Video: ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ, ಪತ್ನಿಗಾಗಿ ಮಿಡಿಯಿತು ಪತಿಯ ಹೃದಯ

ಸಂಸಾರ ಎಂಬುದು ಎಷ್ಟು ಅದ್ಭುತ ಅಲ್ವಾ, ಎರಡು ಮನಸ್ಸುಗಳು ಸುದೀರ್ಘಕಾಲದವರಗೆ ಜತೆಯಾಗಿ ಜೀವನ ನಡೆಸುವುದೇ ನಿಜವಾದ ಸಂಸಾರ. ಆದರೆ ದಾಂಪತ್ಯವನ್ನು ಹೇಗೆಲ್ಲ ಕ್ರೂರವಾಗಿ ನಡೆಸಿಕೊಳ್ಳಬಹುದು ಎಂಬ ಉದಾಹರಣೆಗಳು ಕೂಡ ನಮ್ಮ ಕಣ್ಮುಂದೆ ಇದೆ. ಹತ್ಯೆ, ಡಿವೋರ್ಸ್, ಮೋಸ ಹೀಗೆ ಅನೇಕ ವಿಚಾರಗಳಿಗೆ ಸುಂದರವಾದ ದಾಂಪತ್ಯ ಜೀವನವನ್ನು ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋವನ್ನು ನೋಡಿದ ಮೇಲೆ ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಎಂದರೆ ಏನು ಎಂದು ಅರ್ಥವಾಗುತ್ತದೆ.

Video: ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ, ಪತ್ನಿಗಾಗಿ ಮಿಡಿಯಿತು ಪತಿಯ ಹೃದಯ
ವೈರಲ್​​ ವಿಡಿಯೋ
Image Credit source: Twitter

Updated on: Aug 05, 2025 | 5:43 PM

ಚೀನಾ, ಆಗಸ್ಟ್‌ 05: ಕಾಲದಲ್ಲಿ ಹನಿಮೂನ್​​​ ಹೋಗಿ ಗಂಡನ್ನು ಕೊಲೆ ಮಾಡುವುದು, ಹೆಂಡತಿಯನ್ನು ಕೊಲೆ ಮಾಡಿ ಡ್ರಮ್​​ನಲ್ಲಿ ಹಾಕುವುದು, ಹೀಗೆ ಅನೇಕ ಘಟನೆಗಳನ್ನು ನೋಡಿರಬಹುದು. ಸಂಸಾರದ ನಿಜವಾದ ಅರ್ಥ ಏನು ಎಂಬುದನ್ನು ಇಂದಿನ ದಂಪತಿಗಳು ಕಲಿತುಕೊಂಡಿಲ್ಲ. ಆದರೆ ನಿಜವಾದ ಪ್ರೀತಿ, ವಿಶ್ವಾಸ ಎಲ್ಲಿದೆ ಎಂಬುದನ್ನು ಈ ವಿಡಿಯೋ ತಿಳಿಸುತ್ತದೆ ನೋಡಿ. ದೇಶ, ಭಾಷೆ, ಆಚರಣೆ ಬೇರೆಯಾದರೂ ಭಾವನೆ, ಪ್ರೀತಿ, ನಂಬಿಕೆ ಒಂದೇ ಆಗಿರುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಚೀನಾದಲ್ಲಿ ಒಂದು ಭಾವನತ್ಮಾಕ ಘಟನೆಯೊಂದು ನಡೆದಿದೆ. ಸಂಕಷ್ಟ ಕಾಲದಲ್ಲೂ ತನ್ನನ್ನು ನಂಬಿಕೊಂಡು ಬಂದಿರುವ ಪತ್ನಿಯನ್ನು ಕಾಪಾಡಬೇಕು ಎಂಬ ಈ ಪತಿಯ ಯೋಚನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಚೀನಾದಲ್ಲಿ ಭಾರೀ ಪ್ರವಾಹ ( China flood) ಉಂಟಾಗಿ, ಅಲ್ಲಿ ಜನರ ಜೀವ ತುಂಬಾ ಕಷ್ಟದಲ್ಲಿತ್ತು. ಈ ಪ್ರವಾಹದ ನಡುವೆಯೂ ಒಬ್ಬ ವ್ಯಕ್ತಿ ತನ್ನ ಪತ್ನಿಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಭದ್ರತಾ ಸೇನಾಗಳು ಇವರನ್ನು ಕಾಪಾಡಲು ಬಂದಾಗ ಈ ವ್ಯಕ್ತಿ ಮೊದಲು ನನ್ನ ಪತ್ನಿಯನ್ನು ಕಾಪಾಡಿ ಅವಳಿಗೆ ಈಜಲು ಬರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.

ರಕ್ಷಣಾ ಸೇನೆಗಳ ಜತೆಗೆ ನನ್ನನ್ನು ಮತ್ತೆ ಕಾಪಾಡಿ, ಆದರೆ ನನ್ನ ಹೆಂಡತಿಯನ್ನು ಮೊದಲು ಕಾಪಾಡಿ ಎಂದು ಮನವಿ ಮಾಡಿದ್ದಾನೆ. ಆತನ ಮಾತಿನಂತೆ ಮೊದಲು ಪತ್ನಿಯನ್ನು ಕಾಪಾಡಿ, ನಂತರ ಇಬ್ಬರನ್ನು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ನಂತರ ಇಬ್ಬರು ಕೂಡ ಅಪ್ಪಿಕೊಂಡು ದುಃಖ ವ್ಯಕ್ತಪಡಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.  ಈ ಬಗ್ಗೆ ಮಾತನಾಡಿದ ಆ ವ್ಯಕ್ತಿ ನಾವು 10 ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದೆವು, ನನ್ನ ಹೆಂಡತಿಯನ್ನು ನಾನು ತುಂಬಾ ಪ್ರೀತಿ ಮಾಡುತ್ತೇನೆ. ಇದೇ ಮೊದಲು ಬಾರಿ ಇಂತಹ ಪರಿಸ್ಥಿತಿಯನ್ನು ಅನುಭವಿಸಿದ್ದು ಎಂದು ಹೇಳಿದ್ದಾನೆ.

ಇದನ್ನೂ ಓದಿ
ಆಟೋ ಓಡಿಸಿಕೊಂಡು ಈ ಚಾಲಕ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ
ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದ ಪುಟಾಣಿ
ಚಾಲಕನಿಲ್ಲದೆ ಸ್ಟಾರ್ಟ್ ಆಗಿ ಮುಂದಕ್ಕೆ ಬಂದು ನಿಂತ ಟ್ರ್ಯಾಕ್ಟರ್

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ದ್ವೇಷದಿಂದ ಪ್ರೀತಿಯವರೆಗೆ: ಫ್ರೆಂಡ್ ಶಿಪ್ ಡೇಯಂದು ವಿಚಿತ್ರ ಮ್ಯಾರೇಜ್ ಸ್ಟೋರಿ ರಿವೀಲ್ ಮಾಡಿದ ಯುವತಿ

ನನ್ನ ಹೆಂಡತಿಗೆ ಈಜು ಬಾರದ ಕಾರಣ ಅಳುತ್ತಿದ್ದಳು. ಒಬ್ಬ ಪುರುಷನಾಗಿ, ನನ್ನ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ ಮೊದಲು ನನ್ನ ಹೆಂಡತಿಯನ್ನು ಉಳಿಸುವುದು. ಅವಳನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಅನೇಕರು ಈ ವಿಡಿಯೋ ನೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಯಾವುದೇ ಪ್ರಣಯ ಭಾವನೆಗಳು ಅಥವಾ ಗಂಭೀರ ಪ್ರತಿಜ್ಞೆಗಳಿಲ್ಲದೆ, ಸರಳ ಜೀವನವನ್ನು ನಡೆಸುತ್ತಿರುವ ದಂಪತಿಗಳು ಇವರು ಎಂದು ಕಾಮೆಂಟ್​​ ಮಾಡಿದ್ದಾರೆ. ಇಂತಹ ಗಂಡನನ್ನು ಪಡೆಯಲು ಆಕೆ ತುಂಬಾ ಪುಣ್ಯ ಮಾಡಿರಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಎಷ್ಟು ಮದುವೆಗಳು ಚಿಕ್ಕ ಚಿಕ್ಕ ಕಾರಣಕ್ಕೆ ಮುರಿದು ಹೋಗಿದೆ. ಇನ್ನು ಕೆಲವು ಕಡೆ ದೀರ್ಘಕಾಲ ಸಂಬಂಧವನ್ನೇ ಮುರಿಕೊಂಡು ಹೋಗುತ್ತಾರೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Tue, 5 August 25