Viral Video: ಟೋಪಿ ಧರಿಸಿಕೊಂಡು ಮುದ್ದಾಗಿ ಕಾಣುವ ಇಲಿಯ ವಿಡಿಯೋ ವೈರಲ್

ಇನ್​ಸ್ಟಾಗ್ರಾಮ್​ ಪ್ರತಿವಾರ ಅಡಿಯಲ್ಲಿ ಸರಣಿ  ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ. ವೀಡಿಯೊದಲ್ಲಿ ವಿವಿಧ ಸಾಕುಪ್ರಾಣಿಗಳ ವರ್ತನೆಗಳನ್ನು ತೋರಿಸುತ್ತವೆ. ಈ ವಾರ ಫಿಲ್ಲಿ ಎಂಬ ಚಿಂಚಿಲ್ಲಾ ಎಂಬ ಹೆಸರಿನ ಇಲಿಯ ವಿಡಿಯೋ ಜನರ ಮನ ಗೆಲ್ಲುತ್ತಿದೆ.

Viral Video: ಟೋಪಿ ಧರಿಸಿಕೊಂಡು ಮುದ್ದಾಗಿ ಕಾಣುವ ಇಲಿಯ ವಿಡಿಯೋ ವೈರಲ್
ವೈರಲ್ ಆದ ಇಲಿ
Updated By: ವಿವೇಕ ಬಿರಾದಾರ

Updated on: May 29, 2022 | 2:02 PM

ಸಾಕು ಪ್ರಾಣಿಗಳ ತುಂಟಾಟ ನೋಡುವುದೇ ಚಂದ. ಅವು ಮಾಡವ ಕೀಟಲೆಯನ್ನು ನೋಡಲು ಚೆನ್ನಾಗಿರುತ್ತದೆ. ಹಾಗೇ ಸಾಕು ಪ್ರಾಣಿಗಳೊಂದಿಗೆ ಆಡುವುದು ಮತ್ತು ಅವುಗಳಿಗೆ ಬಟ್ಟೆ ಹಾಕುವುದು ಒಂದು ರೀತಿ ಮನೆಯ ಸದಸ್ಯನಂತೆ ಅವುಗಳನ್ನು ಆರೈಕೆ ಮಾಡಲಾಗುತ್ತದೆ.  ಹೀಗೆ ಕಳೆದ ಕೆಲವು ಗಂಟೆಗಳಿಂದ ಒಂದು ಇಲಿಯ ವಿಡಿಯೋ ಸಾಮಾಜಿಕ ಜಾಲತಾಣ (ಇನ್​ಸ್ಟಾಗ್ರಾಮ್​) ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದು ಸಾಕಷ್ಟು ಲೈಕ್ ಮತ್ತು ಕಾಮೆಂಟ್​ಗಳನ್ನು ಪಡೆದುಕೊಂಡಿದೆ.  ನೀವು ಕೂಡಾ ಆ ವಿಡಿಯೋವನ್ನು ನೋಡಬಹುದಾಗಿದೆ. ಇನ್​ಸ್ಟಾಗ್ರಾಮ್​ (Instagram) ಪ್ರತಿವಾರ #WeeklyFluff ಅಡಿಯಲ್ಲಿ ಸರಣಿ  ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ. ವೀಡಿಯೊದಲ್ಲಿ ವಿವಿಧ ಸಾಕುಪ್ರಾಣಿಗಳ ವರ್ತನೆಗಳನ್ನು ತೋರಿಸುತ್ತವೆ. ಈ ವಾರ ಫಿಲ್ಲಿ ಎಂಬ ಚಿಂಚಿಲ್ಲಾ ಎಂಬ ಹೆಸರಿನ ಇಲಿಯ ವಿಡಿಯೋ ಜನರ ಮನ ಗೆಲ್ಲುತ್ತಿದೆ.

ಇದನ್ನು ಓದಿ: ಆಧುನಿಕ ಶಕುಂತಲಾ ಕಥನ: ಗಂಡು ಹುಟ್ಟಿದ್ದರೆ ಹತ್ತು ರೂಪಾಯಿ, ಹೆಣ್ಣು ಹುಟ್ಟಿದ್ದರೆ ಐದು ರೂಪಾಯಿ

ಇದನ್ನು ಓದಿ: ಸ್ಟೋನ್‌ಹೆಂಜ್ ನಿರ್ಮಿಸಿದ ಜನರು ತಿನ್ನುತ್ತಿದ್ದ ಪರಾವಲಂಬಿ ಹುಳುಗಳ ಮೊಟ್ಟೆಗಳನ್ನು ಪತ್ತೆಹಚ್ಚಿದ ಪುರಾತತ್ತ್ವ ಶಾಸ್ತ್ರಜ್ಞರು

ವಿಡಿಯೋದಲ್ಲಿರುವ ಚಿಂಚಿಲ್ಲಾ (ChinCHILLIN) ಇಲಿ ತುಂಬಾ ಮುದ್ದಾಗಿದ್ದು, ಅದರ ಮಾಲಿಕರು ಅದನ್ನು ಒಂದು ಸೋಫಾ ಮೇಲೆ ಕೂಡಿಸಿ ಅದಕ್ಕೆ ಟೋಪಿ ಹಾಕಿ ಅದರ ಬಾಯಿಯಲ್ಲಿ ಕೆಲವು ಸಾಲುಗಳು ಬರೆದ ಚೀಟಿಯನ್ನು ಇಡುತ್ತಾರೆ. ಆ ಚೀಟಿಯಲ್ಲಿ ನೀವು ಚಿಂಚಿಲ್​ನನ್ನು ಮುದ್ದಾಡಲು ಮತ್ತು ಅದರೊಂದಿಗೆ ಸಂವಹನ ಮಾಡಲು ಬಯಸುವಿರಾ?” ಎಂದು ಬರೆದಿವೆ.

ಅದನ್ನು ಹಿಡಿದುಕೊಂಡ ಇಲಿ ಸುಮ್ಮನೆ ಕೂಡುತ್ತದೆ. ಸಾಕಷ್ಟು ಮುದ್ದಾಗಿ ಕಾಣುತ್ತದೆ. ಈ ವಿಡಿಯೋವನ್ನು ಹಂಚಿಕೊಂಡವರು ಕೆಳಗಡೆ ಕೆಲವು ಸಾಲುಗಳನ್ನು ಬರೆದಿರುತ್ತಾರೆ “ಚಿಂಚಿಲ್ಲಾಗಳು ಸಾಮಾನ್ಯವಾಗಿ ಅವರು ವಿಷಯವನ್ನು ಹೇಳಿದಾಗ ಅಥವಾ ತಮ್ಮ ಮಾಲೀಕರಿಂದ ಸಂವಹನವನ್ನು ಒಪ್ಪಿಕೊಂಡಾಗ ಕಣ್ಣು ಮಿಟುಕಿಸುತ್ತಾರೆ. ಅವರ ಆಗಾಗ್ಗೆ ಕಣ್ಣು ಮಿಟುಕಿಸುವುದು ನಾವು ರೂಪಿಸಿದ ಬಂಧದ ಫಲಿತಾಂಶವಾಗಿದೆ, ”ಎಂದು ವೀಡಿಯೊದೊಂದಿಗೆ ಪೋಸ್ಟ್ ಮಾಡಿದ ಶೀರ್ಷಿಕೆಯಲ್ಲಿ ಹೇಳಲಾಗಿದೆ. .

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sun, 29 May 22