Viral: ಪ್ರಮೋಷನ್ ಪಾರ್ಟಿ; ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಜೊತೆ ಸೇರಿ ಭರ್ಜರಿ ಡಾನ್ಸ್ ಮಾಡಿದ ವೈದ್ಯರು
ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ನರ್ಸ್‌ಗಳು ಮತ್ತು ವೈದ್ಯರು, ಅಧಿಕಾರಿಗಳು ಜೊತೆಗೂಡಿ ಹಿಂದಿ ಹಾಡಿಗೆ ಕುಣಿಯುತ್ತಾ ಭರ್ಜರಿ ಡಾನ್ಸ್ ಪಾರ್ಟಿ ಮಾಡಿದ್ದಾರೆ. ಕರ್ತವ್ಯ ನಿರ್ವಹಿಸಬೇಕಾದ ಸಮಯದಲ್ಲಿ ಕೆಲಸವನ್ನು ಪಕ್ಕಕ್ಕಿಟ್ಟು ವೈದ್ಯರು ಡಾನ್ಸ್ ಪಾರ್ಟಿ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತವೆ. ಇಲ್ಲೊಂದು ಕೂಡಾ ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ಕರ್ತವ್ಯ ಪಾಲನೆಯನ್ನು ಮರೆತು ಆಸ್ಪತ್ರೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾ ಮೋಜು ಮಸ್ತಿ ಮಾಡಿದ ವೈದ್ಯಾಧಿಕಾರಿಗಳು ಮತ್ತು ನರ್ಸ್‌ಗಳ ನಡೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಹೌದು ಕರ್ತವ್ಯವನ್ನು ಮರೆತು ವೈದ್ಯಾಧಿಕಾರಿಗಳು ನರ್ಸ್‌ಗಳ ಜೊತೆ ಸೇರಿ ಹಿಂದಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಕರ್ತವ್ಯ ನಿರ್ವಹಿಸಬೇಕಾದ ಸಮಯದಲ್ಲಿ ಕೆಲಸವನ್ನು ಪಕ್ಕಕ್ಕಿಟ್ಟು ವೈದ್ಯರು ಡಾನ್ಸ್ ಪಾರ್ಟಿ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶದ ವಾರಣಾಸಿಯ ದೀನದಯಾಳ್ ಉಪಾಧ್ಯಾಯ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯರ ತಂಡ ಮತ್ತು ನರ್ಸ್‌ಗಳು ಜೊತೆ ಸೇರಿ ಆಸ್ಪತ್ರೆಯ ಕೊಠಡಿಯಲ್ಲಿಯೇ ಭರ್ಜರಿ ಡಾನ್ಸ್ ಪಾರ್ಟಿಯನ್ನು ಮಾಡಿದ್ದಾರೆ. ನರ್ಸ್ ಒಬ್ಬರಿಗೆ ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಈ ಪಾರ್ಟಿಯನ್ನು ಏರ್ಪಡಿಸಲಾಗಿದ್ದು, ಕರ್ತವ್ಯ ನಿರ್ವಹಿಸಬೇಕಾದ ಸಮಯದಲ್ಲಿ ಕೆಲಸವನ್ನೆಲ್ಲಾ ಪಕ್ಕಕ್ಕಿಟ್ಟು ವೈದ್ಯರು, ಅಧಿಕಾರಿಗಳು ಮತ್ತು ನರ್ಸ್‌ಗಳು ಜೊತೆ ಸೇರಿ ಹಿಂದಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.
ಮಾಹಿತಿಗಳ ಪ್ರಕಾರ ಸ್ಟಾಫ್ ನರ್ಸ್‌ಗಳಿಗೆ ಪ್ರಪೋಷನ್ ಸಿಕ್ಕ ಖುಷಿಗೆ ಆಸ್ಪತ್ರೆಯಲ್ಲಿಯೇ ಪಾರ್ಟಿಯನ್ನು ಆಯೋಜಿಸಲಾಗಿದ್ದು, ಸೆಮಿನಾರ್ ಹಾಲ್‌ನಲ್ಲಿ ಮ್ಯೂಸಿಕ್ ಸಿಸ್ಟಮ್‌ನಲ್ಲಿ ಜೋರಾಗಿ ಹಾಡು ಹಾಕಿ ವೈದ್ಯರು ಹಾಗೂ ನರ್ಸ್‌ಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಪಾರ್ಟಿಯಲ್ಲಿ ಆಸ್ಪತ್ರೆ ಸಿಎಂಎಸ್ ಡಾ. ದಿಗ್ವಿಜಯ್ ಸಿಂಗ್, ಎಂಎಸ್ ಡಾ. ಪ್ರೇಮ್ ಪ್ರಕಾಶ್ ಸಿಂಗ್ ಸೇರಿದಂತೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ವಾರಣಾಸಿಯ ಮುಖ್ಯ ವೈದ್ಯಾಧಿಕಾರಿ ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: ಆಂಬ್ಯುಲೆನ್ಸ್‌ನಲ್ಲಿ ಸ್ಫೋಟಗೊಂಡ ಆಕ್ಸಿಜನ್ ಸಿಲಿಂಡರ್; ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಗರ್ಭಿಣಿ
ಈ ಕುರಿತ ವಿಡಿಯೋವನ್ನು ಡಾ. ಅಹ್ತೇಶಾಮ್ ಸಿದ್ದಿಕಿ (AhteshamFIn) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಧಿಕಾರಿಗಳು, ವೈದ್ಯರು ಮತ್ತು ನರ್ಸ್‌ಗಳೆಲ್ಲಾ ಜೊತೆ ಸೇರಿ ಭರ್ಜರಿ ಡಾನ್ಸ್ ಪಾರ್ಟಿ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಇಂದು ಬೆಳಗ್ಗೆ ಹಂಚಿಕೊಳ್ಳಲಾದ ಈ ವಿಡಿಯೋ 12 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಆಸ್ಪತ್ರೆಯಲ್ಲಿ ಮ್ಯೂಸಿಕ್ ಸಿಸ್ಟಂ ಹಾಕಿದ್ರೆ ರೋಗಿಗಳಿಗೆ ತೊಂದರೆ ಆಗಲ್ವಾ ಎಂದು ಪ್ರಶ್ನೆ ಮಾಡಿದರೆ ಇನ್ನೂ ಕೆಲವರು ಡಾನ್ಸ್ ಮಾಡುವುದನ್ನು ಬಿಟ್ಟು ರೋಗಿಗಳತ್ತ ಗಮನ ಹರಿಸಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ