ಪ್ರಪಂಚದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ, ಜನರು ಚರ್ಚ್‌ನಲ್ಲಿ ಒಟ್ಟುಗೂಡಿ, ಪ್ರಾರ್ಥನೆಗಳನ್ನು ಹಾಡುವ ಮೂಲಕ ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುತ್ತಾರೆ. ಅಲ್ಲದೆ, ಈ ದಿನದಂದು, ಮನೆಗಳಲ್ಲಿರುವ ಕ್ರಿಸ್‌ಮಸ್ ಟ್ರೀಯನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ನೀವು ಸಾಕಷ್ಟು ಬಗೆ ಬಗೆಯ ಕ್ರಿಸ್ಮಸ್ ಟ್ರೀ ಗಳನ್ನು ನೋಡಿರುತ್ತೀರಿ. ಈ ಮರವನ್ನು ಚಾಕ್ಲೆಟ್ಸ್, ಚಿಕ್ಕ ಚಿಕ್ಕ ಗಿಫ್ಟ್ಸ್, ಹೊಳೆಯುತ್ತಿರುವ ನಕ್ಷತ್ರಗಳು ಹಾಗೂ ಬಣ್ಣ ಬಣ್ಣದ ದೀಪಗಳ ಮೂಲಕ ಅಲಂಕರಿಸಲಾಗುತ್ತೆ. ಆದರೆ ಇದೀಗ ವಿಭಿನ್ನವಾದ ಮುದ್ದಾದ ಕ್ರಿಸ್ಮಸ್ ಟ್ರೀಗಳ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಶ್ವಾನ ಪ್ರಿಯರಿಗೆ ಈ ಕ್ರಿಸ್ಮಸ್ ಟ್ರೀ ಇಷ್ಟವಾಗುವುದಂತೂ ಖಂಡಿತಾ. ಮುದ್ದಾದ ಶ್ವಾನಗಳನ್ನು ಕ್ರಿಸ್ಮಸ್ ಟ್ರೀಯಂತೆ ಅಲಂಕರಿಸಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. pachacriollita ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈಗಾಗಲೇ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ಓದಿ:ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್ನ ಸ್ವಾಗತಿಸಿದ ಉದ್ಯೋಗಿಗಳು; ವಿಲಕ್ಷಣ ವಿಡಿಯೋ ವೈರಲ್
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಜನರು ವಿಡಿಯೋ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು “ನಾಯಿಗಳು ಆಟಿಕೆಗಳಲ್ಲ,ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆಯಲು ಪ್ರಾಣಿಗಳನ್ನು ಈ ರೀತಿ ಬಳಸಬೇಡಿ” ಎಂದು ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Sat, 21 December 24