Viral Video: ತಿನ್ನುವ ತಟ್ಟೆಯಲ್ಲೇ ಹೋಟೆಲ್ ವೈಟರ್ ಮುಖಕ್ಕೆ ಹೊಡೆದ ವ್ಯಕ್ತಿ ; ವಿಡಿಯೋ ವೈರಲ್
ಫುಡ್ ಸರ್ವ್ ಮಾಡುತ್ತಿರುವಾಗಲೇ ಏಕಾಏಕಿ ತಿನ್ನುವ ತಟ್ಟೆಯಲ್ಲೇ ಮಹಿಳಾ ವೈಟರ್ ಮುಖಕ್ಕೆ ಹೊಡೆದಿದ್ದಾನೆ. ಘಟನೆಯ ಹಿಂದಿನ ನಿಖರವಾದ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ರೆಸ್ಟೋರೆಂಟ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಂಡನ್: ವ್ಯಕ್ತಿಯೊಬ್ಬ ತಿನ್ನುವ ತಟ್ಟೆಯಲ್ಲೇ ಹೋಟೆಲ್ ಮಹಿಳಾ ವೈಟರ್ ಮುಖಕ್ಕೆ ಹೊಡೆದ ಘಟನೆ ಲಂಡನ್‌ನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ರೆಸ್ಟೋರೆಂಟ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ರೆಸ್ಟೋರೆಂಟ್ಗೆ ಬಂದಿದ್ದು, ವೈಟರ್ ಫುಡ್ ಸರ್ವ್ ಮಾಡುತ್ತಿರುವಾಗಲೇ ಏಕಾಏಕಿ ತಿನ್ನುವ ತಟ್ಟೆಯಲ್ಲೇ ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಘಟನೆಯ ಹಿಂದಿನ ನಿಖರವಾದ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ.
@BLAIMGame ಎನ್ನುವ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಆಗಸ್ಟ್ 21ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 15.5 ಮಿಲಿಯನ್ ಅಂದರೆ ಒಂದು ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Hi @NandosUK the below incident happened in your Stratford outlet yesterday. Can you confirm that the assault has been reported to the police and your member of staff has received the support she deserves? pic.twitter.com/LUBCmg6MzU
— BLAIM GAME (@BLAIMGame) August 21, 2024
ಇದನ್ನೂ ಓದಿ: ಹೋಮ್‌ವರ್ಕ್ ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಿವಿ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದ ಶಿಕ್ಷಕ
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಉದ್ಯೋಗಿಯ ಮೇಲೆ ತನ್ನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೋಪದಿಂದ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಈ ಘಟನೆಯು ಲಂಡನ್‌ನ ಸ್ಟ್ರಾಟ್‌ಫೋರ್ಡ್‌ನಲ್ಲಿರುವ ನಂಡೋಸ್ ಹೆಸರಿನ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಮಹಿಳಾ ಸಿಬ್ಬಂದಿಗೆ ರಕ್ಷಣೆ ಎಲ್ಲಿದೆ? ಆತನಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ