ಭಾರೀ ಮಳೆ, ಗಾಳಿಗೆ ಕರೆಂಟ್ ವ್ಯತ್ಯಾಯ ಆಗೋದು ಸಾಮಾನ್ಯ. ಆದ್ರೆ ನಗದು ರಹಿತ ವ್ಯವಹಾರ ನಡೆಯುವ ಈ ಕಾಲದಲ್ಲಿ ದಿನಗಟ್ಟಲೆ ಕರೆಂಟ್ ಇಲ್ಲದೆ ಹೋದ್ರೆ, ಮೊಬೈಲ್‌ನಲ್ಲಿ ಚಾರ್ಜ್ ಇಲ್ಲದೆ ಹೊರಗಡೆ ಏನಾದ್ರೂ ಆನ್‌ಲೈನ್ ಅಲ್ಲಿ ದುಡ್ಡು ಪೇ ಮಾಡಿ ಖರೀದಿ ಮಾಡ್ಬೇಕಂದ್ರೂ ತುಂಬಾನೇ ಕಷ್ಟ ಆಗುತ್ತೆ. ಇಲ್ಲೊಂದು ಕಡೆಯೂ ಇದೀಗ ಅದೇ ಪರಿಸ್ಥಿತಿ ಉದ್ಭವಿಸಿದ್ದು, ಮೊಬೈಲ್‌ನಲ್ಲಿ ಚಾರ್ಜೂ ಇಲ್ಲದೆ ಕರೆಂಟೂ ಇಲ್ಲದೆ ಆನ್‌ಲೈನ್ ಪೇಮೆಂಟ್ ಮಾಡಲು ಸಾಧ್ಯವಾಗದೆ ಜನ ಊಟ ಮಾಡೋದಕ್ಕೂ ಪರದಾಡಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಚಾರ್ಜಿಂಗ್ ಸ್ಟೆಷನ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಅಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಚೀನಾದಲ್ಲಿ ನಡೆದಿದ್ದು, ಭಾರೀ ಚಂಡಮಾರುತದಿಂದಾಗಿ ಜನ ಕರೆಂಟ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಪರದಾಡಿದ್ದಾರೆ. ಸೆಪ್ಟೆಂಬರ್ 6 ರಂದು ಚೀನಾದ ಹೈನಾನ್ ಪ್ರಾಂತ್ಯದಲ್ಲಿ ಭಾರೀ ಪ್ರಮಾಣದಲ್ಲಿ ಟೈಪೂನ್ ಯಾಗಿ ಚಂಡಮಾರುತ ಕಾಣಿಸಿಕೊಂಡಿದ್ದು, ಚಂಡ ಮಾರುತ ಅಪ್ಪಳಿಸಿದ ಪರಿಣಾಮ ವಿದ್ಯುತ್ ಸಂಪರ್ಕಗಳೇ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆನ್‌ಲೈನ್ ಪೇಮೆಂಟ್ ವ್ಯವಹಾರಗಳಿಗೆ ಅವಲಂಬಿತವಾಗಿರುವ ಇಲ್ಲಿನ ಜನ ಕರೆಂಟ್ ಇಲ್ಲದೆ, ಮೊಬೈಲ್ ಚಾರ್ಜ್ ಇಲ್ಲದೆ ಊಟಕ್ಕೂ ಕೂಡಾ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹೈನಾನ್ ಪ್ರಾಂತ್ಯದ ಅಲ್ಲಲ್ಲಿ ಚಾರ್ಜಿಂಗ್ ಸ್ಟೇಷನ್ ತೆರೆದಿದ್ದು, ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.
Downside of cashless society
Hainan, China🇨🇳
After the typhoon, the water and electricity were cut off, Chinese people desperately wanted to charge their phones.
Because all your money is in your mobile phone. Without a mobile phone, you can’t even buy a piece of bread. https://t.co/EfluhEUilv pic.twitter.com/IYEGEnW0Tr— Songpinganq (@songpinganq) September 9, 2024
ಈ ಕುರಿತ ಪೋಸ್ಟ್ ಒಂದನ್ನು songpinganq ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚಂಡ ಮಾರುತದ ನಂತರ ವಿದ್ಯುತ್ ಕಡಿತಗೊಂಡ ಕಾರಣ ಮೊಬೈಲ್‌ನಲ್ಲಿ ಚಾರ್ಜ್ ಇಲ್ಲದೆ ಆನ್‌ಲೈನ್ ಪೇಮೆಂಟ್ ಮಾಡಲು ಸಾಧ್ಯವಾಗದೆ ಆಹಾರ ಖರೀದಿಸಲು ಪರದಾಡಿದ ಜನ” ಎಂಬ ಶಿರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜನರು ಸಾಲಾಗಿ ನಿಂತು ಚಾರ್ಜಿಂಗ್ ಸ್ಟೇಷನ್‌ನಲ್ಲಿ ಜನರೇಟರ್ ಸಹಾಯದಿಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇದೇನಪ್ಪಾ ವಿಚಿತ್ರ ಚೀನಾದಲ್ಲಿ ಕಾಣಿಸಿಕೊಂಡ ʼಅಂಡರ್‌ವೇರ್ʼ ಚಂಡ ಮಾರುತ
ಸೆಪ್ಟೆಂಬರ್ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಒಂದು ವೇಳೆ ಇಂಟರ್‌ನೆಟ್ ವ್ಯವಸ್ಥೆ ಸ್ಥಗಿತಗೊಂಡ್ರೆ ಜನ ಏನ್ ಮಾಡ್ಬೋದುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿದಾಗ ಸಂಪೂರ್ಣವಾಗಿ ನಗದು ರಹಿತ ವ್ಯವಸ್ಥೆಯನ್ನು ಪಾಲಿಸುವುದು ಅಷ್ಟು ಒಳ್ಳೆಯದಲ್ಲ ಎಂದು ತೋರುತ್ತದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ