AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ವೈಫೈ ಸಮಸ್ಯೆಯಾಗಿದೆ ಎಂದು ಏರ್​​​​ಟೆಲ್​​​ ಎಂಜಿನಿಯರ್​​​ನ ಕಾಲ್ಬೆರಳು ಮುರಿದ ಐಎಎಸ್ ಅಧಿಕಾರಿ 

ಮನೆಯ ವೈಫೈ ಸಮಸ್ಯೆಯಿಂದ ಅಸಮಾದಾನಗೊಂಡ ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಮತ್ತು ಅವರ ಸಹೋದರ ಏರ್​​​​ಟೆಲ್​​​ ಕಂಪೆನಿಯ ಇಬ್ಬರು ಎಂಜಿನಿಯರ್​​ಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಪರಿಣಾಮವಾಗಿ ಅದರಲ್ಲಿ ಒಬ್ಬ  ಎಂಜಿನಿಯರ್​​ನ  ಕಾಲ್ಬೆರಳು ಮುರಿತಕ್ಕೊಳಗಾಗಿದೆ. ಈ ಘಟನೆಯು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮಿತ್ತಲ್ ಸಹೋದರರ  ವಿರುದ್ಧ ಎಫ್.ಐ.ಆರ್ ದಾಖಲಾದೆ ಎಂದು ವರದಿಗಳು ತಿಳಿಸಿವೆ.

ಮನೆಯಲ್ಲಿ ವೈಫೈ ಸಮಸ್ಯೆಯಾಗಿದೆ ಎಂದು ಏರ್​​​​ಟೆಲ್​​​ ಎಂಜಿನಿಯರ್​​​ನ ಕಾಲ್ಬೆರಳು ಮುರಿದ ಐಎಎಸ್ ಅಧಿಕಾರಿ 
ಮಾಲಾಶ್ರೀ ಅಂಚನ್​
| Edited By: |

Updated on: Jan 04, 2024 | 10:51 AM

Share

ಮನುಷ್ಯನಿಗೆ ಹಣ, ಆಸ್ತಿ, ಅಂತಸ್ತು, ಅಧಿಕಾರ ಈ ಎಲ್ಲಕ್ಕಿಂತ  ಮುಖ್ಯವಾಗಿ ಮಾನವೀಯ ಗುಣ ಇರಬೇಕು ಎಂದು ಹೇಳ್ತಾರೆ. ಆದರೆ ಇಂದು ಕೆಲವೊಬ್ಬರು ತಮ್ಮ ಹಣ, ಅಧಿಕಾರದ ಸೊಕ್ಕಿನಿಂದ ಸಾಮಾನ್ಯ ಜನರ ಮೇಲೆ ತಮ್ಮ ದರ್ಪ ತೋರಿಸುತ್ತಿದ್ದಾರೆ.  ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮನೆಯ ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಪರಿಹರಿಸಲು ಬಂದಂತಹ ಇಬ್ಬರು ಎಂಜಿನಿಯರ್ಗಳ ಮೇಲೆ ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಎಂಜಿನಿಯರ್ ಒಬ್ಬರ ಕಾಲ್ಬೆರಳು ಮುರಿತಕ್ಕೊಳಗಾಗಿದೆ.

ಈ ಘಟನೆ ಮುಂಬೈಯ ಘನ್ಸೋಲಿಯಲ್ಲಿರುವ ಅಮನ್ ಮಿತ್ತಲ್ ಅವರ ಮನೆಯಲ್ಲಿ ನಡೆದಿದ್ದು, ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಸರಿಪಡಿಸಲು ಬಂದ ಏರ್​​​​ಟೆಲ್​​​ ಎಂಜಿನಿಯರ್ಗಳಾದ ಭೂಷನ್ ಗುಜರ್ ಮತ್ತು ಸಾಗರ್ ಮಂಧಾರೆ ಅವರ ಮೇಲೆ  ಅಮನ್ ಮಿತ್ತಲ್ ಮತ್ತು ಅವರ ಸಹೋದರ ಹಲ್ಲೆ ನಡೆಸಿದ್ದಾರೆ.

ಡಿಸೆಂಬರ್ 30 ರಂದು ಈ ಘಟನೆ ನಡೆದಿದ್ದು, ಮನೆಯ ವೈಫೈ ಸರಿಪಡಿಸುವ ವೇಳೆಯಲ್ಲಿ ಎಂಜಿನಿಯರ್ಗಳು ಮತ್ತು ಮಿತ್ತಲ್ ಸಹೋದರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.   ಕೊನೆಯಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟು ಮಿತ್ತಲ್ ಸಹೋದದರು ರಾಡ್ ಮತ್ತು ಪೈಪ್ನಿಂದ ಎಂಜಿನಿಯರ್ಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಒಬ್ಬ ಎಂಜಿನಿಯರ್ ನ  ಕಾಲ್ಬೆರಳು ಮುರಿತಕ್ಕೊಳಗಾಗಿದೆ.

ಈ ಘಟನೆಯ ಬಳಿಕ 2015 ನೇ ಬ್ಯಾಚ್ನ ಐಎಎಸ್ ಅಧಿಕಾರಿ ಹಾಗೂ ಮಹರಾಷ್ಟ್ರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿಯಾಗಿರುವ  ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ವಿರುದ್ಧ  ಹಿಂಸಾಚಾರದ ಅರೋಪದ ಮೇಲೆ  ರಬಲೆ ಪೊಲೀಸ್ ಠಾಣೆಯಲ್ಲಿ  ಎಫ್.ಐ.ಆರ್ ದಾಖಲಿಸಲಾಗಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆದರೆ  ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಅಲ್ಲದೆ ಮಿತ್ತಲ್ ಸಹೋದರರು ಕೂಡಾ ಎಂಜಿನಿಯರ್ ಗಳ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದಾರೆ  ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಬಹುಶಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ನೋಡಿ…

ವಿಚಾರಣೆಗಾಗಿ ಅಮನ್ ಮಿತ್ತಲ್ ಮತ್ತು ದೇವೇಶ್ ಮಿತ್ತಲ್ ಅವರಿಗೆ ನೋಟಿಸ್ ನೀಡಿರುವುದಾಗಿ ರಬಲೆ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ರಾಜೇಂದ್ರ ಕೋಟೆ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ