Viral Video : ಚಿಂಪಾಂಜಿಗಳು ತಮ್ಮ ಬುದ್ಧಿವಂತಿಕೆಯಿಂದಲೇ ನಮ್ಮ ಗಮನ ಸೆಳೆಯುವುದು. ಅನುಕರಣೆಯಲ್ಲಿ ಎಲ್ಲಾ ಪ್ರಾಣಿಗಳಿಂತ ಇವು ಚುರುಕು. ಏಕೆಂದರೆ ನಮ್ಮ ಪೂರ್ವಜರು ಇವರೇ ಅಲ್ಲವೇ! ಈಗ ಸನ್ಗ್ಲಾಸ್ ಹಾಕಿಕೊಂಡು ತೆಂಗಿನ ಹಾಲು ಕುಡಿಯುತ್ತಿರುವ ಚಿಂಪಾಜಿಯ ವಿಡಿಯೋ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಚ್ಚರಿಯಿಂದ ಈ ವಿಡಿಯೋ ಗಮನಿಸುತ್ತಿದ್ದಾರೆ. ಈ ಚಿಂಪಾಂಜಿಯು ಈಗ ತನ್ನ ಆಕರ್ಷಕ ನಡೆವಳಿಕೆಗಳಿಂದ ತಾನಿರುವ ಮೃಗಾಲಯದಲ್ಲಿ ಭೇಷ್ ಎನ್ನಿಸಿಕೊಂಡಿದೆ. ಸೆ. 17ರಂದು ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ಲೊರಿಡಾದ ಮಿಯಾಮಿಯ ಝೂಆಲಾಜಿಕಲ್ ವೈಲ್ಡ್ಲೈಫ್ ಫೌಂಡೇಶನ್ನಲ್ಲಿ ವಾಸಿಸುತ್ತಿರುವ ಈ ಚಿಂಪಾಂಜಿ ಈ ವಿಡಿಯೋ ಮೂಲಕ ಜಗತ್ತಿನಾದ್ಯಂತ ಇರುವ ಪ್ರಾಣಿಪ್ರೇಮಿಗಳ ಮನಸ್ಸನ್ನು ಸೂರೆಗೊಂಡಿದೆ. ಈತನಕ 8.4 ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. 26,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಚಿಂಪಾಂಜಿಗೆ ಅನೇಕ ಜನರು ಶುಭಹಾರೈಸಿದ್ಧಾರೆ.
ಸೋ ಕೂಲ್ ಹ್ಯಾಂಡ್ಸಮ್ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ನೋಡಿದಿರಾ ಅದು ಎಷ್ಟು ಸರಾಗವಾಗಿ ತನ್ನ ಸನ್ಗ್ಲಾಸ್ ಅನ್ನು ತೆಗೆದು ತೆಂಗಿನನೀರು ಕುಡಿಯುವುದನ್ನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:26 pm, Thu, 6 October 22