Viral: ರೀಲ್ಸ್‌ಗಾಗಿ ಅರೆ ಬರೆ ಬಟ್ಟೆ ತೊಟ್ಟು ಬೀದಿ ಸುತ್ತಿದ ಯುವತಿ, ಆಕ್ರೋಶ ವ್ಯಕ್ತಪಡಿಸಿದ ಜನ
ದೆಹಲಿಯಲ್ಲಿ ಯುವತಿಯೊಬ್ಬಳು ಬಿಕಿನಿ ತೊಟ್ಟು ಬಸ್ಸಿನಲ್ಲಿ ಅಡ್ಡಾಡಿದಂತಹ ಸುದ್ದಿಯೊಂದು ಈ ಹಿಂದೆ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರೀಲ್ಸ್‌ಗಾಗಿ ಯುವತಿಯೊಬ್ಬಳು ಬರೀ ಬ್ರಾ ತೊಟ್ಟು ಬೀದಿಯಲ್ಲಿ ಅಡ್ಡಾಡಿದ್ದಾಳೆ. ಈಕೆಯ ಈ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಇನ್ನು ಮುಂದೆ ಹೀಗೆ ಅಸಹ್ಯಕರವಾಗಿ ವರ್ತಿಸುವುದಿಲ್ಲ ಎಂದು ಕ್ಷಮೆಯನ್ನು ಕೂಡಾ ಕೇಳಿದ್ದಾಳೆ.
ಈ ಕೆಲವೊಬ್ಬರು ತಾವು ಸುದ್ದಿಯಾಗಬೇಕೆಂದೇ, ಫೇಮಸ್ ಆಗಬೇಕೆಂದೆ ಚಿತ್ರ ವಿಚಿತ್ರ ವರ್ತನೆಗಳನ್ನು ತೋರುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಹೀಗೆ ಬಿಕಿನಿ ತೊಟ್ಟು ಬಸ್ಸಿನಲ್ಲಿ ಓಡಾಡಿದ, ನಡುರಸ್ತೆಯಲ್ಲಿ ಬೆತ್ತಲೆ ಓಡಾಡಿದ ಯುವತಿಯರ ಸುದ್ದಿ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಅತಿರೇಕವೆನಿಸುವ ಘಟನೆಯೊಂದು ನಡೆದಿದ್ದು, ಪ್ರಚಾರದ ತೆವಳಿಗಾಗಿ ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಬರೀ ಬ್ರಾ ತೊಟ್ಟು ಅಡ್ಡಾಡಿದ್ದಾಳೆ. ಈಕೆಯ ಈ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಇನ್ನು ಮುಂದೆ ಹೀಗೆ ಅಸಹ್ಯಕರವಾಗಿ ವರ್ತಿಸುವುದಿಲ್ಲ ಎಂದು ಕ್ಷಮೆಯನ್ನು ಕೂಡಾ ಕೇಳಿದ್ದಾಳೆ.
ಈ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ರೀಲ್ಸ್‌ಗಾಗಿ ಯುವತಿಯೊಬ್ಬಳು ಡೆನಿಮ್ ಹಾಗೂ ಬರೀ ಬ್ರಾ ಧರಿಸಿ ಜನನಿಬಿಡ ಪ್ರದೇಶದಲ್ಲಿ ಓಡಾಡುವ ಮೂಲಕ ಇತರರರಿಗೆ ಮುಜುಗರವನ್ನು ಉಂಟುಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇದೆಂಥಾ ವರ್ತನೆ ಎಂದು ನೆಟ್ಟಿಗರು ಆಕೆಯ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಹುಚ್ಛಾಟ ಮೆರೆದಿದ್ದಕ್ಕಾಗಿ ಬಜರಂಗದಳ ಸೇರಿದಂತೆ ಇತರೆ ಸಂಘಟನೆಗಳು ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
इंदौर में लड़की ने पहले अश्लील कपड़े पहन बनाई रील.. ◆ वीडियो वायरल होने के बाद माफी मांग रही युवती👏
Indore | #MadhyaPradesh | #viralvideo | #इंदौर pic.twitter.com/c2VDjoWJKo
— manoj _Rodiya (@manoj23695) September 26, 2024
ತನ್ನ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಮತ್ತು ಟೀಕೆಗಳು ಬರಲಾರಂಭಿಸಿದ್ದೇ ತಡ ಆ ಯುವತಿ ʼನನ್ನನ್ನು ಕ್ಷಮಿಸಿ ಬಿಡಿ ಸಾರ್ವಜನಿಕ ಸ್ಥಳದಲ್ಲಿ ನಾನು ಆ ರೀತಿಯ ಬಟ್ಟೆಯನ್ನು ಧರಿಸಿ ಓಡಾಡಬಾರದಿತ್ತು, ನನ್ನ ಈ ವರ್ತನೆಯಿಂದ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿʼ ಎಂದು ಕ್ಷಮಾಪಣೆ ಕೇಳಿದ್ದಾಳೆ.
ಇದನ್ನೂ ಓದಿ: ಟೆಸ್ಟ್ ಡ್ರೈವ್ ಹೆಸರಿನಲ್ಲಿ ಕಾರಿನೊಂದಿಗೆ ಎಸ್ಕೇಪ್ ಆದ ಇಬ್ಬರು ಯುವಕರು
ಮನೋಜ್ (manoj23695) ಎಂಬವರು ಸೋಷಿಯಲ್ ಮೀಡಿಯಾದ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಯುವತಿ ತನ್ನಿಂದಾದ ತಪ್ಪಿಗೆ ಕ್ಷಮೆಯನ್ನು ಕೇಳುವ ದೃಶ್ಯವನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ