Viral: ಗುದದ್ವಾರದೊಳಗೆ ಮರಗೆಣಸು ತುರುಕಿದ 72 ಹರೆಯದ ಮುದುಕ; ಎಕ್ಸ್‌-ರೇ ರಿಪೋರ್ಟ್‌ ಕಂಡು ಶಾಕ್‌ ಆದ ವೈದ್ಯರು

ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ವಿಚಿತ್ರ ವಿಚಿತ್ರ ಪ್ರಕರಣಗಳನ್ನು ನೋಡುತ್ತಿರುತ್ತಾರೆ. ಇದೀಗ ಅಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಂಗಾತಿಯೊಂದಿಗೆ ಖಾಸಗಿ ಸಮಯವನ್ನು ಕಳೆಯುತ್ತಿದ್ದ ವೇಳೆ 72 ರ ಹರೆಯದ ಮುದುಕನೊಬ್ಬ ತನ್ನ ಗುದದ್ವಾರಕ್ಕೆ ಮರಗೆಣಸನ್ನು ತುರುಕಿ ಪಜೀತಿಗೆ ಸಿಲುಕಿದ್ದಾನೆ. ಎಕ್ಸ್‌-ರೇ ರಿಪೋರ್ಟ್‌ ಕಂಡು ವೈದ್ಯರು ಶಾಕ್‌ ಆಗಿದ್ದು, ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಖಾಸಗಿ ಅಂಗದೊಳಗೆ ಸಿಕ್ಕಿ ಹಾಕಿಕೊಂಡಿದ್ದ ಮರಗೆಣಸನ್ನು ಹೊರತೆಗೆದಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಗುದದ್ವಾರದೊಳಗೆ ಮರಗೆಣಸು ತುರುಕಿದ 72 ಹರೆಯದ ಮುದುಕ; ಎಕ್ಸ್‌-ರೇ ರಿಪೋರ್ಟ್‌ ಕಂಡು ಶಾಕ್‌ ಆದ ವೈದ್ಯರು
ವೈರಲ್
Edited By:

Updated on: Apr 21, 2025 | 2:26 PM

ಕೊಲಂಬಿಯಾ, ಏ. 21: ಅನೇಕ ಜನರು ಲೈಂಗಿಕ ತೃಪ್ತಿಯನ್ನು (sensual gratification) ಹೊದಲು ವಿಚಿತ್ರ ಹಾದಿಯನ್ನು ಹಿಡಿಯುತ್ತಾರೆ.  ಹೀಗೆ ಲೈಂಗಿಕ ತೃಪ್ತಿಗಾಗಿ ಬ್ಯಾಟರಿ, ಬಾಟಲಿಯಂತಹ ವಸ್ತುಗಳನ್ನು ಖಾಸಗಿ ಭಾಗದೊಳಗೆ (private part) ತುರುಕಿ ಫಜೀತಿಗೆ ಸಿಕ್ಕಿಹಾಕಿಕೊಂಡವರ ಒಂದಷ್ಟು ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, 72 ರ ಹರೆಯದ ಮುದುಕನೊಬ್ಬ ಲೈಂಗಿಕ ತೃಪ್ತಿಗಾಗಿ ಮರಗೆಣಸನ್ನು (cassava) ತನ್ನ ಖಾಸಗಿ ಅಂಗದೊಳಗೆ ತುರುಕಿದ್ದಾನೆ. ಕೊಲಂಬಿಯಾದ (Colombia) ಈ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಖಾಸಗಿ ಸಮಯವನ್ನು ಕಳೆಯುತ್ತಿದ್ದ ವೇಳೆ ತನ್ನ ಗುದದ್ವಾರದೊಳಗೆ ಮರಗೆಣಸನ್ನು ತುರುಕಿ ಪೇಚಿಗೆ ಸಿಲುಕಿದ್ದು, ನಂತರ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಖಾಸಗಿ ಅಂಗದೊಳಗೆ ಸಿಕ್ಕಿ ಹಾಕಿಕೊಂಡಿದ್ದ ಮರಗೆಣಸನ್ನು ಹೊರತೆಗೆದಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಈ ಘಟನೆ ನಡೆದಿದ್ದು, 72 ರ ಹರೆಯದ ಮುದುಕನೊಬ್ಬ ತನ್ನ ಸಂಗಾತಿಯೊಂದಿಗೆ ಖಾಸಗಿ ಸಮಯವನ್ನು ಕಳೆಯುತ್ತಿದ್ದ ವೇಳೆ ತನ್ನ ಗುದದ್ವಾರದೊಳಗೆ ಮೆರಗೆಣಸು ತುರುಕಿ ಪಜೀತಿಗೆ ಸಿಳುಗಿದ್ದಾನೆ. ಖಾಸಗಿ ಅಂಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಬಳಿಕ ಮುದುಕ ಕೊಲಂಬಿಯಾದ ತುಲುವಾದಲ್ಲಿರುವ ತೋಮಸ್ ಉರಿಬ್‌ ಯುರಿಬ್‌ ಆಸ್ಪತ್ರೆಗೆ ದಾಖಲಾಗಿದ್ದು, ಈ ವ್ಯಕ್ತಿಯ ಎಕ್ಸ್‌-ರೇ ರಿಪೋರ್ಟ್‌ ನೋಡಿ ವೈದ್ಯರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಮದರಂಗಿ ಹಾಕಿಸಿಕೊಂಡು ಬರುವೆ ಎಂದು ಹೇಳಿ ಪಾರ್ಲರ್ ಗೆ ಹೋದ ವಧು ನಾಪತ್ತೆ!

ಇದನ್ನೂ ಓದಿ
ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ ಗೆಳೆಯರ ಬಳಗ
ಮೆಹಂದಿ ಹಾಕಿಸಿಕೊಂಡು ಬರುತ್ತೇನೆಂದವಳು ಎಸ್ಕೇಪ್, ನಿಂತೇ ಹೋಯ್ತು ಮದುವೆ
ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಜ್ಞೆ ತಪ್ಪಿ ಬಿದ್ದ ಬಾಲಕ, ಮುಂದೇನಾಯಿತು?
ಶಾಲಾ ಕಾರ್ಯಕ್ರಮದಲ್ಲಿ ಪುಟಾಣಿ ಬಾಲಕನ ಎನರ್ಜಿಟಿಕ್ ಡಾನ್ಸ್, ವಿಡಿಯೋ ವೈರಲ್

ಎಕ್ಸ್‌-ರೇ ರಿಪೋರ್ಟ್‌ನಲ್ಲಿ ಗುದದ್ವಾರದೊಳಗೆ ಮರಗೆಣಸು ಸಿಕ್ಕಿಹಾಕಿಕೊಂಡಿರುವುದು ಪತ್ತೆಯಾಗಿದ್ದು, ನಂತರ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಆ ವ್ಯಕ್ತಿಯ ಖಾಸಗಿ ಅಂಗದೊಳಗೆ ಸಿಕ್ಕಿ ಹಾಕಿಕೊಂಡಿದ್ದ ಮರಗೆಣಸನ್ನು ತೆಗೆದಿದ್ದಾರೆ.  ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಆ ವ್ಯಕ್ತಿ ಯಾವುದೇ ತೊಂದರೆಗಳಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ.

ಇಂತಹ ಸಾಕಷ್ಟು ಸಂದರ್ಭಗಳನ್ನು ಈ ಹಿಂದೆಯೂ ಎದುರಿಸಿದ್ದೆವು. ಈ ಹಿಂದೆ ಕೆಲವರ ಖಾಸಗಿ ಅಂಗದೊಳಗೆ ಸಿಕ್ಕಿ ಹಾಕಿಕೊಂಡ ಬಾಟಲಿಗಳು, ಬ್ಯಾಟರಿ, ಬಾಳೆಹಣ್ಣಿನಂತಹ ವಸ್ತುಗಳನ್ನು ಹೊರ ತೆಗೆದಿದ್ದೇವೆ. ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಸ್ಥಳೀಯ ಪತ್ರಿಕೆಗೆ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಲ್ಲರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ