Viral Video : ಬೆಕ್ಕುನಾಯಿಗಳನ್ನು ನಾವು ಹೀಗೆ ಮುದ್ದಿಸುತ್ತೇವೆ. ಅವುಗಳೂ ನಮ್ಮನ್ನು ಮುದ್ದಿಸುತ್ತವೆ. ಆದರೆ ಚಿರತೆ! ಏನೇ ಆದರೂ ವನ್ಯಜೀವಿಗಳ ಬಗ್ಗೆ ನಂಬಿಕೆ ಇರಿಸಿಕೊಳ್ಳಲಾಗದು ಎನ್ನುವುದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಹೆಬ್ಬಾವೊಂದು ಪೋಷಕಿಯ ಕೈಗೆ, ಕಾಲಿಗೆ ಸುತ್ತಿಕೊಂಡು ಆಕೆಯನ್ನು ಅಪಾಯಕ್ಕೆ ತಳ್ಳಿದ ವಿಡಿಯೋ. ಇಂಥ ಸಾಕಷ್ಟು ವಿಡಿಯೋಗಳನ್ನು ನೋಡುತ್ತಲೇ ಇರುತ್ತೀರಿ. ಅವುಗಳ ನಡುವೆ ಹೀಗೆ ಮುದ್ದಾ ವಿಡಿಯೋಗಳನ್ನೂ. ಇದೀಗ ಈ ವಿಡಿಯೋ ನೋಡಿ. ಚಿರತೆ ಮರಿ ಒಳ್ಳೆಯ ಬೆಕ್ಕಿನ ಮರಿಯಂತೆ ಆಕೆಯನ್ನು ವಾಪಾಸು ಮುದ್ದಿಸಿದೆ.
ವೈಲ್ಡ್ ಕ್ಯಾಟ್ ಕನ್ಸರ್ವೇಷನ್ ಸೆಂಟರ್ನಲ್ಲಿರುವ ಸಂಗ್ರಹಾಲಯ ಪಾಲಕಿ ಈಕೆ ಇರಬಹುದು ಎನ್ನಿಸುತ್ತದೆ ಅವಳ ಜಾಕೆಟ್ ನೋಡಿದರೆ. ಒಮ್ಮೆ ಅದರ ಕೆನ್ನೆಗೆ ಈಕೆ ಮುತ್ತಿಡುತ್ತಾಳೆ. ಅದು ತಕ್ಷಣವೇ ಆಕೆಯ ಕೆನ್ನೆಯನ್ನು ನೆಕ್ಕಿ ಪ್ರೀತಿ ತೋರುತ್ತದೆ. ಬೆಕ್ಕುಗಳನ್ನು ಸುಲಭವಾಗಿ ಮುದ್ದಿಸಬಹುದು. ಆದರೆ ಚಿರತೆಯಂಥ ಭಯಾನಕ ಪ್ರಾಣಿಗಳನ್ನು ಮುದ್ದಿಸುವುದು ಅಪಾಯಕ್ಕೆ ಆಹ್ವಾನಿಸಿಕೊಂಡಂತೆಯೇ. ಏಕೆಂದರೆ ಇಂಥ ಪ್ರಾಣಿಗಳು ಉಗುರುಗಳು, ಹಲ್ಲುಗಳು ಬಹಳ ಹರಿತವಾಗಿರುತ್ತವೆ. ಸೆಕೆಂಡಿನ ಲೆಕ್ಕದಲ್ಲಿ ಏನೂ ಆಗಬಹುದು.
2,25,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಈಕೆಯ ಧೈರ್ಯಕ್ಕೆ ಶಭಾಷ್ ಹೇಳಿದ್ದಾರೆ. ಧೈರ್ಯ ಇದ್ದಲ್ಲಿಯೇ ಪ್ರೀತಿ ಇರುತ್ತದೆ ಎಂದಿದ್ದಾರೆ ಕೆಲವರು. ಪ್ರೀತಿ ಇದ್ದಲ್ಲಿಯೇ ಅಪಾಯಕ್ಕೆ ತೆರೆದುಕೊಳ್ಳುವ ಸ್ವಭಾವವೂ ಇರುತ್ತದೆ ಎಂದಿದ್ದಾರೆ ಹಲವರು. ಅಂತೂ ಈ ಚಿರತೆಗೂ ಚಿರತೆಯನ್ನು ಮುದ್ದಿಸುವ ಈ ಯುವತಿಗೂ ಅಪ್ಪಿ, ಚಾಕೋಲೇಟ್ ಕೊಡುವುದೊಂದೇ ಬಾಕಿ ನೆಟ್ಟಿಗರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ