Viral: ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಪಾಕಿಸ್ತಾನ ತಂಡ, ಅಪರೂಪದ ದೃಶ್ಯ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 27, 2024 | 12:12 PM

ಹಂಗೇರಿಯಲ್ಲಿ ನಡೆದ 45 ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತವು ಪುರುಷ ಮತ್ತು ಮಹಿಳೆಯ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತ ತಂಡ ತನ್ನ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದವು. ಈ ನಡುವೆ ಪಾಕ್‌ ಚೆಸ್‌ ತಂಡ ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್‌ ನೀಡುವಂತಹ ಹೃದಯಸ್ಪರ್ಶಿ ದೃಶ್ಯ ಕೂಡಾ ಭಾರೀ ವೈರಲ್‌ ಆಗುತ್ತಿದೆ.

Viral: ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಪಾಕಿಸ್ತಾನ ತಂಡ, ಅಪರೂಪದ ದೃಶ್ಯ ವೈರಲ್‌
ವೈರಲ್​​ ವಿಡಿಯೋ
Follow us on

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಸೆಪ್ಟೆಂಬರ್‌ 22 ರಂದು ನಡೆದ 45 ನೇ ಚೆಸ್‌ ಒಲಿಂಪಿಯಾಡ್‌ ಸ್ಪರ್ಧೆಯಲ್ಲಿ ಭಾರತ ತಂಡ ಎರಡು ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಪುರುಷರು ಮತ್ತು ಮಹಿಳೆ ಈ ಎರಡು ವಿಭಾಗದಲ್ಲೂ ಭಾರತ ತಂಡ ಚಿನ್ನವನ್ನು ಗೆದ್ದಿದ್ದು, ಭಾರತ ತಂಡ ಈ ಐತಿಹಾಸಿಕ ಗೆಲುವನ್ನು ಸಂಭ್ರಮದಿಂದ ಆಚರಿಸಿತು. ಇದರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿವೆ. ಇದೇ ವೇಳೆ ಭಾರತ ತಂಡದೊಂದಿಗೆ ಪಾಕಿಸ್ತಾನ ತಂಡದ ಹೃದಯಸ್ಪರ್ಶಿ ವಿಡಿಯೋ ವೈರಲ್‌ ಆಗಿದ್ದು, ಪಾಕ್‌ ಚೆಸ್‌ ತಂಡದ ಆಟಗಾರರು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.

ಚೆಸ್‌ ಪಂದ್ಯಾವಳಿ ಮುಗಿದ ನಂತರ ನಡೆಯುವ ಫೋಟೋ ಸೆಷನ್‌ ವೇಳೆ ಈ ಅಪರೂಪದ ದೃಶ್ಯ ಕಂಡು ಬಂದಿದ್ದು, ಭಾರತ ಚೆಸ್‌ ತಂಡದೊಂದಿಗೆ ಪಾಕ್‌ ತಂಡ ಕೂಡಾ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಭಾರತದ ಗೆಲುವನ್ನು ಸಂಭ್ರಮಿಸಿದೆ. ಈ ಕುರಿತ ಪೋಸ್ಟ್‌ ಒಂದನ್ನು ChessbaseIndia ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚೆಸ್‌ ಒಲಿಂಪಿಆಡ್‌ 2024 ರ ಚಾಂಪಿಯನ್‌ಗಳೊಂದಿಗೆ ಪಾಕಿಸ್ತಾನಿ ಚೆಸ್‌ ತಂಡ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಭಾರತ ತಂಡದ ಆಟಗಾರರೊಂದಿಗೆ ಪಾಕಿಸ್ತಾನಿ ಆಟಗಾರರು ತ್ರಿವರ್ಣ ಧ್ವಜವನ್ನು ಹಿಡಿದು ಫೋಟೋಗಳಿಗೆ ಪೋಸ್‌ ನೀಡುವ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರೀಲ್ಸ್‌ಗಾಗಿ ಅರೆ ಬರೆ ಬಟ್ಟೆ ತೊಟ್ಟು ಬೀದಿ ಸುತ್ತಿದ ಯುವತಿ, ಆಕ್ರೋಶ ವ್ಯಕ್ತಪಡಿಸಿದ ಜನ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯ ನಿಜಕ್ಕೂ ತುಂಬಾ ಸುಂದರವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಕನಸೇ ನನಸೇ ಎಂದು ತಿಳಿಯದುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:09 pm, Fri, 27 September 24