Percussion : ಮಕ್ಕಳು ಅಳಲು ಶುರು ಮಾಡಿದರೆ ಕೈಯಲ್ಲಿದ್ದ ಸಾಮಾನುಗಳಿಂದಲೇ ತಾಳಬದ್ಧವಾಗಿ ಕುಟ್ಟುತ್ತ ಗಮನವನ್ನು ಸೆಳೆಯುತ್ತೇವಲ್ಲ. ಅದು ಬಟ್ಟಲೋ, ಚಮಚವೋ, ಪ್ಲೇಟೋ ಇನ್ನೊಂದೇನೋ. ಆ ಶಬ್ದ ಮತ್ತು ಲಯದತ್ತ ಮನಸ್ಸನ್ನು ಕೇಂದ್ರೀಕರಿಸುವ ಮಕ್ಕಳು ಯಾವುದಕ್ಕೆ ಹಠ ಬಂದಿತ್ತು ಅನ್ನುವುದನ್ನೇ ಮರೆತು ಹೋಗುತ್ತವೆ. ಸಂಗೀತದ ಮಾಂತ್ರಿಕತೆ ಅದು. ಸಂಗೀತವೆಂದಾಕ್ಷಣ ಮಕ್ಕಳಿಗೆ ದುಬಾರಿ ವಾದ್ಯಗಳನ್ನು ಕೊಡಿಸಬೇಕು, ಕ್ಲಾಸುಗಳಿಗೆ ಕರೆದುಕೊಂಡು ಹೋಗಬೇಕು ಅಂತೇಲ್ಲ ಏನಿಲ್ಲ. ವಾತಾವರಣ ಮತ್ತು ಅದರ ರುಚಿ ಬೆಳೆಸುವುದು ಮತ್ತು ನಾದದ ಗುಂಗಿಗೆ ಬೀಳಿಸುವುದು ಮುಖ್ಯ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಈ ನಾಲ್ಕು ಮಕ್ಕಳು ‘ಚೆಂಡೆವಾದನ’ದಲ್ಲಿ ಮುಳುಗಿವೆ.
ಇದನ್ನೂ ಓದಿ : Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?
ಮಕ್ಕಳನ್ನು ಯಾವ ಕ್ಲಾಸಿಗೆ ಸೇರಿಸಬೇಕು, ಯಾರ ಬಳಿ ಸೇರಿಸಬೇಕು, ಯಾವ ವಾದ್ಯ ಕೊಡಿಸಬೇಕು, ರಿಯಾಝ್ ಮಾಡಿಸಬೇಕು ಅಂತೆಲ್ಲ ತಲೆಬಿಸಿ ಇವರ ಪೋಷಕರಿಗಿಲ್ಲ. ಈ ಮಕ್ಕಳೂ ಇಂಥ ಯಾವ ಒತ್ತಡಕ್ಕೂ ಇಲ್ಲಿ ಒಳಪಟ್ಟಿಲ್ಲ. ಅತ್ಯಂತ ಸಹಜವಾಗಿ ಇದ್ದ ಪರಿಕರಗಳನ್ನೇ ವಾದ್ಯವಾಗಿಸಿಕೊಂಡಿದ್ದಾರೆ. ಆದರೂ ಇವರು ಹೀಗೆ ನುಡಿಸುವುದನ್ನು ಹೇಗೆ ಕಲಿತರು?
ಚೆಂಡೆವಾದನದ ಧ್ವನಿಯನ್ನು ಹೋಲುತ್ತಿದೆ ಖಾಲೀ ಪ್ಲಾಸ್ಟಿಕ್ ಬಾಟಲಿಗಳ ವಾದನ. ಇವರು ಯಾರ ಬಳಿಯೂ ಕ್ಲಾಸಿಗೆ ಹೋಗಿಲ್ಲ. ಇವರದೇನಿದ್ದರೂ ನೋಡಿಕೆಯ ಕಲಿಕೆ. ಈ ವಿಡಿಯೋ ಅನ್ನು ಈತನಕ 8.7 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇವರೆಲ್ಲರೂ ಭವಿಷ್ಯದಲ್ಲಿ ಅತ್ಯುತ್ತಮ ಕಲಾವಿದರಾಗುವ ಗುಣಲಕ್ಷಣವನ್ನು ಹೊಂದಿದ್ದಾರೆ ಎಂದಿದ್ದಾರೆ. ಸಂಗೀತ ಉಳ್ಳವರದ್ದಷ್ಟೇ ಸ್ವತ್ತಲ್ಲ, ಯಾರೂ ಅವರವರಿಗೆ ಬೇಕಾದ ಹಾಗೆ ಅದನ್ನು ಅಪ್ಪಬಹುದು ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್ಬುಲ್ ಮಹಿಳೆ
ನನ್ನ ಶಾಲಾ ದಿನಗಳನ್ನು ಈ ವಿಡಿಯೋ ನೆನಪಿಸಿದೆ, ಇದು ಖಂಡಿತ ವೈರಲ್ ಆಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಇವರಿಗೆ ಒಳ್ಳೆಯ ಗುರುವಿನೆಡೆ ತರಬೇತಿ ಕೊಡಿಸಬೇಕು, ಪಾಲಕರು ದುಡಿಯುವುದರಲ್ಲಿ ಮುಳುಗಿರುತ್ತಾರೆ. ಆದರೆ ಈ ಮಕ್ಕಳ ಕಲೆಯನ್ನು ಪೋಷಿಸುವವರು ಯಾರು? ಅಂತೆಲ್ಲ ನೆಟ್ಟಗರು ಚರ್ಚಿಸಿದ್ದಾರೆ. ಏನೇ ಆಗಲಿ ಮಕ್ಕಳು ಆಡಾಡುತ್ತಲೇ ಕಲೆಯ ಗುಂಗನ್ನು ಹಿಡಿಸಿಕೊಳ್ಳಬೇಕು. ಅಂದಾಗಲೇ ಅದರಲ್ಲಿ ಅವುಗಳಿಗೆ ಪ್ರೀತಿ ಹುಟ್ಟುತ್ತದೆ. ಅಂದಹಾಗೆ ಕಲೆ ಒತ್ತಾಯಿಸಿದರೆ ಬರುವಂಥದ್ದಲ್ಲ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:57 am, Tue, 15 August 23