Dance: ಗೋಲಿಯೋಂಕೀ ರಾಸ್ಲೀಲಾ ರಾಮ್ಲೀಲಾ ( Goliyon Ki Raasleela Ram-Leela) ಸಿನೆಮಾದ ಅಂಗ್ ಲಗಾ ದೇ (Ang Laga De) ಹಾಡಿಗೆ ನರ್ತಕಿ, ಕೊರಿಯೋಗ್ರಾಫರ್ ಇಶಾ ಶರ್ಮಾ ಅತ್ಯಂತ ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. ನೆಟ್ಟಿಗರಂತೂ ಪದೇ ಪದೇ ಈ ವಿಡಿಯೋ ನೋಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಬೀಟ್ಸ್ ಓರಿಯಂಟೆಡ್ ಡ್ಯಾನ್ಸ್ ಮತ್ತು ಹಾಡುಗಳ ಭರಾಟೆಯ ಮಧ್ಯೆ ಇಂಥ ಸಲೀಲ ಹಾಡು, ನೃತ್ಯ ತಂಗಾಳಿಯಂತೆ ಸುಳಿಯುತ್ತವೆ. ಮನಸ್ಸನ್ನು ಅರಳಿಸಿ ಆಹ್ಲಾದವನ್ನುಂಟು ಮಾಡುತ್ತವೆ. ಇಂಥ ಲಾಸ್ಯಮಯ ಗುಂಗು ನಿಮಗೂ ಬೇಕೆಂದರೆ ಈ ಕೆಳಗಿನ ವಿಡಿಯೋ ನೋಡಿ.
ಮೂಲತಃ ಈ ಹಾಡನ್ನು ಅದಿತಿ ಪೌಲ್ ಮತ್ತು ಶೈಲ್ ಹಾಡಿದ್ದಾರೆ. ಈತನಕ 12 ಮಿನಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 9 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಈಕೆ ಅದ್ಭುತ ನೃತ್ಯಗಾರ್ತಿ, ಅದೆಷ್ಟು ಬಾರಿ ಈ ನೃತ್ಯ ನೋಡಿದ್ದೇನೋ ಲೆಕ್ಕವೇ ಇಲ್ಲ, ಈಗಲೂ ನಿಲ್ಲಿಸಲಾಗುತ್ತಿಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ : Viral Video: ಸೀರೆಯುಟ್ಟು ಹೈಹೀಲ್ಸ್ ಧರಿಸಿ ನೃತ್ಯ ಮಾಡಿದ ಮಹಿಳೆಯ ವಿಡಿಯೋ ವೈರಲ್
ಅಬ್ಬಾ ನೀರಿನಂತೆ ನೀವು ಅದೆಷ್ಟು ಸರಾಗವಾಗಿ ಹರಿಯುತ್ತಿದ್ದೀರಿ. ಈಕೆಯ ನೃತ್ಯವನ್ನು ನೋಡಿದ ಮೇಲೆ ನಾನು ಕಲಿತ ನೃತ್ಯವೆಲ್ಲಾ ಮರೆತುಹೋಯಿತು, ಆಹಾ ಎಂಥ ಛಂದ. ನಾನಂತೂ 50 ಸಲಕ್ಕಿಂತಲೂ ಹೆಚ್ಚು ನೋಡಿದೆ ನೀವು? ಹಿಂದೆ ಕಪ್ಪು ಶರ್ಟ್ ಧರಿಸಿ ನರ್ತಿಸುತ್ತಿರುವವನ ಕಡೆಗೂ ಸ್ವಲ್ಪ ಗಮನ ಕೊಡಿ… ಅಂತೆಲ್ಲ ಜನ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ