Trending : ಈ ನಾಯಿಯ ಹುಟ್ಟುಹಬ್ಬದ ಥೀಮ್ ಹೇಗಿದೆ?

| Updated By: ಶ್ರೀದೇವಿ ಕಳಸದ

Updated on: Sep 03, 2022 | 12:24 PM

Birthday Theme : ತಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನೂ ಥೀಮ್​ನಡಿ ಸಂಭ್ರಮಿಸುವ ಟ್ರೆಂಡ್​ ಈಗ ಚಾಲ್ತಿಯಲ್ಲಿದೆ. ಪ್ರೀತಿಸುವವರಿಗೆ ಮಕ್ಕಳಾದರೇನು, ಪ್ರಾಣಿಗಳಾದರೇನು? ಎಲ್ಲವೂ ಒಂದೇ ಅಲ್ಲವೆ?

Trending : ಈ ನಾಯಿಯ ಹುಟ್ಟುಹಬ್ಬದ ಥೀಮ್ ಹೇಗಿದೆ?
ಹೇಗಿದೆ ನನ್ನ ಬರ್ತಡೇ ಥೀಮ್​ ಅಂತಿದೆ ಈ ನಾಯಿ
Follow us on

Trending : ನಮ್ಮವು, ನಮ್ಮ ಮಕ್ಕಳು ಎಂದು ನೋಡಿಕೊಳ್ಳುವ ಪೋಷಕರಿಗೆ ಬೆಕ್ಕು, ನಾಯಿಗಳ ಹುಟ್ಟುಹಬ್ಬವನ್ನು ಹೇಗೆ ವಿಶೇಷವಾಗಿ ಆಚರಿಸಬೇಕು ಎನ್ನುವ ಆಲೋಚನೆ ಇರದಿದ್ದೀತೆ? ಈಗಂತೂ ಮುದ್ದು ಬೆಕ್ಕು ನಾಯಿಗಳ ಬರ್ತಡೇ ಆಚರಿಸುವುದು ಅವುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಚಾಲ್ತಿಯಲ್ಲಿರುವ ಟ್ರೆಂಡ್. ಏಕೆಂದರೆ ಲಾಕ್​ಡೌನ್​ ಶುರುವಾಗುತ್ತಿದ್ದ ಹಾಗೆ ಜೀವನವೇ ಆನ್​ಲೈನ್​ಮಯ ಆಗಿಹೋಯ್ತು. ಅದರಲ್ಲೂ ನಾಯಿಬೆಕ್ಕುಗಳಿಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೇಜ್​ಗಳನ್ನು ನಿರ್ವಹಿಸುವವರ ಸಂಖ್ಯೆಯಂತೂ ಮಿಲಿಯಗಟ್ಟಲೆ ಮೀರಿದೆ. ನಿತ್ಯವೂ ಮಕ್ಕಳಂತೆ ಅವುಗಳನ್ನು ಪೋಷಿಸುವುದು. ಒಂದೊಂದು ವಿಡಿಯೋ ಅನ್ನು ಅಷ್ಟೇ ಶ್ರದ್ಧೆಯಿಂದ ಅಪ್​ಲೋಡ್ ಮಾಡುವುದು. ಬೆಳವಣಿಗೆಯನ್ನೆಲ್ಲ ದಾಖಲಿಸುವುದು. ಬದುಕು ಕೊಡುವ ಏರಿಳಿತಗಳನ್ನೆಲ್ಲ ಪ್ರಾಣಿಗಳನ್ನು ಪ್ರೀತಿಸುವುದರ ಮೂಲಕ ಹೀಗೆ ಇಲ್ಲಿ ಸಮದೂಗಿಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಈಗಿಲ್ಲಿ ಕ್ರಿಸ್ಟಲ್​ ಎಂಬ ಟ್ವಿಟರಲ್​ ಪುಟದಲ್ಲಿ ಇರುವ ಮುದ್ದಿನ ನಾಯಿಗೆ ಎರಡನೇ ಹುಟ್ಟುಹಬ್ಬದ ಸಂತಸ. ಈ ಫೋಟೋಗಳು ವೈರಲ್ ಆಗಿವೆ. ಯಾಕೆ? ನೀವೇ ನೋಡಿ.

ನಾಯಿ ಧರಿಸಿರುವ ಆ ಬಟ್ಟೆಯ ವಿನ್ಯಾಸ ಗಮನಿಸಿ. ಬರ್ತಡೇ ಥೀಮ್​ ಗಮನಿಸಿ. ಈ ಮೂಲಕ ಅದರ ಪೋಷಕರ ಅಭಿರುಚಿಯನ್ನೂ ಗ್ರಹಿಸಬಹುದು. ಬಝ್​ ಲೈಟ್​ಇಯರ್ ಕಾಸ್ಟ್ಯೂಮ್ ಅನ್ನು ಅದು ಧರಿಸಿದೆ. ಈ ಪೋಸ್ಟ್​, ನಾಯಿಯನ್ನು ಸಾಕಿದ ಇತರರಿಂದ ಸಾಕಷ್ಟು ಲೈಕ್ಸ್​, ಕಮೆಂಟ್​ಗಳನ್ನು ಪಡೆಯುತ್ತಿದೆ. ಆಗಸ್ಟ್ 29ರಂದು ಮಾಡಿದ ಪೋಸ್ಟ್​ ಸುಮಾರು 20,000 ಲೈಕ್ಸ್​, 14,000 ರೀಟ್ವೀಟ್ ಪಡೆದಿದೆ.

ನೀವು ನಿಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಹೇಗೆ, ಯಾವ ಥೀಮ್​ನಲ್ಲಿ ಆಚರಿಸಬೇಕು ಎಂದು ಯೋಚಿಸುತ್ತಿದ್ದೀರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Sat, 3 September 22