ತಾಟಿಪಾಕ: ಆಂಧ್ರಪ್ರದೇಶದ ಅಂಬೇಡ್ಕರ್ ಕೋಣಸೀಮಾ ಜಿಲ್ಲೆಯ ತಾಟಿಪಾಕದ ಮಾರುಕಟ್ಟೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಚಿಕನ್ ಶಾಪ್ ಮಾಲೀಕನೊಬ್ಬ ಅಮಾಯಕ ಕಾಗೆಯನ್ನು ಹಗ್ಗದಿಂದ ಕಟ್ಟಿ ಹಾಕಿರುವ ಘಟನೆ ನಡೆದಿದೆ. ದಿನವೂ ಕಾಗೆಯ ಎಡೆಬಿಡದ ಕಾಟದಿಂದ ಸಿಟ್ಟಿಗೆದ್ದ ಅಂಗಡಿಯ ಮಾಲೀಕ ಆ ಕಾಗೆಯನ್ನು ಸುಮ್ಮನಾಗಿಸಲು ಹಗ್ಗದಿಂದ ಕಟ್ಟಿಹಾಕಿದ್ದಾನೆ. ಇದಾದ ನಂತರ ಹೊಸ ಸಮಸ್ಯೆ ಪ್ರಾರಂಭವಾಯಿತು.
ಈ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಕಾಗೆಯ ಸಂಕಟದ ಕೂಗನ್ನು ಕೇಳಿದ ಇತರೆ ಕಾಗೆಗಳು ಸ್ವಲ್ಪ ಸಮಯದೊಳಗೆ ಮಾರುಕಟ್ಟೆಯಲ್ಲಿ ಜಮಾಯಿಸಿ, ಜೋರಾಗಿ ಒಕ್ಕೊರಲಿನಿಂದ ಕೂಗಲಾರಂಭಿಸಿದವು. ಕಾ ಕಾ ಎಂಬ ಕಾಗೆಗಳು ಕಿವಿಗಡಚಿಕ್ಕುವ ಕೂಗನ್ನು ಕೇಳಿ ಎಲ್ಲ ವ್ಯಾಪಾರಿಗಳು ಗಲಾಟೆ ಮಾಡಿದರು. ಇದರಿಂದ ಇತರ ವ್ಯಾಪಾರಿಗಳು ಮತ್ತು ಮಾರುಕಟ್ಟೆಗೆ ಹೋಗುವವರು ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದರು.
కాకి అరిచి విసిగిస్తుందని తాడుతో కట్టేసిన ఓ చికెన్ షాప్ యజమాని
అంబేద్కర్ కోనసీమ జిల్లా తాటిపాక డైలీ మార్కెట్లో ఒక కాకి అరిచి విసిగిస్తుందని దాన్ని ఓ చికెన్ షాప్ యజమాని తాడుతో కట్టేశాడు.. అయితే కాకిని బంధించడంతో అక్కడకు వందలాది కాకులు చేరుకుని అరవడం మొదలెట్టాయి.
కాకుల గోలను… pic.twitter.com/08GzAC94px
— Telugu Scribe (@TeluguScribe) July 17, 2024
ಇದನ್ನೂ ಓದಿ: Viral Video: ಕೇರಳದ ದೇವಾಲಯಕ್ಕೆ ಸೀರೆಯುಟ್ಟ ವಿದೇಶಿ ಮಹಿಳೆಗೆ ನಿರ್ಬಂಧ; ವಿಡಿಯೋ ವೈರಲ್
ಈ ಕರ್ಕಶ ಶಬ್ದವನ್ನು ಸಹಿಸಲಾಗದೆ, ಇತರ ಅಂಗಡಿಯವರು ಆ ಕಾಗೆಯನ್ನು ಬಿಡುವಂತೆ ಚಿಕನ್ ಅಂಗಡಿಯ ಮಾಲೀಕರಿಗೆ ಮನವಿ ಮಾಡಿದರು. ಕೊನೆಗೂ ಚಿಕನ್ ಶಾಪ್ ಮಾಲೀಕನಿಗೆ ಕಾಗೆಯನ್ನು ಬಿಡಿಸಿ ಬಿಡದೆ ಬೇರೆ ದಾರಿ ಇರಲಿಲ್ಲ. ಹೀಗಾಗಿ, ತಾನು ಕಟ್ಟಿಹಾಕಿದ ಕಾಗೆಯನ್ನು ಬಿಟ್ಟು ಕಳಿಸಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ