Personality Test : ನೀವು ಕೈಕಟ್ಟಿಕೊಳ್ಳುವ ರೀತಿ ಮತ್ತು ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳು

| Updated By: ಶ್ರೀದೇವಿ ಕಳಸದ

Updated on: Oct 06, 2022 | 2:41 PM

Crossing Arms Personality Test : ಯಾರೊಂದಿಗಾದರೂ ಸಂಭಾಷಿಸುತ್ತಿರುವಾಗ ನೀವು ಎದೆಯ ಮೇಲೆ ಕೈಕಟ್ಟಿಕೊಳ್ಳುತ್ತೀರಾ? ಬೆನ್ನ ಹಿಂದೆ ಕೈಕಟ್ಟಕೊಳ್ಳುತ್ತೀರಾ? ಇದು ಏನನ್ನು ಸೂಚಿಸುತ್ತದೆ? ತಿಳಿದುಕೊಳ್ಳಿ.

Personality Test : ನೀವು ಕೈಕಟ್ಟಿಕೊಳ್ಳುವ ರೀತಿ ಮತ್ತು ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳು
ಸೌಜನ್ಯ : ಅಂತರ್ಜಾಲ
Follow us on

Crossing Arms and Personality Test : ನಾವು ನಿಲ್ಲುವ, ಕುಳಿತುಕೊಳ್ಳುವ, ನಡೆಯುವ, ಮಾತನಾಡುವ, ತಿನ್ನುವ ಹೀಗೆ ಒಂದೊಂದು ವಿಧದ ಮೂಲಕವೂ ನಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ. ತೋಳುಗಳನ್ನು ಬೆನ್ನು ಹಿಂದೆ ಕಟ್ಟುವುದು, ಮುಂದೆ ಕಟ್ಟುವುದು ಹೀಗೆ ಒಂದೊಂದಕ್ಕೂ ಒಂದು ಅರ್ಥವಿದೆ. ಕೆಲ ಭಂಗಿಗಳು ಆತ್ಮವಿಶ್ವಾಸವನ್ನು ಸಾಂಕೇತಿಸುತ್ತವೆ. ಇನ್ನೂ ಕೆಲವು ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದನ್ನು ಸೂಚಿಸುತ್ತವೆ. ಹೀಗೆ ಒಂದೊಂದು ಭಂಗಿಯಿಂದಲೂ ಒಂದೊಂದು ಲಕ್ಷಣಗಳು ಇವೆ. ಬನ್ನಿ ಈ ಕುರಿತು ತಿಳಿದುಕೊಳ್ಳೋಣ.

1. ಎದೆಯ ಮೇಲೆ ಒಂದು ಕೈಕಟ್ಟುವುದು : ಎದೆಯ ಮೇಲೆ ಒಂದು ಕೈಕಟ್ಟಿಕೊಂಡರೆ ಅವರೊಳಗಿನ ದುಃಖ ಮತ್ತು ಉದ್ವಿಗ್ನತೆಯನ್ನು ತೋರುತ್ತದೆ. ತಮ್ಮನ್ನು ತಾವು ಸಂತೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ವಿಶೇಷವಾಗಿ ಜನರಿಂದ ಸುತ್ತುವರಿದ ಸ್ಥಳಗಳಲ್ಲಿ ಅಸುರಕ್ಷಿತತೆ ಉಂಟಾದಾಗ ಅದನ್ನು ಮರೆಮಾಚಲು ಹೀಗೆ ನಿಲ್ಲುತ್ತಾರೆ. ಯಾರೊಂದಿಗಾದರೂ ಸಂಭಾಷಣೆಯಲ್ಲಿ ತೊಡಗಿದಾಗ ಒಂದು ತೋಳನ್ನು ಮುಂಭಾಗದಲ್ಲಿ ಕಟ್ಟಿಕೊಂಡರೆ ಎದುರಿನ ವ್ಯಕ್ತಿಯ ಯಾವುದೋ ಮಾತಿನಿಂದ ಆತಂಕ ಉಂಟಾಗುತ್ತಿದೆ ಎಂದರ್ಥ. ಅಭದ್ರತೆ, ಅನುಮಾನ, ಆತಂಕ, ಒತ್ತಡ ಮತ್ತು ಸಂಕೋಚ ಇದರ ಮೂಲವಾಗಿರಬಹುದು. ಅಂತರ್ಮುಖಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಕೈಕಟ್ಟಿಕೊಂಡು ನಿಲ್ಲುವುದು ಹೆಚ್ಚು. ಹೀಗೆ ಕೈಕಟ್ಟಿಕೊಂಡಾಗ ಅವರಿಗೆ ಆತ್ಮವಿಶ್ವಾಸದಿಂದ ವರ್ತಿಸಲು ಸಹಾಯವಾಗುತ್ತದೆ .

2 . ಎರಡೂ ಕೈಗಳನ್ನು ಮುಂಭಾಗದಲ್ಲಿ ಕಟ್ಟುವುದು : ಸಾರ್ವಜನಿಕ ವಲಯಗಳಲ್ಲಿರುವಾಗ ಯಾರಾದರೂ ತಮ್ಮ ಎರಡೂ ಕೈಗಳನ್ನು ಎದೆಯ ಮೇಲೋ ಅಥವಾ ಹೊಟ್ಟೆಯ ಮೇಲೋ ಕಟ್ಟಿಕೊಂಡರೆ ಅದು ಅವರೊಳಗಿನ ದೌರ್ಬಲ್ಯವನ್ನು ತೋರಿಸುತ್ತದೆ. ಆದರೆ ಅದನ್ನು ತೋರಗೊಡದೆ ಆತ್ಮವಿಶ್ವಾಸದಿಂದ ಇರಬೇಕೆಂದು ಹೆಚ್ಚಿನ ಪುರುಷರು ತಮ್ಮ ಎರಡೂ ಕೈಗಳನ್ನು ಮುಂಭಾಗದಲ್ಲಿ ಕಟ್ಟಿಕೊಳ್ಳುತ್ತಾರೆ. ಆದರೆ ಬಾಡಿ ಲ್ಯಾಂಗ್ವೇಜ್​ ಪ್ರಕಾರ ಇದು ಆತ್ಮವಿಶ್ವಾಸವನ್ನು ಸಾಂಕೇತಿಸುವುದಿಲ್ಲ. ಅಸುರಕ್ಷಿತ ಭಾವ ಹೊಂದಿರುವವರು ಈ ರೀತಿ ಕೈ ಕಟ್ಟಿಕೊಳ್ಳುತ್ತಾರೆ. ಇದು ಸ್ವಯಂ ಸಂಯಮತೆಯನ್ನು ತೋರುತ್ತದೆ. ಸಭೆ, ಸಮಾರಂಭಗಳಲ್ಲಿ ಉಂಟಾಗುವ ಉದ್ವಿಗ್ನ ಭಾವವನ್ನು ಇದು ಸಾಂಕೇತಿಸುತ್ತದೆ. ಆತ್ಮವಿಶ್ವಾಸದಿಂದ ಇರಬೇಕೆಂದರೆ ಈ ರೀತಿ ಕೈಕಟ್ಟಿಕೊಳ್ಳುವುದನ್ನು ತಪ್ಪಿಸಬೇಕು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

3. ಬೆನ್ನಿನ ಹಿಂದೆ ಎರಡೂ ಕೈಗಳನ್ನು ಕೈಕಟ್ಟಿಕೊಳ್ಳವುದು : ಹೀಗೆ ಕೈಕಟ್ಟಿಕೊಂಡು ಸಂಭಾಷಣೆಯಲ್ಲಿ ತೊಡಗಿರುವವರು ಎದುರಿನ ವ್ಯಕ್ತಿಗೆ ಏನು ಹೇಳಬೇಕು ಹೇಳಬಾರದು ಎಂಬುದರ ಬಗ್ಗೆ ಕಾಳಜಿ ವಹಿಸಲಾರರು. ತಮ್ಮೊಳಗೆ ಇಲ್ಲದ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಲು ಅವರು ಹೀಗೆ ಕೈಕಟ್ಟಿಕೊಳ್ಳುತ್ತಾರೆ. ಎದುರಿನ ವ್ಯಕ್ತಿಯಿಂದ ಗೌರವವನ್ನು ನಿರೀಕ್ಷಿಸುತ್ತಾರೆ. ತಾನೇ ಶ್ರೇಷ್ಠ, ತಾನೇ ಬಲವುಳ್ಳವ ಎಂಬ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಜನಪ್ರತಿನಿಧಿಗಳು, ಪೊಲೀಸರು, ಅಧಿಕಾರಿಗಳು, ಶಿಕ್ಷಕರು ಹೀಗೆ ಬೆನ್ನಿನ ಹಿಂದೆ ಕೈಗಳನ್ನು ಕಟ್ಟಿಕೊಳ್ಳುವುದು ಸಾಮಾನ್ಯ.

4. ಬೆನ್ನಿನ ಹಿಂದೆ ಒಂದೇ ತೋಳನ್ನು ಕಟ್ಟಿಕೊಳ್ಳುವುದು : ತಮ್ಮ ಬೆನ್ನಿನ ಹಿಂದೆ ಒಂದೇ ತೋಳನ್ನು ಕಟ್ಟಿಕೊಂಡರೆ, ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎಂದರ್ಥ. ವಿಧೇಯತೆ ಮತ್ತು ಅಧಿಕಾರರಹಿತ ನಡೆಯನ್ನು ಅವರು ಪ್ರದರ್ಶಿಸುತ್ತಿದ್ದಾರೆ ಎಂದರ್ಥ. ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೂಬಹುದು. ಒಂದು ತೋಳಿನ ಮೇಲೆ ಬಿಗಿಯಾದ ಹಿಡಿತವು, ಆ ವ್ಯಕ್ತಿಯು ಹೆಚ್ಚು ಪ್ರಕ್ಷುಬ್ಧ ಮತ್ತು ಹತಾಶೆ, ಒತ್ತಡಕ್ಕೆ ಒಳಗಾಗುತ್ತಿರುವುದನ್ನು ಸೂಚಿಸುತ್ತದೆ. ಈ ಬಾಡಿ ಲ್ಯಾಂಗ್ವೇಜ್​ ಮೂಲಕ ಸುರಕ್ಷಿತ, ಆರಾಮಯದಾಯಕವಾಗಿರಲು ಅವರು ಪ್ರಯತ್ನಿಸುತ್ತಿರುತ್ತಾರೆ. ಅಧಿಕಾರಯುತವಾಗಿರುವ ವ್ಯಕ್ತಿಗಳು ಇಂಥವರ ಸುತ್ತಮುತ್ತಲೂ ಇದ್ದಾಗ ಈ ವ್ಯಕ್ತಿಗಳು ಇಂಥ ಭಂಗಿಯಲ್ಲಿ ನಿಲ್ಲುತ್ತಾರೆ. ಸಾಮಾನ್ಯವಾಗಿ ಹದಿಹರೆಯದವರು, ತಮ್ಮ ಉತ್ತರಗಳಲ್ಲಿ ಅನಿಶ್ಚಿತತೆ ಹೊಂದಿರುವವರು, ಭಯಭೀತರಾಗಿರುವ ಮಕ್ಕಳು ಈ ಭಂಗಿಯಲ್ಲಿ ನಿಲ್ಲುತ್ತಾರೆ. ಈ ಹಿಂಜರಿಕೆಯಿಂದ ಹೊರಬರಲು ಹೀಗೆ ನಿಲ್ಲುತ್ತಾರೆ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:52 am, Thu, 6 October 22