ಪ್ರಸ್ತುತ ಚೀನಾದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಯ ಶಾಖವನ್ನು ತಡೆಯಲಾರದೆ ಜನ ಒದ್ದಾಡುತ್ತಿದ್ದು, ಮಳೆ ಬಂದ್ರೆ ಸಾಕಪ್ಪಾ ಎಂದು ಪ್ರಾರ್ಥನೆ ಮಾಡ್ತಿದ್ದಾರೆ. ಆದ್ರೆ ಈ ಸಮಯದಲ್ಲಿ ಮಳೆಯ ಬದಲಿಗೆ ಇಲ್ಲಿ ಆಕಾಶದಿಂದ ಅಂಡರ್‌ವೇರ್ ಮಳೆ ಸುರಿದಿದ್ದು, ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿನ ಜನ ಫುಲ್ ಶಾಕ್ ಆಗಿದ್ದಾರೆ. ಈ ಕುರಿತ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ವರದಿಗಳ ಪ್ರಕಾರ ಸೆಪ್ಟೆಂಬರ್ 2 ರಂದು ಚೀನಾದ ಚಾಂಗ್ಕಿಂಗ್ ನಗರದಲ್ಲಿ ಈ ಘಟನೆ ನಡೆದಿದ್ದು, ಚಂಡ ಮಾರುತದಿಂದ ಉಂಟಾದ ಗಾಳಿಯ ರಭಸಕ್ಕೆ ಆಕಾಶದಲ್ಲಿ ರಾಶಿ ರಾಶಿ ಒಳ ಉಡುಪುಗಳು ಹಾರಿ ಹೋಗಿವೆ. ಚೀನಾದ ಚಾಂಗ್ಕಿಂಗ್ ನಗರದಲ್ಲಿ ಬಿಸಿಲಿನ ತಾಪ ತೀರಾ ಹೆಚ್ಚಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಈ ಶಾಖದ ವಾತಾವರಣದಿಂದ ಜನರಿಗೆ ಕೊಂಚ ಮುಕ್ತಿ ನೀಡಲು ಅಧಿಕಾರಿಗಳು ಮೋಡ ಬಿತ್ತನೆ ಮಾಡಿ ಕೃತಕ ಮಳೆ ಸುರಿಸಲು ನಿರ್ಧರಿಸಿದ್ದರು.
Chongqing’s cloud-seeding to end a heatwave led to the “9/2 underwear crisis” as a windstorm scattered laundry across the city. With gusts up to 76 mph, bras and pants flew through the streets. Officials say the storm was natural, not caused by cloud-seeding. #Chongqing pic.twitter.com/pmKrvWOZSj
— NTE (@NoToEvils) September 9, 2024
ಅದೇ ಸಮಯದಲ್ಲಿ ಉಂಟಾದ ಚಂಡ ಮಾರುತದ ಕಾರಣ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಜನರು ತಮ್ಮ ತಮ್ಮ ಮನೆಗಳ ಬಾಲ್ಕಣಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಗಳು ಹಾಗೂ ಭಾರೀ ಪ್ರಮಾಣದ ಒಳ ಉಡುಪುಗಳು ಹಾರಿ ಹೋಗಿವೆ. ಒಳ ಉಡುಪುಗಳ ಸಂಖ್ಯೆ ಎಷ್ಟಿತ್ತೆಂದರೆ ಆಕಾಶದಲ್ಲಿ ಬರಿ ಒಳ ಉಡುಪುಗಳೇ ಕಾಣುತ್ತಿದ್ದವು. ಇದರ ನಂತರ ಚೀನಾದ ಜನರು ಈ ಘಟನೆಯನ್ನು ʼ9/2 ಚಾಂಗ್ಕಿಂಗ್ ಅಂಡರ್‌ವೇರ್ ಕ್ರೈಸಿಸ್ʼ ಎಂದು ಹೆಸರಿಸಿದ್ದಾರೆ. ಘಟನೆಯ ನಂತರ ಈ ಚಂಡಮಾರುತವು ಮೋಡ ಬಿತ್ತನೆಯಿಂದಾಗಿ ಉಂಟಾಗಿಲ್ಲ, ಇದು ನೈಸರ್ಗಿಕರವಾಗಿಯೇ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ತೆ-ಮಾವ ಇರಬಾರ್ದು, ವರ್ಷಕ್ಕೆ 30 ಲಕ್ಷ ರೂ. ಸಂಬಳವಿರಬೇಕು ಇಂಥಾ ಪತಿಯೇ ಬೇಕು, ಚರ್ಚೆ ಹುಟ್ಟುಹಾಕಿದ ಪೋಸ್ಟ್
ಈ ಕುರಿತ ವಿಡಿಯೋವೊಂದನ್ನು NoToEvils ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಾಳಿಯ ರಭಸಕ್ಕೆ ಎಲ್ಲೆಂದರಲ್ಲಿ ಒಳ ಉಡುಪುಗಳು ಹಾರಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಇದೇನಪ್ಪಾ ವಿಚಿತ್ರ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ