AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಹುಶಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ನೋಡಿ…

ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಕುತೂಹಲಕಾರಿ, ಹಾಸ್ಯಮಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಸಂಪೂರ್ಣ ಮನೆಯನ್ನು ಕ್ರೇನ್ ಸಹಾಯದಿಂದ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತಿರುವ ಕುತೂಹಲಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಬಹುಶಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ.

Viral Video: ಬಹುಶಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ನೋಡಿ…
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jan 03, 2024 | 6:31 PM

Share

ಸಾಮಾನ್ಯವಾಗಿ ವಿದೇಶಗಳಲ್ಲೆಲ್ಲಾ, ಸಂಪೂರ್ಣ ಮನೆಯನ್ನು ಶಿಫ್ಟ್ ಮಾಡುವಂತಹದ್ದು, ಅಥವಾ ರಸ್ತೆ ಕಾಮಗಾರಿಯ ವೇಳೆಯಲ್ಲಿ  ಅಥವಾ ರಸ್ತೆ ಅಗಲೀಕರಣದ ವೇಳೆಯಲ್ಲಿ ರಸ್ತೆ ಬದಿಗಳಲ್ಲಿರುವ  ಮರಗಳನ್ನು ಕಡಿಯದೆ, ಅವುಗಳನ್ನು ಕ್ರೇನ್ ಸಹಾಯದಿಂದ ಬೇರೊಂದು ಕಡೆ ಸ್ಥಳಾಂತರಿಸುವ ಕುರಿತ ಸುದ್ದಿಗಳನ್ನು, ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಆದ್ರೆ ನಮ್ಮ ಭಾರತದಲ್ಲಿ ಈ ರೀತಿಯ ವಿಷಯಗಳು ನಡೆಯುವುದೇ ತೀರಾ ವಿರಳ. ಹೌದು ರಸ್ತೆ ಅಗಲೀಕರಣದ ಸಂದರ್ಭ ಸೇರಿದಂತೆ  ಇತ್ಯಾದಿ ಕಾರಣಗಳಿಂದಾಗಿ ಕೆಲವೊಬ್ರು ಸಂಪೂರ್ಣ ಮನೆಯನ್ನೇ ಕೆಡವಿಬಿಡುತ್ತಾರೆ.  ಆದ್ರೆ ಇಲ್ಲೊಂದು ಮನೆಯವರು ತಾವು ಪ್ರೀತಿಯಿಂದ ಕಟ್ಟಿಸಿದಂತಹ ಕನಸಿನ ಮನೆಯನ್ನು ಕೆಡವಲು ಮನಸ್ಸಾಗದೇ, ಆ ಮನೆಯನ್ನು ಕ್ರೇನ್ ಸಹಾಯದಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಈ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಮನೆ ಶಿಫ್ಟಿಂಗ್ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಹುಷಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಈ ವಿಡಿಯೋವನ್ನು @_alone_8743 ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಕ್ರೇನ್ ಸಹಾಯದಿಂದ ಸಂಪೂರ್ಣ ಮನೆಯನ್ನು ಸ್ಥಳಾಂತರಿಸುತ್ತಿರುವ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ, ನಗರವೊಂದರ  ರಸ್ತೆಯಲ್ಲಿ ಒಂದೆಡೆ ಸಂಚಾರ ದಟ್ಟಣೆ ಇದ್ರೆ, ರಸ್ತೆಯ ಇನ್ನೊಂದು ಬದಿಯಲ್ಲಿ ಕ್ರೇನ್ ಸಹಾಯದಿಂದ  ಸಂಪೂರ್ಣ ಮನೆಯೊಂದನ್ನು  ಸ್ಥಳಾಂತರಿಸುತ್ತಿರುವ  ದೃಶ್ಯವನ್ನು   ಕಾಣಬಹುದು.

ಇದನ್ನೂ ಓದಿ: ನಮ್ಮ ನಾಗರಿಕತೆ, ಸಂಸ್ಕೃತಿ ಮರಳಿದೆ, ಹೆದ್ದಾರಿಯಲ್ಲಿ ಎತ್ತಿನ ಗಾಡಿ ಓಡಿಸಿದ ರೈತ

ವೈರಲ್​​ ವಿಡಿಯೋ ಇಲ್ಲಿದೆ

ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಎರಡುವರೆ ಲಕ್ಷಕ್ಕಿಂತಲೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಸಹ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಮನೆ ಸಾಲವನ್ನು ಪಾವತಿಸದಿದ್ದರೆ, ಬ್ಯಾಂಕ್ ಅವರು ಇದೇ ರೀತಿ ಮನೆಯನ್ನು ಎತ್ತಿಕೊಂಡು ಹೋಗ್ತಾರೆʼ ಅಂತ ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಅಂಬುಜ ಸಿಮೆಂಟಿನ ಜಾಹಿರಾತುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ʼಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕುʼ ಅಂತ ತಮಾಷೆ ಕಮೆಂಟ್ಸ್ಗಳನ್ನು ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ