Video: ಎತ್ತಾಕ್ಕೊಂಡ್ ಹೋಯ್ತಾ ಇರೋದೇ; ಹೈವೇ ರೋಡಲ್ಲಿ ಒಂದೇ ಸ್ಕೂಟಿಯಲ್ಲಿ ಐವರ ಡೇಂಜರ್ಸ್ ಸ್ಟಂಟ್

ಕೈಗೆ ವಾಹನ ಸಿಕ್ಕರೆ ಸಾಕು ನಮ್ಮದೇ ರಸ್ತೆ ಅನ್ನೋ ಹಾಗೆ ವಾಹನ ಚಲಾಯಿಸುವವರನ್ನು ನೀವು ನೋಡಿರಬಹುದು. ಆದರೆ ಈಗಿನ ಕಾಲದ ಯುವಕರು ನಡುರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಗಳನ್ನು ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ತಾರೆ. ಇದೀಗ ಒಂದೇ ಸ್ಕೂಟರ್ ನಲ್ಲಿ ಐವರು ಯುವಕರು ಅಪಾಯಕಾರಿ ಸ್ಟಂಟ್ ಮಾಡಿದ್ದು ಈ ಸಾಹಸಮಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Video: ಎತ್ತಾಕ್ಕೊಂಡ್ ಹೋಯ್ತಾ ಇರೋದೇ; ಹೈವೇ ರೋಡಲ್ಲಿ ಒಂದೇ ಸ್ಕೂಟಿಯಲ್ಲಿ ಐವರ ಡೇಂಜರ್ಸ್ ಸ್ಟಂಟ್
ಐವರು ಯುವಕರ ಅಪಾಯಕಾರಿ ಸ್ಟಂಟ್
Image Credit source: Twitter

Updated on: Oct 02, 2025 | 6:51 PM

ಛತ್ತೀಸ್‌ಗಢ, ಅಕ್ಟೋಬರ್ 02: ಈಗಿನ ಯುವಕ ಯುವತಿಯರಿಗೆ ಫೇಮಸ್ ಆಗೋ ಹುಚ್ಚು. ಹೀಗಾಗಿ ಅಪಾಯಕಾರಿ ಸಾಹಸಗಳನ್ನು (dangerous stunt) ಮಾಡಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಳ್ಳುವವರೇ ಹೆಚ್ಚು. ಹೌದು ಈ ಬೈಕ್ ಅಥವಾ ಕಾರುಗಳಲ್ಲಿ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಇದೀಗ ಐವರು ಯುವಕರು ಹೈವೇ ರೋಡಲ್ಲಿ ಒಂದೇ ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಈ ಘಟನೆಯೂ ಛತ್ತೀಸ್‌ಗಢದ ಬಿಜಾಪುರ್‌ನಲ್ಲಿ (Bijapur of Chhattisgarh) ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ನೋಡಿದ ಬಳಕೆದಾರರು ಈ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅಗ್ರಹಿಸಿದ್ದಾರೆ.

ಐವರು ಯುವಕರ ಅಪಾಯಕಾರಿ ಸ್ಟಂಟ್

ಇಲ್ಯಾಸ್ (Ilyas) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಐವರು ಯುವಕರು ಒಂದೇ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಇಲ್ಲಿ ನಾಲ್ವರು ಯುವಕರು ಒಂದೇ ಸ್ಕೂಟರ್‌ನಲ್ಲಿ ಕುಳಿತುಕೊಂಡಿದ್ದು, ಇನ್ನೊಬ್ಬ ಅವರ ಹೆಗಲ ಮೇಲೆ ಮಲಗಿ ನೇತಾಡುತ್ತಿರುವುದನ್ನು ಕಾಣಬಹುದು. ಈ ಐವರು ಯುವಕರು ಅಪಾಯಕಾರಿ ಸ್ಟಂಟ್ ಮಾಡುತ್ತಿರುವುದನ್ನು ಪಾದಚಾರಿಯೊಬ್ಬರು ಚಿತ್ರೀಕರಿಸಿದ್ದು, ಸ್ಟಂಟ್ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದಿದ್ದಾರೆ. ಈ ವೇಳೆ ಯುವಕರು ಧನ್ಯವಾದ ಹೇಳುವುದನ್ನು ಕಾಣಬಹುದು.

ಇದನ್ನೂ ಓದಿ
ಜಿಮ್‌ನಲ್ಲಿ ಜುಟ್ಟು  ಹಿಡಿದು ಎಳೆದಾಡಿಕೊಂಡ ಮಹಿಳಾಮಣಿಯರು
ತರಕಾರಿ ಕೊಳ್ಳಲು ಬಂದ ಯುವತಿಯರ ಕದ್ದು ವಿಡಿಯೋ ಮಾಡಿದ ವ್ಯಕ್ತಿ
ಚಲಿಸುತ್ತಿದ್ದ ಕಾರಿ ಬೋನೆಟ್​ಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಜಿಗಿದ ಯುವಕ
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು, ಕಿಸ್ಸಿಂಗ್ ವಿಡಿಯೋ ವೈರಲ್

ಸೆಪ್ಟೆಂಬರ್ 29 ರಂದು ಶೇರ್ ಮಾಡಲಾದ ಈ ಪೋಸ್ಟ್ ಇದುವರೆಗೆ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಯುವಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಸ್ಟಂಟ್ ಮಾಡುವ ವ್ಯಕ್ತಿಗಳು ಮುಸ್ಲಿಂಮರು ಎಂದು ಯಾರಾದರೂ ಹೇಳಿದರೆ ಪೊಲೀಸರು ಬೇಗನೇ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈಗಿನ ಯುವಕರು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿ ಪ್ರಾಣದ ಜೊತೆಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ