲೆ ಲಕ್ಷಾಂತರ ಜೀವಿಗಳಿದ್ದರೂ ವಿಜ್ಞಾನಿಗಳು ಯಾವುದೇ ಪ್ರಯೋಗಗಳಿಗೆ ಇಲಿಗಳನ್ನು ಏಕೆ ಬಳಸುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲ್ಲಿ ಕಂಡುಕೊಳ್ಳಿ.

ಯಾವುದೇ ಪ್ರಯೋಗವನ್ನು ಮೊದಲು ಇಲಿಗಳ ಮೇಲೆ ಮಾಡೋದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ!
Follow us
ಅಕ್ಷತಾ ವರ್ಕಾಡಿ
|

Updated on:Nov 14, 2024 | 3:56 PM

ವಿಜ್ಞಾನಿಗಳು ಮಾನವರ ಮೇಲೆ ಯಾವುದೇ ಪ್ರಯೋಗವನ್ನು ಮಾಡುವ ಮೊದಲು ಅದನ್ನು ಇಲಿಗಳ ಮೇಲೆ ಪ್ರಯೋಗಿಸಿ ನೋಡುತ್ತಾರೆ. ವಿಶೇಷವಾಗಿ ವೈದ್ಯಕೀಯ ಅಥವಾ ಔಷಧೀಯಕ್ಕೆ ಸಂಬಂಧಿಸಿದ ಪ್ರಯೋಗಗಳು. ಭೂಮಿಯ ಮೇಲೆ ಲಕ್ಷಾಂತರ ಜೀವಿಗಳಿದ್ದರೂ ವಿಜ್ಞಾನಿಗಳು ಇಲಿಗಳ ಮೇಲೆ ಮಾತ್ರ ಏಕೆ ಪ್ರಯೋಗಗಳನ್ನು ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲ್ಲಿ ಕಂಡುಕೊಳ್ಳಿ.

ಪ್ರಯೋಗಗಳನ್ನು ಇಲಿಗಳ ಮೇಲೆ ಮಾತ್ರ ಏಕೆ ನಡೆಸಲಾಗುತ್ತದೆ?

ಇಲಿ ಮತ್ತು ಮಾನವ ಪರಸ್ಪರ ಭಿನ್ನವಾಗಿದ್ದರೂ, ಅವುಗಳ ಜೀನೋಮ್ಗಳಲ್ಲಿ ಅನೇಕ ಸಾಮ್ಯತೆಗಳಿವೆ. ಇಲಿ ಮತ್ತು ಮಾನವನ ಡಿಎನ್ಎ ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಉದಾಹರಣೆಗೆ, ಇಲಿಗಳು ಮತ್ತು ಮನುಷ್ಯರ ಪ್ರತಿರಕ್ಷಣಾ ವ್ಯವಸ್ಥೆ, ಮೆದುಳಿನ ರಚನೆ, ಹಾರ್ಮೋನ್ ವ್ಯವಸ್ಥೆ ಮತ್ತು ಅಂಗಗಳ ಕಾರ್ಯಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತವೆ. ಮಾನವರ ಮೇಲೆ ಪ್ರಯೋಗ ಮಾಡುವ ಮೊದಲು ಇಲಿಗಳ ಮೇಲೆ ಪ್ರಯೋಗಗಳನ್ನು ಮಾಡಲು ಇದು ಕಾರಣವಾಗಿದೆ. ಪ್ರಯೋಗದ ಫಲಿತಾಂಶಗಳು ಮಾನವ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಇದರಿಂದ ತಿಳಿದುಕೊಳ್ಳಲು ಸಾಧ್ಯ.

ಇಲಿಗಳು ಮತ್ತು ಮನುಷ್ಯರ ನಡುವಿನ ಹೋಲಿಕೆಯ ಹೊರತಾಗಿ, ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಇಲಿಗಳನ್ನು ಬಳಸುವುದಕ್ಕೆ ಇನ್ನೊಂದು ಕಾರಣವಿದೆ. ಅಂದರೆ, ಅವುಗಳ ಮೇಲೆ ಯಾವುದೇ ಪ್ರಯೋಗದ ಪರಿಣಾಮವು ತುಂಬಾ ವೇಗವಾಗಿರುತ್ತದೆ. ಈ ಕಾರಣದಿಂದಾಗಿ, ವಿಜ್ಞಾನಿಗಳು ಔಷಧಿಗಳ ಪರಿಣಾಮವನ್ನು ತ್ವರಿತವಾಗಿ ಅಳೆಯಲು ಇಲಿಗಳನ್ನು ಬಳಸುತ್ತಾರೆ.

ಇದನ್ನೂ ಓದಿ: ಇಲ್ಲಿ ಬಾಲ್ಯದಲ್ಲೇ ಮದುವೆ ನಿಶ್ಚಯ, ಬೆಳೆದ ನಂತರ ಮದುವೆ ಬೇಡ ಎಂದ್ರೆ ಲಕ್ಷಗಟ್ಟಲೆ ಹಣ ಕೊಡಬೇಕು

ಪ್ರಯೋಗಾಲಯದಲ್ಲಿ ಇಲಿಗಳನ್ನು ಇಡುವುದು ಸುಲಭ:

ಇಲಿಗಳು ಪ್ರಯೋಗಾಲಯದಲ್ಲಿ ನಿಯಂತ್ರಿತ ಪರಿಸರದಲ್ಲಿ ಇರಿಸಬಹುದಾದ ಜೀವಿಗಳಾಗಿವೆ. ಇಲ್ಲಿ ಅವುಗಳ ಆಹಾರ, ಜೀವನಶೈಲಿ ಮತ್ತು ನಡವಳಿಕೆಯ ಎಲ್ಲಾ ಅಂಶಗಳನ್ನು ಸುಲಭವಾಗಿ ನೋಡಿಕೊಳ್ಳಬಹುದು. ಇದಲ್ಲದೆ, ಇಲಿಗಳನ್ನು ಪ್ರಯೋಗಗಳಿಗೆ ಬಳಸಲು ಕಾರಣ ಅವುಗಳ ಜೀವಿತಾವಧಿ. ಹೌದು ಇಲಿಗಳ ಜೀವಿತಾವಧಿ ಚಿಕ್ಕದಾಗಿದ್ದು ಮತ್ತು ಅವು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:52 pm, Thu, 14 November 24

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ