Viral: ಮುಯ್ಯಿಗೆ ಮುಯ್ಯಿ: ತನಗೆ ಕಚ್ಚಿದ ಇಲಿಗೆ ಈ ಹುಡುಗಿ ಮಾಡಿದ್ದೇನು ನೋಡಿ?
ನಾವು ಭಯಾನಕ ಮತ್ತು ವಿಚಿತ್ರ ಸೇಡಿನ ಕಥೆಗಳನ್ನೆಲ್ಲಾ ನಿಜ ಜೀವನದಲ್ಲಿ ಅಥವಾ ಸಿನೆಮಾ ಕಥೆಗಳಲ್ಲಿ ನೋಡಿರುತ್ತೇವೆ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಸೇಡಿನ ಕಥೆಯೊಂದು ಬೆಳಕಿಗೆ ಬಂದಿದೆ. ಅದೇನಂದ್ರೆ ಚೀನಾದ 18 ವರ್ಷದ ಹುಡುಗಿಯೊಬ್ಬಳು ತನ್ನ ಬೆರಳಿಗೆ ಇಲಿ ಕಚ್ಚಿತೆಂದು ಸಿಟ್ಟಿನಿಂದ, ಆ ಇಲಿಯನ್ನೇ ಕಡಿದು ತನ್ನ ಸೇಡನ್ನು ತೀರಿಸಿಕೊಂಡಿದ್ದಾಳೆ.
ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಚಿತ್ರವಿಚಿತ್ರ ಸುದ್ದಿಗಳು ವೈರಲ್ ಆಗುತ್ತಿರುತ್ತವೆ. ಇಂತಹ ಘಟನೆಗಳು ಕೆಲವೊಮ್ಮೆ ತಮಾಷೆ ಮತ್ತು ಅಚ್ಚರಿಯನ್ನು ಮೂಡಿಸುತ್ತದೆ. ಈಗ ಇಂತಹದ್ದೊಂದು ಘಟನೆ ಚೀನಾದಲ್ಲಿಯೂ ನಡೆದಿದೆ. ಅದೇನಂದ್ರೆ, 18 ವರ್ಷದ ಹುಡುಗಿಯೊಬ್ಬಳು ತನ್ನ ಬೆರಳಿಗೆ ಇಲಿ ಕಚ್ಚಿತೆಂದು ಕೋಪಗೊಂಡು, ಆಕೆ ಆ ಇಲಿಗೆ ತಾನು ಕಡಿದು ಸೇಡನ್ನು ತೀರಿಸಿಕೊಂಡಿದ್ದಾಳೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಈ ಘಟನೆ ಡಿಸೆಂಬರ್ 21 ರಂದು ನಡೆದಿದ್ದು, ಕಾಲೇಜು ಹಾಸ್ಟೆಲ್ನಲ್ಲಿ ಇದ್ದಂತಹ ವಿದ್ಯಾರ್ಥಿನಿಯೊಬ್ಬಳ ಬೆರಳಿಗೆ ಇಲಿಯೊಂದು ಕಚ್ಚಿದೆ. ಇದರಿಂದ ಕೋಪಗೊಂಡ ಆಕೆ, ಇಲಿಯ ಮೇಲೆ ಹೇಗಾದ್ರೂ ಸೇಡು ತೀರಿಸಿಕೊಳ್ಳಬೇಕೆಂದು ಬಯಸುತ್ತಾಳೆ. ಅದಕ್ಕಾಗಿ ಆಕೆ ಇಲಿಯನ್ನು ಹಿಡಿಯಲು ಮೌಸ್ ಟ್ರ್ಯಾಪ್ ಬಳಸುವ ಬದಲು, ಸ್ವತಃ ತಾನೆ ಇಲಿಯನ್ನು ಕೈಯಾರೆ ಹಿಡಿದು, ನನ್ನ ಬೆರಳನ್ನು ಕಚ್ಚಲು ನಿನಗೆಷ್ಟು ಧೈರ್ಯ ಎನ್ನುತ್ತಾ, ಸಿಟ್ಟಿನಿಂದ ಜೋರಾಗಿ ಆ ಇಲಿಯ ತಲೆಗೆ ಕಡಿದಿದ್ದಾಳೆ. ಆಕೆ ಇಲಿಯ ತಲೆಯನ್ನು ಎಷ್ಟು ಜೋರಾಗಿ ಕಚ್ಚಿದ್ದಾಳೆ ಅಂದ್ರೆ, ಕಚ್ಚಿದ ಪರಿಣಾಮವಾಗಿ ಇಲಿಯ ತಲೆಯಲ್ಲಿ ಆಕೆಯ ಹಲ್ಲಿನ ಗುರುತುಗಳು ಕೂಡಾ ಮೂಡಿವೆ. ಅಷ್ಟೇ ಅಲ್ಲದೆ, ಆಕೆ ಇಲಿಯನ್ನು ಬಿಗಿಯಾಗಿ ಕೈಯಲ್ಲಿ ಹಿಡಿದಿದ್ದರಿಂದ ಆ ಇಲಿ ಉಸಿರುಗಟ್ಟಿ ಸತ್ತು ಹೋಗಿದೆ.
ಆಕೆ ಸಿಟ್ಟಿನಿಂದ ಜೋರಾಗಿ ಕಚ್ಚಿದ್ದರಿಂದ ಆಕೆಯ ತುಟಿಗಳಿಗೂ ಗಾಯವಾಗಿದ್ದು, ತಕ್ಷಣವೇ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಮತ್ತು ಈ ಘಟನೆಯಿಂದ ಆಕೆ ಮುಜುಗರಕ್ಕೊಳಗಾಗಿದ್ದಾಳೆ. ಅಲ್ಲದೆ ಆಕೆಯ ಈ ವಿಚಿತ್ರ ವರ್ತನೆಯಿಂದ ಆಕೆಯ ರೂಮ್ ಮೇಟ್ ಕೂಡಾ ಶಾಕ್ ಆಗಿದ್ದಾಳೆ.
ಇದನ್ನೂ ಓದಿ: ತನ್ನ ನೆರಳ ಕಂಡು ಹೆದರಿದ ಪುಟ್ಟ ಕಂದಮ್ಮನ ವಿಡಿಯೋ ಇಲ್ಲಿದೆ ನೋಡಿ
ಇದೀಗ ಆಕೆ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಈ ವಿಚಿತ್ರ ಘಟನೆ ವೈದ್ಯರನ್ನು ಸಹ ಬೆಚ್ಚಿ ಬೀಳಿಸಿದೆ. ಈ ಹುಡುಗಿಯ ಚಿಕಿತ್ಸೆ ಮತ್ತು ಕೇಸ್ ಫೈಲ್ ಅನ್ನು ಹೇಗೆ ದಾಖಲಿಸಬೇಕೆಂದು ಅರ್ಥವಾಗಲಿಲ್ಲ ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ. ಈ ವಿಚಿತ್ರ ಘಟನೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ