Chakka Jam: ಟ್ರಾಫಿಕ್​ ಜಾಮ್​ ಗೊತ್ತು.. ರೈತರ ಪ್ರತಿಭಟನೆ ವೇಳೆ ಕೇಳಿಬಂದ ಚಕ್ಕಾ ಜಾಮ್ ಯಾವುದು?

Chakka Jam ಭಾರತವು ಹಲವು ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ವೈವಿಧ್ಯಮಯ ದೇಶ. ಇಲ್ಲಿನ ಒಂದೊಂದು ಭಾಷೆಯಲ್ಲಿ, ಒಂದೊಂದು ಪದಕ್ಕೆ ಒಂದೊಂದು ಅರ್ಥವಿರುತ್ತದೆ. ಅದರಂತೆ, ಈ ಪದವೂ ಸಹ. Traffic Jam

Chakka Jam: ಟ್ರಾಫಿಕ್​ ಜಾಮ್​ ಗೊತ್ತು.. ರೈತರ ಪ್ರತಿಭಟನೆ ವೇಳೆ ಕೇಳಿಬಂದ ಚಕ್ಕಾ ಜಾಮ್ ಯಾವುದು?
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 8:13 PM

ಚಕ್ಕಾ ಜಾಮ್ (Chakka Jam) ಎಂಬ ಪದ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ. ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಚಕ್ಕಾ ಜಾಮ್ ಒಂದು ಭಾಗವಾಗಿದೆ. ರಸ್ತೆ ತಡೆ ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸುವ ವಿಧಾನವನ್ನು ‘ಚಕ್ಕಾ ಜಾಮ್’ ಎಂದು ಕರೆಯಲಾಗುತ್ತಿದೆ. ಇಂದು (ಫೆ.6) ಕೂಡ ರೈತ ಸಂಘಟನೆಗಳು, ದೇಶಾದ್ಯಂತ ಚಕ್ಕಾ ಜಾಮ್ ನಡೆಸುತ್ತಿದೆ.

ಇಂದು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಒಟ್ಟು ಮೂರು ಗಂಟೆಗಳ ಕಾಲ, ದೇಶಾದ್ಯಂತ ಚಕ್ಕಾ ಜಾಮ್ ಕೈಗೊಳ್ಳಲು ರೈತ ಸಂಘಟನೆಗಳು ಕರೆ ನೀಡಿವೆ. ದೆಹಲಿ ಗಡಿಭಾಗದ ರಸ್ತೆಗಳು, ಉತ್ತರ ಪ್ರದೇಶದ ಕೆಲವು ಭಾಗಗಳು, ಪಂಜಾಬ್ ಮತ್ತು ಹರ್ಯಾಣದಲ್ಲಿ ಚಕ್ಕಾ ಜಾಮ್ ನಡೆಸುವ ಬಗ್ಗೆ ರೈತರು ಹೇಳಿಕೆ ನೀಡಿದ್ದಾರೆ. ಈ ನಡುವೆ, ಚಕ್ಕಾ ಜಾಮ್ ಎಂಬ ಪದದ ಬಗ್ಗೆ, ಅದರ ಅರ್ಥದ ಬಗ್ಗೆ ಹಲವರಲ್ಲಿ ಗೊಂದಲ ಮೂಡಿದೆ.

ಚಕ್ಕಾ ಜಾಮ್ ಎಂದರೇನು? ಅದರ ಅರ್ಥವೇನು? ಪ್ರತಿಭಟನೆಯ ಅಂಗವಾಗಿ ರಸ್ತೆ ತಡೆ ನಡೆಸುವುದು. ರಸ್ತೆ ತಡೆಯ ಮೂಲಕ ಟ್ರಾಫಿಕ್ ಜಾಮ್ ಸೃಷ್ಟಿಸುವುದು. ರಸ್ತೆ ತಡೆಯುವ ಮೂಲಕ ಆಕ್ರೋಶ ಹೊರಹಾಕುವುದು. ಈ ವಿಧಾನದ ಹೋರಾಟವನ್ನು ಚಕ್ಕಾ ಜಾಮ್ ಎಂದು ಕರೆಯಲಾಗುತ್ತದೆ. ಚಕ್ಕಾ ಜಾಮ್ (Chakka Jam) ಎಂಬುದರಲ್ಲಿ, ಚಕ್ಕಾ ಹಿಂದಿ ಮೂಲದ ಪದವಾಗಿದೆ. ಚಕ್ಕಾ ಎಂದರೆ ಚಕ್ರ (wheel or tyre). ಜಾಮ್ ಎಂಬುದು ಇಂಗ್ಲಿಷ್​ನ ಜಾಮ್ (Jam) ಆಗಿದೆ. ಒಟ್ಟಾಗಿ, ಚಕ್ಕಾ ಜಾಮ್ ಎಂದರೆ ಚಕ್ರಗಳನ್ನು ತಡೆಹಿಡಿಯುವುದು. ವಾಹನಗಳನ್ನು ತಡೆಯುವುದು ಎಂಬ ಅರ್ಥ.

ಭಾರತವು ಹಲವು ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ವೈವಿಧ್ಯಮಯ ದೇಶ. ಇಲ್ಲಿನ ಒಂದೊಂದು ಭಾಷೆಯಲ್ಲಿ, ಒಂದೊಂದು ಪದಕ್ಕೆ ಒಂದೊಂದು ಅರ್ಥವಿರುತ್ತದೆ. ಅದರಂತೆ, ಈ ಪದವೂ ಸಹ ಹಿಂದಿ ಮೂಲದ ಪದ ಚಕ್ಕಾ ಮತ್ತು ಇಂಗ್ಲಿಷ್​ನ ಜಾಮ್ ಪದ ಸೇರಿಕೊಂಡು ಆಗಿದೆ.

ಟ್ವಿಟರ್​ನಲ್ಲಿ ಚಕ್ಕಾ ಜಾಮ್ ಟ್ರೆಂಡಿಂಗ್! ರೈತರು ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ, ಚಕ್ಕಾ ಜಾಮ್, ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲೂ ಪ್ರತಿಫಲಿಸಿದೆ. #IndiaSupportsChakkaJaam ಎಂಬ ಹ್ಯಾಷ್​ಟ್ಯಾಗ್ ಇಂಡಿಯಾ ಟ್ರೆಂಡ್ಸ್​ನ 5ನೇ ಸ್ಥಾನದಲ್ಲಿದೆ. ಈ ಹ್ಯಾಷ್​ಟ್ಯಾಗ್​ನಲ್ಲಿ ಈವರೆಗೆ 267K ನಷ್ಟು ರಿಟ್ವೀಟ್​ಗಳಾಗಿವೆ. ಹಿಂದಿಯ ಹ್ಯಾಷ್​ಟ್ಯಾಗ್, ಆಜ್ ಚಕ್ಕಾ ಜಾಮ್ ರಹೇಗಾ ಎಂಬುದು ಇಂಡಿಯಾ ಟ್ರೆಂಡ್ಸ್​ನ 5ನೇ ಸ್ಥಾನದಲ್ಲಿದೆ. ಈವರೆಗೆ ಆಜ್ ಚಕ್ಕಾ ಜಾಮ್ ರಹೇಗಾ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಒಟ್ಟು 56.1K ರಿಟ್ವೀಟ್​ಗಳಾಗಿವೆ. #ChakkaJam ಎಂಬ ಹ್ಯಾಷ್​ಟ್ಯಾಗ್ ಕೂಡ ಟ್ರೆಂಡಿಂಗ್​ನಲ್ಲಿದ್ದು, 23.1K ರಿಟ್ವೀಟ್​ಗಳಾಗಿದೆ.

Explainer | ಏನಿದು Chakka Jam? ಕರ್ನಾಟಕದಲ್ಲೂ ಸ್ತಬ್ಧವಾಗಲಿವೆ ಹೆದ್ದಾರಿಗಳು

Chakka Jam: ಇಂದು ಮಧ್ಯಾಹ್ನ ರಸ್ತೆ ತಡೆ ಪ್ರೋಗ್ರಾಂ, ದೆಹಲಿ ಗಡಿಭಾಗಗಳಲ್ಲಿ ಪೊಲೀಸ್ ಬಿಗಿ ಭದ್ರತೆ

Published On - 2:54 pm, Sat, 6 February 21