Video: 50 ವರ್ಷಗಳ ಬಳಿಕ ಸ್ನೇಹಿತರ ಪುನರ್ಮಿಲನ; ಯೂನಿಫಾರ್ಮ್ ತೊಟ್ಟು ಮಕ್ಕಳಂತೆ ಸ್ಕೂಲ್‌ಗೆ ಬಂದ ಆಪ್ತ ಸ್ನೇಹಿತರು

ಶಾಲಾ ದಿನಗಳನ್ನು ಮತ್ತೆ ರೀ ಕ್ರಿಯೇಟ್ ಮಾಡಿದ್ರೆ ಹೇಗಿರುತ್ತೆ ಎಂದು ಒಮ್ಮೆ ಯೋಚಿಸಿ. ಇದೀಗ ವಿದ್ಯಾರ್ಥಿಗಳಂತೆ ಸಮವಸ್ತ್ರ ಧರಿಸಿ 50 ವರ್ಷಗಳ ನಂತರ ಶಾಲೆಗೆ ಮರಳಿದ ಗೆಳೆಯರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ಮೆಲುಕು ಹಾಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: 50 ವರ್ಷಗಳ ಬಳಿಕ ಸ್ನೇಹಿತರ ಪುನರ್ಮಿಲನ; ಯೂನಿಫಾರ್ಮ್ ತೊಟ್ಟು ಮಕ್ಕಳಂತೆ ಸ್ಕೂಲ್‌ಗೆ ಬಂದ ಆಪ್ತ ಸ್ನೇಹಿತರು
ವೈರಲ್‌ ವಿಡಿಯೋ
Image Credit source: Instagram

Updated on: Sep 22, 2026 | 5:06 PM

ಶಾಲಾ ದಿನಗಳೇ (school days) ಚಂದ, ಮತ್ತೆ ಮತ್ತೆ ಮರಳಿ ಬರಬಾರದೆ ಆ ದಿನಗಳು ಎಂದೆನಿಸುವುದು ಸಹಜ. ಮಕ್ಕಳು ಸ್ಕೂಲ್ ಲೈಫ್ ಎಂಜಾಯ್ ಮಾಡುವುದನ್ನು ನೋಡುತ್ತಾ ನಾವು ನಮ್ಮ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ಇದೀಗ 50 ವರ್ಷಗಳ ಬಳಿಕ ಶಾಲಾ ಬ್ಯಾಚ್‌ನ ಆಪ್ತ ಗೆಳೆಯರು ಭೇಟಿಯಾಗಿದ್ದಾರೆ. ಸ್ಕೂಲ್ ಯೂನಿಫಾರ್ಮ್ ತೊಟ್ಟು ಶಾಲೆಗೆ ಬಂದ ಈ ಗೆಳೆಯರ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

52 ವರ್ಷಗಳ ಬಳಿಕ ಸ್ನೇಹಿತರ ಪುನರ್ಮಿಲನ

1976ರ ಬ್ಯಾಚ್‌ನ ನನ್ನ ಬಾಲ್ಯದ ಸ್ನೇಹಿತರು ಎಂಬ ಶೀರ್ಷಿಕೆಯೊಂದಿಗೆ ರಾಕೇಶ್ ನಗರ್ (Rakesh Nagar) ಎಂಬುವವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 50 ವರ್ಷಗಳ ಬಳಿಕ ತಮ್ಮ ಬಾಲ್ಯದ ಸ್ನೇಹಿತರ ಪುನರ್ಮಿಲನದ ದೃಶ್ಯವನ್ನು ಕಾಣಬಹುದು. ಹೌದು, ಶಾಲಾ ಮಕ್ಕಳಂತೆ ಸಮವಸ್ತ್ರ ಧರಿಸಿ, ಬೆನ್ನಿಗೊಂದು ಬ್ಯಾಗ್ ನೀರಿನ ಬಾಟಲಿಗಳನ್ನು ಹಿಡಿದುಕೊಂಡು ಬಂದು ತಮ್ಮ ಸ್ಕೂಲ್ ಡೇಸ್ ರೀ-ಕ್ರಿಯೇಟ್ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: 2000ರಲ್ಲಿ ಇನ್ಫೋಸಿಸ್ ಉದ್ಯೋಗಿಗಳ ಜೀವನ ಹೇಗಿತ್ತು ನೋಡಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ನೆಟ್ಟಿಗರನ್ನು ಭಾವುಕಗೊಳಿಸಿದೆ. ಒಬ್ಬ ಬಳಕೆದಾರ, ನನ್ನ ಬಾಲ್ಯದ ದಿನಗಳು ನೆನಪಿಗೆ ಬಂತು ಎಂದಿದ್ದಾರೆ. ಇನ್ನೊಬ್ಬರು, ಆ ಕ್ಷಣಗಳು ಮತ್ತೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮತ್ತೆ ಮಕ್ಕಳಾಗುವುದು ನಿಜಕ್ಕೂ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us