ವಧು ಮದುವೆಗೂ ಮುನ್ನ 30 ದಿನಗಳವರೆಗೆ ಒಂದು ಗಂಟೆ ಅಳಬೇಕು, ಇದು ಇಲ್ಲಿನ ವಿಚಿತ್ರ ಪದ್ಧತಿ
ಚೀನಾದ ತುಜಿಯಾ ಸಮುದಾಯದಲ್ಲಿ, ಮದುವೆಗೆ ಮುನ್ನ ವಧು ಒಂದು ತಿಂಗಳು ಪ್ರತಿದಿನ ಒಂದು ಗಂಟೆ ಅಳುವ ವಿಶಿಷ್ಟ ಸಂಪ್ರದಾಯವಿದೆ. ಇದನ್ನು "ಕ್ರೈಯಿಂಗ್ ವೆಡ್ಡಿಂಗ್ ಕಸ್ಟಮ್" ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯವನ್ನು ಏಕೆ ಆಚರಿಸುತ್ತಾರೆ, ಇದರ ಹಿಂದಿನ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪ್ರಪಂಚದ ವಿವಿಧ ಭಾಗಗಳಲ್ಲಿ ಮದುವೆಗೆ ಸಂಬಂಧಿಸಿದ ವಿವಿಧ ಸಂಪ್ರದಾಯಗಳಿವೆ . ಕೆಲವು ಪದ್ಧತಿಗಳು ಮತ್ತು ಸಂಪ್ರದಾಯಗಳು ತುಂಬಾ ವಿಚಿತ್ರವಾಗಿದ್ದು ಅವುಗಳ ಬಗ್ಗೆ ಕೇಳಿದಾಗ ಒಂದು ಶಾಕ್ ಆಗುವುದಂತೂ ಖಂಡಿತಾ. ಚೀನಾದ ತುಜಿಯಾ ಸಮುದಾಯದಲ್ಲಿ ಮದುವೆಗೂ ಮುನ್ನ ಇದೇ ರೀತಿಯ ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ, ಇದನ್ನು “ಕ್ರೈಯಿಂಗ್ ವೆಡ್ಡಿಂಗ್ ಕಸ್ಟಮ್” ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯದಲ್ಲಿ, ಮದುವೆಯ ಮೊದಲು 30 ದಿನಗಳವರೆಗೆ ಪ್ರತಿದಿನ ಒಂದು ಗಂಟೆ ವಧು ಅಳುತ್ತಲೇ ಇರಬೇಕಯ. ಈ ಸಂಪ್ರದಾಯವು ತುಜಿಯಾ ಸಮಾಜದ ಸಂಸ್ಕೃತಿಯ ವಿಶೇಷ ಭಾಗವಾಗಿದೆ.
ವಧು ಒಂದು ತಿಂಗಳ ಕಾಲ ಏಕೆ ಅಳಬೇಕು ?
ತುಜಿಯಾ ಸಮುದಾಯವು ಚೀನಾದ ನೈಋತ್ಯ ಪ್ರದೇಶಗಳಲ್ಲಿ ಹುಬೈ , ಹುನಾನ್ ಮತ್ತು ಗೈಝೌ ಪ್ರಾಂತ್ಯಗಳನ್ನು ಒಳಗೊಂಡಿದೆ . ಸಮುದಾಯವು ವಿಶಿಷ್ಟವಾದ ಮದುವೆಯ ಶೈಲಿಗಳನ್ನು ಒಳಗೊಂಡಂತೆ ಅದರ ವಿಭಿನ್ನ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಹೆಸರುವಾಸಿಯಾಗಿದೆ . ತುಜಿಯಾ ಜನರು ತಮ್ಮ ಸಾಂಸ್ಕೃತಿಕ ಗುರುತಿನ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ ಮತ್ತು ಪ್ರತಿ ಕಾರ್ಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುತ್ತಾರೆ. ಅವರ ವಿವಾಹಗಳು ಇತರ ಸಮುದಾಯಗಳಿಗಿಂತ ಭಿನ್ನವಾಗಿವೆ . ಇವುಗಳಲ್ಲಿ ಅತ್ಯಂತ ಆಸಕ್ತಿದಾಯಕ ಸಂಪ್ರದಾಯವೆಂದರೆ ” ಅಳುವುದು ಸಂಪ್ರದಾಯ “, ಇದು ವಧು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ತಯಾರಾಗಲು ಒಂದು ಮಾರ್ಗವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಗ್ರಾಮಸ್ಥರ ಮುಂದೆಯೇ ಮಹಿಳಾ ಪೊಲೀಸ್ ಅಧಿಕಾರಿಗೆ ಕೆನ್ನೆಗೆ ಬಾರಿಸಿದ ಯುವಕ
ಈ ಸಂಪ್ರದಾಯವು ಸಾಮಾನ್ಯವಾಗಿ ಮದುವೆಗೆ 30 ದಿನಗಳ ಮೊದಲು ಪ್ರಾರಂಭವಾಗುತ್ತದೆ . ವಧುವಿನ ಕುಟುಂಬದಲ್ಲಿ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ . ಈ ಸಮಯದಲ್ಲಿ ಪ್ರತಿದಿನ ವಧು ಒಂದು ಗಂಟೆ ಅಳಬೇಕು. ಆದಾಗ್ಯೂ, ಮೊದಲ ದಿನ, ವಧು ಒಬ್ಬಂಟಿಯಾಗಿ ಅಳುವುದಿಲ್ಲ, ಆದರೆ ಅವಳ ತಾಯಿ ಮತ್ತು ಅಜ್ಜಿ ಕೂಡ ಅವಳೊಂದಿಗೆ ಅಳಬೇಕು. ಈ ಸಮಯದಲ್ಲಿ, ವಧು ತನ್ನ ತಾಯಿಯೊಂದಿಗೆ ತನ್ನ ತವರು ಮನೆ ಮತ್ತು ಕುಟುಂಬವನ್ನು ತೊರೆಯುವ ಕಷ್ಟವನ್ನು ನೆನೆಯುತ್ತಾ ಅಳುತ್ತಾಳೆ. ದಿನಗಳು ಕಳೆದಂತೆ, ವಧುವಿನ ಅಳುವ ಮಾದರಿಯು ಬದಲಾಗುತ್ತದೆ. ಆಕೆ ಮದುವೆ ಆಗಿ ತವರು ಮನೆ ತೊರೆಯುವಾಗ ನೋವಾಗ ಬಾರದೆಂದು ಈ ರೀತಿ ಮಾಡಲಾಗುತ್ತದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ